ಕೆರೆಗಳು ಮನುಷ್ಯನ ಜೀವನಾಡಿ: ತರಳಬಾಳು ಶ್ರೀ


Team Udayavani, Oct 23, 2017, 2:45 PM IST

23-44.jpg

ಮಾಯಕೊಂಡ: ಯಾವುದೇ ಒಂದು ವಸ್ತುವಿನ ಸಂಬಂಧದ ಮಹತ್ವ ಕಳೆದು ಹೋಗುವ ಮುನ್ನವೇ ಯೋಚನೆ ಮಾಡಿದರೆ ನಮಗೆ ಅದರ ಮಹತ್ವದ ಗುಣ ಸಿಗುತ್ತದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಆನಗೊಡು ಹೋಬಳಿಯ ಸುಲ್ತಾನಪುರ, ಈಚಘಟ್ಟ ಕೆರೆಗಳಿಗೆ ಬಾಗಿನ, ಗಂಗಾಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಕೆರೆಗಳು ಮನುಷ್ಯನ ಜೀವನಾಡಿಗಳು. ಕಳೆದ ವರ್ಷದಲ್ಲಿ ಲಕ್ಷಾಂತರ ಖರ್ಚು ಮಾಡಿ ತೋಟಗಳನ್ನು ರಕ್ಷಣೆ ಮಾಡಿದ ಹಾಗೆ ನೀರನ್ನು ಸಹ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧ ಸರಿಯಾಗಿ ಇಲ್ಲದ ಕಾರಣ ನಮಗೆ ಕಷ್ಟಗಳು ಎದುರಾಗಿವೆ ಎಂದು ಹೇಳಿದರು.

ಮನೆಗಳಲ್ಲಿ ಶೌಚಲಯಗಳನ್ನು ಬಳಸಿ, ಕೆರೆಗಳ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನೀರನ್ನೂ ಎಚ್ಚರಿಕೆಯಿಂದ ಬಳಸಬೇಕು. ಮನೆಯ ನಲ್ಲಿಗಳಲ್ಲಿ ನೀರಿನ ಬದಲು ಮದ್ಯ ಬರುತ್ತಿದ್ದರೆ, ಹನಿಯನ್ನೂ ಕೆಳಗೆ ಚೆಲ್ಲಲು ಬಿಡುತ್ತಿರಲಿಲ್ಲ. ಆದರೆ ನೀರು ಚರಂಡಿಯಲ್ಲಿ ಹರಿಯುತ್ತಿದ್ದರೂ ನಾವುಗಳು ತಿಳಿಯದಂತೆ ಇರುತ್ತೇವೆ. ದೇವರ ಹಾಗೂ ಮನುಷ್ಯ ಪ್ರಯತ್ನದಿಂದ ಇಂದು ಕೆರೆಗಳು ಮೈದುಂಬಿ ಹರಿಯುತ್ತಿವೆ ಎಂದು ಹೇಳಿದರು. ಕೆರೆ ಏರಿ ಕೆಲಸ ಬಾಕಿ ಇದೆ. ಕೆರೆಯ
ಕೋಡಿಯನ್ನು ಇನೂ ಒಂದು ಅಡಿ ಎತ್ತರಿಸಬೇಕು. ಇದರಿಂದ ನೀರಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಈಚಘಟ್ಟ ಗ್ರಾಮಸ್ಥರು ಶ್ರೀಗಳಲ್ಲಿ ಮನವಿ ಮಾಡಿದರು. ಕೆರೆ ಉಸ್ತುವರಿ ಸಮಿತಿ ರಚನೆ ಮಾಡಿಕೊಂಡು ನನ್ನ ಬಳಿ ಬನ್ನಿ ಎಂದು ಶ್ರೀಗಳು ತಿಳಿಸಿದರು.

ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಮಾತನಾಡಿ, ಕೆರೆಯ ಕೆಲಸವನ್ನು ಶೀಘ್ರವಾಗಿ ಮಾಡಿಸಲಾಗುವುದು. ಕೆರೆ ತುಂಬಿರುವುದರಿಂದ ಈ ಭಾಗದ ರೈತರಿಗೆ ಕುಡಿಯುವ ನೀರು, ನೀರಾವರಿ ಕೊಳವೆಬಾವಿಗಳಿಗೆ ವರದಾನವಾಗಿ ಪರಿಣಮಿಸಿದೆ. ಗ್ರಾಮಸ್ಥರು ಸಮಿತಿ ಮಾಡಿಕೊಂಡು ನೀರನ್ನು ನಿರ್ವಹಣೆ ಮಾಡಿ ಎಂದು ಸೂಚಿಸಿದರು.

ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಕೆರೆಗೆ ನೀರು ತುಂಬಿಸುವ ಹೋರಾಟ ಬಿಜೆಪಿ, ಜೆಡಿಎಸ್‌ ಸಮ್ಮಿಶ್ರ
ಸರ್ಕಾರವಿದ್ದ ಸಂದರ್ಭದಲ್ಲಿ 2006ರಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ತುಪ್ಪದಹಳ್ಳಿ, ಅಣಜಿ, ಕಂದನಕೋವಿ ಮೂರು ಕೆರೆಗಳನ್ನು ತುಂಬಿಸುವಂತೆ ಮಂಜುನಾಥ ಗೌಡರು ಇನ್ನೂ ಹಲವು ಮುಖಂಡರುಗಳು ಹೋರಾಟ ಮಾಡಿದ ಪ್ರತಿಫಲ ಹಾಗೂ ಶ್ರೀಗಳ ಇಚ್ಛಾಶಕ್ತಿಯಿಂದ 22  ಕೆರೆಗಳಿಗೆ ನೀರು ತುಂಬುವಂತಾಗಿದೆ ಎಂದರು.

ಮಾಜಿ ಶಾಸಕ ಬಸವರಾಜ ನಾಯ್ಕ, ಆನಗೊಡು ಜಿಪಂ ಸದಸ್ಯ ಕೆ.ಎಸ್‌. ಬಸವಂತಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌, ಗ್ರಾಪಂ ಅಧ್ಯಕ್ಷೆ ಅಕ್ಕಮಹಾದೇವಿ, ಬಿಜೆಪಿ ಮುಖಂಡರಾದ ಎಚ್‌. ಆನಂದಪ್ಪ, ವಿ.ವೆಂಕಟಪ್ಪ, ಎಚ್‌.ಕೆ. ಬಸವರಾಜ್‌, 22 ಕೆರೆ ಏತ ನೀರವಾರಿ ಹೋರಟ ಸಮಿತಿ ಅಧ್ಯಕ್ಷ ಡಾ| ಮಂಜುನಾಥ ಗೌಡ, ಗಂಗನಕಟ್ಟೆ ಸಂಗಣ್ಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.