ಸಾಹಿತ್ಯ ಲೋಕ ಜಾತಿ-ಧರ್ಮದಿಂದ ಮುಕ್ತವಾಗಲಿ
ಇತ್ತೀಚಿನ ದಿನಗಳಲ್ಲಿ ವೇದಿಕೆ ಮತ್ತು ಆಪ್ತತೆ ಕಳೆದು ಹೋಗುತ್ತಿದೆ.
Team Udayavani, Jul 19, 2022, 2:43 PM IST
ದಾವಣಗೆರೆ: ಸಾಹಿತಿ, ಕವಿಗಳನ್ನು ಒಂದು ಧರ್ಮ, ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಸಾಹಿತಿ ಡಾ| ಆನಂದ ಋಗ್ವೇದಿ ಹೇಳಿದರು.ನಗರದ ನಿರ್ವರ್ಣ ಸಭಾಂಗಣದಲ್ಲಿ ನಡೆದ ಸಂತೆಬೆನ್ನೂರು ಫೈಜಟ್ರಾಜ್ ಅವರ ಸಾಹಿತ್ಯ ಕೃತಿಗಳ ಅವಲೋಕನ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈಚೆಗೆ ಕೃತಿಕಾರರು, ಪ್ರಸಿದ್ಧ ಸಾಹಿತಿ, ಕವಿಗಳನ್ನು ಒಂದು ಜಾತಿ, ಸಮುದಾಯ, ಧರ್ಮಕ್ಕೆ ಸೀಮಿತಗೊಳಿಸುವುದು ಕಂಡು ಬರುತ್ತಿದೆ. ಸಾಹಿತಿಗಳನ್ನು ನಮ್ಮವರು ನಮ್ಮ ಧರ್ಮ, ಸಮುದಾಯದವರು ಎಂದು ಹೇಳಿಕೊಳ್ಳುವಂತಹ ಸಂಘರ್ಷಮಯ ವಾತಾವರಣ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕವಿ, ಸಾಹಿತಿ, ಕಾದಂಬರಿಕಾರರು ಜಾತಿ, ಮತ, ಧರ್ಮ, ಸಮುದಾಯ ಮೀರಿದವರು. ಅವರಿಗೆ ಯಾವುದೇ ಗಡಿಯ ಎಲ್ಲೆ ಇಲ್ಲ. ಈಚೆಗೆ ಪ್ರಸಿದ್ಧ ಸಾಹಿತಿಯೊಬ್ಬರನ್ನು ನಮ್ಮ ಸಮುದಾಯದವರು ಎಂಬು ಬಹು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ತಾತ್ವಿಕತೆಯ ಕತೃìಗಳನ್ನು ಜಾತಿ,
ಸಮುದಾಯ, ಧರ್ಮಕ್ಕೆ ಸೀಮಿತಗೊಳಿಸುವ ಕ್ರಿಯೆ ಸರಿಯಲ್ಲ. ಸಾಮಾಜಿಕ ಸ್ಥಿತಿಗತಿ, ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ಕವಿ, ಸಾಹಿತಿ ತಾವು ಹುಟ್ಟಿ ಬಂದ ಜಾತಿಗೆ ಜವಾಬ್ದಾರಲ್ಲ. ಯಾರೂ ಸಹ ಇದೇ ಜಾತಿ, ಧರ್ಮ, ಸಮುದಾಯದಲ್ಲಿ ಜನಿಸಬೇಕು ಎಂದು ಅರ್ಜಿ ಹಾಕಿರುವುದಿಲ್ಲ ಎಂದರು.
ಸಂತೆಬೆನ್ನೂರು ಫೈಜಟ್ರಾಜ್ ಸಹ ನಾಲ್ಕು ದಶಕಗಳಲ್ಲಿ ಅನೇಕ ಸಂಕಷ್ಟ ಮತ್ತು ಸಂಘರ್ಷ ದಾಟಿ ಬಂದಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂಭತ್ತು ಕೃತಿಗಳ ನೀಡಿದ್ದಾರೆ. ಸಂತೆಬೆನ್ನೂರು ಫೈಜಟ್ರಾಜ್ ಅವರ “ಕೇಳದೆ ನಿಮಗಾಗಿ’ ಕವನ ಸಂಕಲನಕ್ಕೆ ಮುಸ್ಲಿಂ ಸಾಹಿತ್ಯ ಪರಿಷತ್ತು ಪ್ರಶಸ್ತಿಯನ್ನು ನೀಡಿದೆ. ಅದಕ್ಕೆ ಮುಜುಗರ ಪಡುವಂಥದ್ದಲ್ಲ. ಸಾಹಿತಿ, ಕವಿತೆಗೆ ಪ್ರಶಸ್ತಿ ಬರುವುದು ಅವರಿಗೆ ಆತ್ಮಬಲ ನೀಡುತ್ತದೆ. ಸಮಾಜ, ಕವಿಹೃಹದಯಗಳು ನಿಮ್ಮೊಟ್ಟಿಗೆ ಇರಲಿವೆ ಎಂದು
ಬೆಂಬಲಿಸುವ ಪ್ರತೀಕ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳಾಡಿದ ಸನಾವುಲ್ಲಾ ನವಿಲೇಹಾಳ್, ಸಂತೆಬೆನ್ನೂರು ಫೈಜಟ್ರಾಜ್ ಬದುಕಿನ ಅನುಭವವನ್ನು ಕವಿತೆ, ಕಥೆಗಳ ಮೂಲಕ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿದ್ದಾರೆ. “ನಾವಾಗುವುದು ಒಲವಂತೆ’ ಎನ್ನುವ ಮೂಲಕ ಒಲಿವಿನ ಪರಿಚಯ ಮಾಡಿಕೊಟ್ಟಿದ್ದಾರೆ. “ಕೇಳದೆ ನಿಮಗಾಗಿ’ ಕವನ ಸಂಕಲನಕ್ಕೆ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ| ಜಿ. ಕಾವ್ಯಶ್ರೀ, ಜಿ.ಮುದ್ದುವೀರಸ್ವಾಮಿ ಇತರರು ಇದ್ದರು. ಟಿ.ಎಸ್. ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಕೃಷ್ಣ ನಾಯ್ಕ ವಂದಿಸಿದರು.
ಪ್ರೀತಿಯೆಂಬುದು ಬದುಕಿನ ಆಕ್ಸಿಜನ್
ಇತ್ತೀಚಿನ ದಿನಗಳಲ್ಲಿ ವೇದಿಕೆ ಮತ್ತು ಆಪ್ತತೆ ಕಳೆದು ಹೋಗುತ್ತಿದೆ. ಆತ್ಮರತಿ, ಗುಂಪುಗಾರಿಕೆಯ ವಾತಾವರಣದ ನಡುವೆ ಆಪ್ತತೆಯ ವಲಯ ಸ್ಥಾಪನೆ ಮಾಡಕೊಳ್ಳಬೇಕಾಗಿದೆ. ಮನುಷ್ಯರಾಗಿ ಬಾಳಲು, ಬದುಕಲು ಪ್ರೀತಿ ಅಗತ್ಯ. ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿ, ಆಪ್ಯಾಯತೆ ಬೇಕೇ ಬೇಕು. ಪ್ರೀತಿ ಎಂಬುದು ಜೀವನದ ಆಮ್ಲಜನಕ. ಆದರೆ ಅದೇ ಪ್ರೀತಿಯನ್ನು ಮಡಿವಂತಿಕೆ ನೆಪದಲ್ಲಿ ಸಾಮಾಜಿಕವಾಗಿ ನಿಷೇಧಿ ತ ಕ್ರಿಯೆ ಎಂದು ಬ್ರ್ಯಾಂಡ್ ಮಾಡಲಾಗುತ್ತಿದೆ ಎಂದು ಸಾಹಿತಿ ಮಲ್ಲಿಕಾರ್ಜುನ ತೂಲಹಳ್ಳಿ ವಿಷಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.