ಸರ್ಕಾರಗಳು ಜನರಿಗೆ ದುಡಿಯುವ ಮಾರ್ಗ ತೋರಿಸಲಿ; ಡಾ| ಶ್ರೀ ಗುರುಬಸವ ಸ್ವಾಮೀಜಿ
ನಮ್ಮ ವಿದ್ಯೆಯನ್ನು ಕಲಿತ ವಿದೇಶಿಗಳು ಅಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
Team Udayavani, Apr 19, 2022, 5:35 PM IST
ದಾವಣಗೆರೆ: ಸರ್ಕಾರಗಳು ಯುವ ಪೀಳಿಗೆ ಬಾಳಿಗೆ ಬೆಳಕು ನೀಡುವ ಕೆಲಸ ಮಾಡಬೇಕು ಎಂದು ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದ ಡಾ| ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.
ಸೋಮವಾರ ಕುವೆಂಪು ಕನ್ನಡ ಭವನದಲ್ಲಿ ರಾಜ್ಯ ಗಿಡಮೂಲಿಕಾ ಪ್ರಾಧಿಕಾರ, ಜೀವ ವೈವಿಧ್ಯ ಮಂಡಳಿ, ಪಾಂರಪರಿಕ ವೈದ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಔಷಧಿ ಸಸ್ಯ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸರ್ಕಾರಗಳು ಹಲವು ಯೋಜನೆಗಳ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡಿವೆ. ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿವೆ.
ಸೋಮಾರಿಗಳಾಗುವಂತಹ ಯೋಜನೆಗಳನ್ನು ಮಾಡುವ ಬದಲು ದುಡಿಯುವ ದಾರಿ ಮಾಡಿಕೊಡಬೇಕು. ಆಗ ರೈತರು ಸಾಲಗಾರರು ಆಗುವುದಿಲ್ಲ. ರೈತರೇ ಸರ್ಕಾರಗಳಿಗೆ ಸಾಲ ಕೊಡುವಷ್ಟು ಬಲಾಡ್ಯರಾಗಲಿದ್ದಾರೆ ಎಂದು ತಿಳಿಸಿದರು.
ಎಲ್ಲೋ ಮಠದಲ್ಲಿ ಕಾಡಿನಲ್ಲಿ ಕುಳಿತು ತಪಸ್ಸು ಮಾಡುವವರು ಯೋಗಿಗಳಲ್ಲ. ದೇಶಕ್ಕೆ ಅನ್ನ ನೀಡಲು ಹಗಲಿರುಳು ದುಡಿಯುವ ರೈತರೇ ಈ ದೇಶನ ನಿಜವಾದ ಯೋಗಿಗಳು. ಅಂತಹ ರೈತಾಪಿ ವರ್ಗದ ಬೆನ್ನೆಲುಬನ್ನೇ ಸರ್ಕಾರಗಳು ಮುರಿಯವಂತಹ ಕೆಲಸ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತಮ ಆರೋಗ್ಯ ನಮ್ಮ ಜೀವನಕ್ಕೆ ಭಾಗ್ಯ. ಆದರೆ, ದೌರ್ಭಾಗ್ಯದ ಜೀವನ ಎದುರಾಗಿದೆ. ಎಲ್ಲದಕ್ಕೂ ಭಾವನೆ, ಪರಿಸರ ಸರಿ ಇರಬೇಕು. ನಮಗೆ ನಮ್ಮಲ್ಲೇ ಇರುವ ಗಿಡಮೂಲಿಕೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ತಿರಸ್ಕಾರಕ್ಕೆ ಒಳಗಾಗಿವೆ. ಸರ್ಕಾರ ಪಾರಂಪರಿಕ ವೈದ್ಯ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಾರಕ ರೋಗಗಳನ್ನು ಗುಣಪಡಿಸುವ ಗುಣ ಗಿಡ ಮೂಲಿಕೆಗಳಿಗೆ ಇದೆ ಎಂದು ತಿಳಿಸಿದರು.
ಕರ್ನಾಟಕ ಔಷಧ ಸಸ್ಯಗಳ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಸುದರ್ಶನ್ ಮಾತನಾಡಿ, ಜೀವನ ಶೈಲಿಯನ್ನು ಉತ್ತಮ ಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಗಿಡಮೂಲಿಕೆಗಳ ಲಭ್ಯತೆ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರ ಅವನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ. ನಮ್ಮ ವಿದ್ಯೆಯನ್ನು ಕಲಿತ ವಿದೇಶಿಗಳು ಅಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಭಾರತದಲ್ಲಿ ಕಡಿಮೆ ಆಗುತ್ತಿದೆ. ಪಾರಂಪರಿಕ ವೈದ್ಯಪದ್ಧತಿಯನ್ನು ಬೆಳೆಸಲು ಮುಂದಾಗಬೇಕು ಎಂದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಅರೇಕಲ್ ಮಾತನಾಡಿ, ಭಾರತದಲ್ಲಿ ಬೆಳೆಯುವ ಪ್ರತಿಯೊಂದು ಗಿಡದಿಂದ ಅನುಕೂಲ ಇದೆ. ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಮಣ್ಣಿನಲ್ಲಿನ ಜೀವಾಂಶದ ಜೊತೆ ಜೀವ ವೈವಿಧ್ಯತೆಗೆ ಹಾನಿ ಆಗುತ್ತಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಲಹೆಯಂತೆ ಬೇರೆ ಬೇರೆ ಬೆಳೆಗಳನ್ನು ಬೆಳೆದು ಜೀವಾಂಶ ಉಳಿಸಬೇಕು ಎಂದು ಮನವಿ ಮಾಡಿದರು. ಹೆಬ್ಟಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಾರಂಪರಿಕ ವೈದ್ಯ ಸಂಘದ ರಾಜ್ಯ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ| ಆರ್. ತಿಪ್ಪೇಸ್ವಾಮಿ, ಡಾ.ಜಿ. ರವಿಕುಮಾರ್, ಡಾ| ವೇಣುಗೋಪಾಲ್, ಸದಾಶಿವ, ಡಾ| ಪ್ರಭು, ಪ್ರಕಾಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.