ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೂಮಿಪೂಜೆ
Team Udayavani, May 22, 2021, 10:14 AM IST
ಹೊನ್ನಾಳಿ: ಕೋವಿಡ್ ಸೋಂಕಿತರಿಗೆ ಅನುಕೂಲವಾಗಲು ಆಸ್ಪತ್ರೆಯಆವರಣದಲ್ಲೇ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಿಸಲಾಗುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕು ಆಸ್ಪತ್ರೆ ಆವರಣದಲ್ಲಿ ರೂ.1 ಕೋಟಿ ವೆಚ್ಚದ ಆಕ್ಸಿಜನ್‌ಉತ್ಪಾದನಾ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು,ಕಳೆದ ಕೆಲ ದಿನಗಳಿಂದ ತಾಲೂಕುಆಸ್ಪತ್ರೆಯಲ್ಲಿ ನಿತ್ಯ ಆಕ್ಸಿಜನ್ ಸಿಲಿಂಡರ್‌ಸಮಸ್ಯೆಯಾಗುತ್ತಿದ್ದು, ಕೋವಿಡ್ ಸೋಂಕಿತರು ಸಾಕಷ್ಟು ತೊಂದರೆ ಅನುಭವಿಸ ಬೇಕಾಗಿತ್ತಲ್ಲದೆ ನಿತ್ಯ ನಾನೇ ಖುದ್ದು ಹರಿಹರ, ಭದ್ರಾವತಿಗೆ ತೆರಳಿ ಆಕ್ಸಿಜನ್ ಸಿಲಿಂಡರ್ ತಂದು ಕೋವಿಡ್ ಸೋಂಕಿತರ ಆತಂಕ ದೂರ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.
ಆರಂಭದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕೇವಲ 17 ಸಿಲಿಂಡರ್ ಮಾತ್ರ ಇದ್ದು,ಇದೀಗ ಅವುಗಳನ್ನು 70ಕ್ಕೆ ಏರಿಕೆಮಾಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಆಕ್ಸಿಜನ್‌ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅನುಕೂಲವಾಗಿದೆ ಎಂದರು.
ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಹೊನ್ನಾಳಿಯಲ್ಲಿ ಕೆಆರ್‌ಐಡಿಎಲ್ ನಿಂದ ಸಿಎಸ್‌ಆರ್ ಫಂಡ್‌ಬಳಸಿಕೊಂಡು ಆಕ್ಸಿಜನ್ ಉತ್ಪಾದನಾಘಟಕವನ್ನು ಸ್ಥಾಪಿಸಲಾಗುತ್ತಿದೆ. ಇನ್ನು 20ದಿನಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದರು.
ಈ ಆಕ್ಸಿಜನ್ ಘಟಕದಿಂದ ಶಾಶ್ವತವಾಗಿ ನೂರು ಹಾಸಿಗೆಗಳಿಗೆ ಆಕ್ಸಿಜನ್ ನೀಡ ಬಹುದಾಗಿದೆ. ಇಲ್ಲಿಂದ ಬೇರೆಕಡೆಗೂ ಆಕ್ಸಿಜನ್ ತೆಗೆದುಕೊಂಡುಹೋಗಬಹುದು ಎಂದ ಅವರು,ರಾಜ್ಯದಲ್ಲಿ ಮೂರನೇ ಅಲೆ ಬೇರೆ ಇದ್ದು, ಜನರನ್ನು ರಕ್ಷಣೆ ಮಾಡಬೇಕಾಗಿದ್ದು,ನಮ್ಮ ಕರ್ತವ್ಯವಾಗಿದೆ. ವೈರಸ್‌ನ್ನು ಸಂಪೂರ್ಣವಾಗಿ ನಿರ್ನಾಮಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಗಂಗಾಧರ್ ಸ್ವಾಮಿ, ಡಾ.ಪ್ರಶಾಂತ್, ರಾಜಣ್ಣ, ವಿಶ್ವನಾಥ್, ಕೆಂಚಪ್ಪ,ಡಾ.ಸುದೀಪ್, ಡಾ.ಸಂತೋಷ್, ಡಾ.ಲೀಲಾವತಿ, ಪಿಎಸ್‌ಐ ಬಸವನಗೌಡಬಿರಾದರ್, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.