ಹೋಳಿ ಬಣ್ಣಗಳಂತೆ ಎಲ್ಲರ ಬದುಕು ವರ್ಣರಂಜಿತವಾಗಲಿ: ಶ್ರೀ
Team Udayavani, Mar 22, 2019, 6:21 AM IST
ದಾವಣಗೆರೆ: ಕಾಮದಹನ ಎಂದರೆ ಕೇವಲ ಪ್ರತಿಮೆ ಸುಟ್ಟುಹಾಕುವುದಲ್ಲ. ನಮ್ಮಲ್ಲಿರುವ ಎಲ್ಲಾ ಕೆಟ್ಟಗುಣಗಳನ್ನು ಸುಟ್ಟುಹಾಕುವ ಸಂಕೇತ ಎಂದು ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದ್ದಾರೆ.
ಗುರುವಾರ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಯೋಜಿಸಲಾಗಿದ್ದ 220ನೇ ಹೋಳಿ ಹುಣ್ಣಿಮೆಯ ಶಿವಾನುಭವಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೋಳಿ ಓಕಳಿ ಬಣ್ಣಗಳನ್ನು ಎರಚುವ ವರ್ಣರಂಜಿತ ಹಬ್ಬ. ನಮ್ಮೆಲ್ಲರ ಬದುಕು ಸಹ ಹಾಗೆಯೇ ವರ್ಣರಂಜಿತವಾಗಿರಲಿ ಎಂದು ಆಶಿಸಿದರು.
ಇಂದಿನ ವಿಭಿನ್ನ ವಾತಾವರಣದಲ್ಲಿ ಎಲ್ಲಾ ಜಂಜಾಟಗಳನ್ನು ಬದಿಗಿರಿಸಿ ಉತ್ತಮ ಬದುಕು ಸಾಗಿಸಬೇಕಿದೆ. ನೆಮ್ಮದಿ, ಸಹಬಾಳ್ವೆ, ಸೌಹಾರ್ದತೆ ಜೊತೆ ಆದರ್ಶವಾದ ಬದುಕನ್ನು ನಡೆಸುವ ಮೂಲಕ ದೇವರು ನೀಡಿದ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಬೇಕು ಎಂದು ತಿಳಿಸಿದರು.
ವರ್ಣಮಯ ದೃಷ್ಟಿಯಿಂದ ನೋಡಿದಾಗ ಮಾತ್ರ ಬದುಕು ವರ್ಣರಂಜಿತವಾಗುವ ಮೂಲಕ ಎಲ್ಲರ ಹಿತವನ್ನು ಬಯಸುತ್ತದೆ. ಮಾತ್ರವಲ್ಲ ಆಧ್ಯಾತ್ಮಿಕ ಚಿಂತನೆಯ ನೆಲಗಟ್ಟಿನಲ್ಲಿ ಚಿಂತಿಸುವ ದೃಷ್ಟಿಕೋನದಲ್ಲಿ ಸಾಗಬೇಕಿದೆ ಎಂದು ಹೇಳಿದರು.
ಪುಟ್ಟರಾಜ ಗವಾಯಿಗಳು ಇಂದು ಇಲ್ಲದಿದ್ದರೂ ಅವರ ಚೇತನ ಗದ್ದುಗೆ ರೂಪದಲ್ಲಿ ಇಲ್ಲಿದೆ. ಆವರ ಪ್ರೇರಣೆ ಇಲ್ಲದೇ ಯಾವುದೇ ಒಂದು ಕಡ್ಡಿ ಅಲುಗಾಡಲು ಸಾಧ್ಯವಿಲ್ಲ. ಅವರ ಆಶಿರ್ವಾದವೇ ಇಂತಹ ಎಲ್ಲಾ ಕಾರ್ಯಕ್ರಮಗಳಿಗೆ ಕಾರಣ ಎಂದರು.
ಮಹಾನಗರ ಪಾಲಿಕೆ ಸದಸ್ಯ ಎಚ್.ಜಿ. ಉಮೇಶ್ ಮಾತನಾಡಿ, ಧರ್ಮಕಾರ್ಯಗಳಲ್ಲಿ ಪುಟ್ಟರಾಜಗವಾಯಿ ಮಠ ವಿಶ್ವ ಖ್ಯಾತಿ ಹೊಂದಿದೆ. ನಮ್ಮ ಭಾಗದಲ್ಲಿ ಶಾಖೆ ಇರುವುದು. ಅದರಲ್ಲೂ ಸಂಗೀತ ಸೇವೆ ನೀಡುವ ಮೂಲಕ ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಸ್ಥಳ ಪ್ರವಾಸೋದ್ಯಮ ತಾಣವಾಗಬೇಕಿದೆ. ರಾಷ್ಟ್ರಿಯ ಹೆದ್ದಾರಿ ಸಮೀಪದಲ್ಲೇ ಇರುವ ಆಶ್ರಮ ಪ್ರಯಾಣಿಕರಿಗೆ ಆಶ್ರಯತಾಣವಾಗಲಿ. ಅದೇ ರೀತಿ ಪ್ರಯಾಣಿಕರು ಮಠದ ಅಭಿವೃದ್ಧಿ ಗೆ ಶ್ರಮಿಸಲಿ ಎಂದರು.
ನೂತನ ಶಿಲಾಮಂಟಪದ ತುಲಾಭಾರ ದಾನಿಗಳಾದ ಆರ್. ಲಲಿತಮ್ಮ, ರುದ್ರಯ್ಯ, ಆರ್. ರಾಜಶೇಖರ್, ಮಂಜುಳಮ್ಮ, ಜನತಾ ವಿದ್ಯಾಲಯದ ಉಮೇಶ್, ಟಿ.ಕೆ. ಕರಿಬಸಪ್ಪ, ವಸಂತಮ್ಮ, ಟಿ.ಕೆ. ವೀರಣ್ಣ, ಉಮಾ, ನಂದಿನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.