ಕುಂದುವಾಡ ಕೆರೆ ಅಭಿವೃದ್ಧಿ ವೀಕ್ಷಣೆ
Team Udayavani, Mar 4, 2017, 1:11 PM IST
ದಾವಣಗೆರೆ: ರಾಣಿಬೆನ್ನೂರಿನ ಗಂಗಾಜಲ ದೊಡ್ಡಕೆರೆ ಸೌಂದಯೀಕರಣ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ವಿಧಾನ ಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಶುಕ್ರವಾರ ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಶನ್ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಭಯ ಕೆರೆಗಳ ಭೇಟಿ ವೇಳೆ ಅವರು, ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ಮುಖ್ಯ ಇಂಜಿನಿಯರ್ ಸತೀಶ್ ಇತರರಿಂದ ಕೆರೆಗಳ ವಿಸೀರ್ಣ, ಅಭಿವೃದ್ಧಿಪಡಿಸಿದ ಬಗೆ, ನೀರು ಸಂಗ್ರಹಣಾ ಸಾಮರ್ಥ್ಯ, ನೀರಿನ ಮೂಲ, ಕುಂದುವಾಡ ಕೆರೆಯ ಮಧ್ಯೆದಲ್ಲಿರುವ ನಡುಗಡ್ಡೆ, ಕಾರಂಜಿ… ಹೀಗೆ ಪ್ರತಿಯೊಂದರ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ಭದ್ರಾ ನಾಲೆಯಿಂದ ಕುಂದುವಾಡ ಹಾಗೂ ಟಿವಿ ಸ್ಟೇಷನ್ ಕೆರೆ ತುಂಬಿಸಿಕೊಳ್ಳಲಾಗುವುದು. ಈ ಬಾರಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಆದರೂ, ಸಾರ್ವಜನಿಕರಿಗೆ ಸಮಸ್ಯೆ ಎದುರಾಗದಂತೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಎಚ್. ನಾರಾಯಣಪ್ಪ ಸ್ಪೀಕರ ಗಮನಕ್ಕೆ ತಂದರು.
ಕುಂದುವಾಡ ಕೆರೆ ಒಟ್ಟಾರೆ 256 ಎಕರೆ ವಿಸೀ¤ರ್ಣ, 4.6 ಕಿಲೋ ಮೀಟರ್ ಸುತ್ತಳತೆ ಹೊಂದಿದೆ. ಕೆರೆಯಲ್ಲಿನ ಹೂಳು ತೆಗೆದು ಸಂದರ್ಭದಲ್ಲಿ ನಡುಗಡ್ಡೆ ನಿರ್ಮಿಸುವ ವಿಚಾರ ಹೊಳೆಯಿತು. ಈಚೆಗೆ ಫ್ಲೋಟಿಂಗ್ ಕಾರಂಜಿ ಪ್ರಾರಂಭಿಸಲಾಗಿದೆ. ಕೆರೆಯ ನೀರನ್ನು ಕುಡಿಯುವುದಕ್ಕೆ ಬಳಸುವುದರಿಂದ ಬೋಟಿಂಗ್ಗೆ ಅವಕಾಶ ನೀಡಲಾಗಿಲ್ಲ ಎಂದು ಆಯುಕ್ತರು ಮಾಹಿತಿ ನೀಡಿದರು.
ದಾವಣಗೆರೆಗೆ 482 ಕೋಟಿ ಅನುದಾನದ ಜಲಸಿರಿ ಯೋಜನೆ ಮಂಜೂರಾಗಿದ್ದು, 24+7 ಮಾದರಿಯಲ್ಲಿ ನೀರು ಪೂರೈಸಲಾಗುವುದು. ಈಗ ನಗರದಲ್ಲಿರುವ 30 ಓವರ್ಹೆಡ್ ಟ್ಯಾಂಕ್ಗಳ ಜೊತೆಗೆ ಇನ್ನೂ 20 ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿವೆ. ಪೈಪ್ಲೈನ್ ಮತ್ತಿತರ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಕೊಳವೆಬಾವಿಗಳಿವೆ.
ಮಾರ್ಚ್ನಿಂದ ಮೇ ತಿಂಗಳವರೆಗೆ ಕುಡಿಯುವ ನೀರು ಪೂರೈಕೆಗೆ ಅವುಗಳನ್ನು ಮೀಸಲಿಡಲಾಗುವುದು. ಜಲಸಿರಿ ಯೋಜನೆ ಪೂರ್ಣಗೊಂಡ ನಂತರ 24+7 ಮಾದರಿ ನೀರು ಪೂರೈಸಲಾಗುವುದು ಎಂದು ಅವರು ತಿಳಿಸಿದರು. ಟಿವಿ ಸ್ಟೇಷನ್ ಕೆರೆ ವೀಕ್ಷಣೆಗೆ ತೆರಳುವು ಮುನ್ನ ಕುಂದುವಾಡ ಕೆರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕೋಳಿವಾಡ, ರಾಣಿಬೆನ್ನೂರಿನ 259 ಎಕರೆ ವ್ಯಾಪ್ತಿಯ ಗಂಗಾಜಲ ದೊಡ್ಡಕೆರೆ ಸೌಂದಯೀìಕರಣಕ್ಕೆ 30 ಕೋಟಿ ಮಂಜೂರಾಗಿದೆ.
ಕೆರೆಯ ಸೌಂದಯೀìಕರಣ, ವಾಯುವಿಹಾರ, ಮಕ್ಕಳಿಗೆ ಮನೋರಂಜನಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ ಕುಂದುವಾಡ, ಟಿವಿ ಸ್ಟೇಷನ್ ಕೆರೆ ವೀಕ್ಷಿಸಲು ಬಂದಿರುವುದಾಗಿ ಹೇಳಿದರು. ಕುಡಿಯುವ ನೀರಿನ ಯೋಜನೆಗೆ ಪ್ರತ್ಯೇಕವಾಗಿ 100 ಕೋಟಿ ಅನುದಾನ ಮಂಜೂರಾಗಿದೆ. ತುಂಗಭದ್ರಾ ನದಿ, ನಾಲೆಯ ಮೂಲಕ ನೀರು ತುಂಬಿಸಿಕೊಳ್ಳಲಾಗುವುದು. ರಾಣಿಬೆನ್ನೂರು, ಬ್ಯಾಡಗಿ, ದಾವಣಗೆರೆಗೆ 24ಹಿ7 ನೀರು ಪೂರೈಕೆಯ ಯೋಜನೆ ಸಂಬಂಧ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Pakistan: ಬಲೂಚ್ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ
YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್ ಅಂಕುಶ್”ಡಿಜಿಟಲ್ ಅರೆಸ್ಟ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.