ರಾಷ್ಟ್ರದ ಅಭಿವೃದ್ಧಿಗೆ ಕಟಿಬದ್ಧರಾಗೋಣ
Team Udayavani, Aug 16, 2018, 11:30 AM IST
ದಾವಣಗೆರೆ: ಪ್ರತಿಯೊಬ್ಬ ಭಾರತೀಯರು ಸ್ವಾತಂತ್ರ್ಯಾ ಸಂಗ್ರಾಮದ ಘಟನೆಗಳಸ್ಮರಣೆಯೊಂದಿಗೆ ಪ್ರಸ್ತುತದ ಸವಾಲುಗಳ ಸಮರ್ಥವಾಗಿ ಹಿಮ್ಮೆಟ್ಟಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ (ವಾಸು)ಆಶಿಸಿದ್ದಾರೆ.
ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 72 ನೇ ಸ್ವಾತಂತ್ರ್ಯಾ ದಿನಾಚರಣೆಯಲ್ಲಿ
ಧ್ವಜಾರೋಹಣ ನೆರವೇರಿಸಿ ಲಿಖೀತ ಸ್ವಾತಂತ್ರೋತ್ಸವದ ಸಂದೇಶ ನೀಡಿದ ಅವರು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಕಟಿಬದ್ಧರಾಗೋಣ ಎಂದರು.
ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಪರಿಣಾಮಕಾರಿ ಸುಧಾರಣೆ ತಂದು ಅವುಗಳ ಮೂಲ ಉದ್ದೇಶಗಳ ಈಡೇರಿಸಿ ಸಮಾಜ ಹಾಗೂ ರಾಷ್ಟ್ರವನ್ನು ಬಲಪಡಿಸೋಣ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ, ದೇಶಪ್ರೇಮದ ದ್ಯೋತಕವಾಗಿ ಸೌಹಾರ್ದತೆಯಿಂದ ಬಾಳ್ಳೋಣ ಎಂದು ಮನವಿ ಮಾಡಿದರು.
ಸ್ವಾತಂತ್ರ್ಯಾ ಸಂಗ್ರಾಮವು ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯದೆದುರು ಜಾತಿ, ಮತ, ಭಾಷೆ, ಪ್ರದೇಶ ವಿರೋಧಾಭಾಸಗಳನ್ನೆಲ್ಲ ಮರೆತು, ಒಂದಾಗಿ ನಿಂತು ನಡೆಸಿದ ಅವಿಸ್ಮರಣೀಯ ಹೋರಾಟ ಎಂದು ಬಣ್ಣಿಸಿದ ಅವರು ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾದಂತಹ
ಚಳವಳಿ, ವಂದೇ ಮಾತರಂ, ಭಾರತ್ ಮಾತಾಕೀ ಜೈ, ಮಹಾತ್ಮಾ ಗಾಂಧೀಜಿ ಕಿ ಜೈ… ಎಂಬ ಘೋಷಣೆ ಮೊಳಗಿಸುತ್ತಾ ಬ್ರಿಟಿಷ್ ಬಂದೂಕುಗಳೆದುರು ಭಾರತೀಯರು ಎದೆಯೊಡ್ಡಿ ನಿಂತು ಹೋರಾಡಿದರು, ಪ್ರಾಣಾರ್ಪಣೆಗೈದರು. ದೇಶ ಸ್ವತಂತ್ರವಾಗಿ ಉಳಿಯಬೇಕಾದರೆ ಸ್ವಾತಂತ್ರ್ಯಾ ಹೋರಾಟ, ತ್ಯಾಗ, ಬಲಿದಾನಗಳ ಕಥೆ ನಮ್ಮ ಜನಮನದಲ್ಲಿ ಆಗಾಗ ಸುಳಿಯುತ್ತಿರಬೇಕು ಎಂದು ತಿಳಿಸಿದರು. ಭಾರತದ ಸ್ವಾತಂತ್ರ್ಯಾ ಹೋರಾಟಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸೆ, ಅಸಹಕಾರ ಮತ್ತು ಸತ್ಯಾಗ್ರಹ ಬಹು ದೊಡ್ಡ ಕಾಣಿಕೆ. 1942 ಆ. 9ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಯುವಕರ ಪಾತ್ರ ಮಹತ್ವದ್ದಾಗಿತ್ತು. ದೇಶದ ಸ್ವಾತಂತ್ರ್ಯಾದ ಹೋರಾಟದ ಕಾಲ ಘಟ್ಟದಲ್ಲಿ ನಿಸ್ವಾರ್ಥ ಸೇವೆ, ದೇಶಪ್ರೇಮ, ಸರಳ ಜೀವನ, ಸ್ವಾಭಿಮಾನಕ್ಕೆ ಹೆಚ್ಚಿನ ಆದ್ಯತೆ ಇತ್ತು. ಗಾಂಧಿಧೀಜಿ, ನೆಹರು, ಪಟೇಲ್, ಬೋಸ್ ಮುಂತಾದ ಆದರ್ಶ ನಾಯಕರ ಮಾರ್ಗದರ್ಶನ ಇತ್ತು ಎಂದು ಸ್ಮರಿಸಿದರು.
ಭಾರತದ ಸ್ವಾತಂತ್ರ್ಯಾ ಚರಿತ್ರೆಯಲ್ಲಿ ಕರ್ನಾಟಕದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಒಳಗೊಂಡಂತೆ ಅನೇಕ
ಮಹನೀಯರ ಹೋರಾಟ ಅವಿಸ್ಮರಣೀಯ. ಬ್ರಿಟಿಷರು ಭಾರತ ಬಿಟ್ಟು ತೊಲಗುವಲ್ಲಿ ಮಾಧ್ಯಮಗಳು ಸಹ ಬಹು ದೊಡ್ಡ ಭೂಮಿಕೆ ನಿಭಾಯಿಸಿವೆ. 1942ರಲ್ಲಿ ತೆರಿಗೆ ಕಟ್ಟಬೇಕೆಂಬ ಕಾನೂನು ವಿರೋಧಿಸಿ ದಾವಣಗೆರೆಯಲ್ಲಿ ನಡೆದ ಹೋರಾಟದಲ್ಲಿ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ, ಹದಡಿ ನಿಂಗಪ್ಪ ಹಾಗೂ ಮಾಗಾನಹಳ್ಳಿ ಹನುಮಂತಪ್ಪ ಹುತಾತ್ಮರಾದರು ಎಂದು ಸ್ಮರಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.
ಜಯಶೀಲ, ಉಪಾಧ್ಯಕ್ಷೆ ಟಿ. ರಶ್ಮಿ ರಾಜಪ್ಪ, ಸದಸ್ಯ ಕೆ.ಎಸ್. ಬಸವಂತಪ್ಪ, ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಪಂ, ನಗರಪಾಲಿಕೆ ಸದಸ್ಯರು ಇದ್ದರು.
ಸ್ವಾತಂತ್ರ್ಯಾ ಹೋರಾಟಗಾರರಾದ ತಿಳುವಳ್ಳಿ ಶೆಟ್ಟರ ಸಿದ್ದರಾಮಪ್ಪ, ನ್ಯಾಮತಿ ಕಲ್ಯಾಣಪ್ಪ, ಬಾಳೆಹೊನ್ನೂರು ಮರುಳಸಿದ್ದಪ್ಪ, ಬಿ. ಹಾಲಪ್ಪ, ಬಿ.ಎಂ. ಶಿವಲಿಂಗಸ್ವಾಮಿ, ನೀಲಪ್ಪ ಬಿಸಲೇರಿ, ಚನ್ನಬಸಪ್ಪ ಬಿಸಲೇರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ, ಮೈ ನವಿರೇಳಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಹಸಿರು ಕರ್ನಾಟಕ…
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
1,500 ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜ ರ್ಯಾಲಿ
ದಾವಣಗೆರೆ: ಸ್ವಾತಂತ್ರ್ಯಾ ದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ 1500 ಅಡಿ ಉದ್ದ, 9 ಅಡಿ ಅಗಲದ ರಾಷ್ಟ್ರಧ್ವಜ ರ್ಯಾಲಿ ನಡೆಯಿತು. ಆಂಧ್ರಪ್ರದೇಶದ ರೊದ್ದಂನ ಡಿ.ಸಿ. ಲಕ್ಷ್ಮಿನಾರಾಯಣ ಗುಪ್ತ ಸಿದ್ಧಪಡಿಸಿರುವ ಬೃಹತ್ ಗಾತ್ರದ ರಾಷ್ಟ್ರಧ್ವಜದ ರ್ಯಾಲಿಯನ್ನು ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಪುಷ್ಪಾರ್ಚನೆ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಎವಿಕೆ ಕಾಲೇಜು ರಸ್ತೆ, ಹಳೆ ಪಿಬಿ ರಸ್ತೆ ಮೂಲಕ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಮುಕ್ತಾಯವಾಯಿತು.
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಅರ್ಧ ಕಿಲೋ ಮೀಟರ್‌ನಷ್ಟು ದೂರದ ಬೃಹತ್ ಬಾವುಟದ ರ್ಯಾಲಿಯಲ್ಲಿ ವಿವಿಧ ಶಾಲಾ-ಕಾಲೇಜುಗಳ 5 ಸಾವಿರ ವಿದ್ಯಾರ್ಥಿಗಳು, ಕಲಾತಂಡ, ಸಂಘ-ಸಂಸ್ಥೆ ಪದಾಧಿಕಾರಿಗಳು, ಸ್ಕೇಟಿಂಗ್ ತಂಡ, ಸಾರ್ವಜನಿಕರು ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದರು.
ಸಂಘದ ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಎಲ್. ಪ್ರಭಾಕರ್, ಆರ್.ಜಿ. ಶ್ರೀನಿವಾಸಮೂರ್ತಿ, ಎ.ಡಿ. ರಾಘವೇಂದ್ರ, ಡಿ.ಕೆ. ಜಯಂತ್, ಬಿ.ಎಸ್. ಸಾಯಿಪ್ರಸಾದ್, ಬದರಿನಾಥ್, ಪೃಥ್ವಿ ಇತರರು ನೇತೃತ್ವ ವಹಿಸಿದ್ದರು.
ನೆರೆ ಸಂತ್ರಸ್ತರ ಸುರಕ್ಷತೆಗೆ ಅಗತ್ಯ ಕ್ರಮ
ದಾವಣಗೆರೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿ ನೀರು ನುಗ್ಗಿದ ಪರಿಣಾಮ ಸಮಸ್ಯೆಗೀಡಾದವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಶ್ರೀನಿವಾಸ್(ವಾಸು) ಭರವಸೆ ನೀಡಿದ್ದಾರೆ.
ಬುಧವಾರ ಸ್ವಾತಂತ್ರ್ಯಾ ದಿನಾಚರಣೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ಪಾತ್ರದಲ್ಲಿರುವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹೊನ್ನಾಳಿಯಲ್ಲಿ 2, ಹಲವಾಗಲು ಗ್ರಾಮದಲ್ಲಿ 1 ಗಂಜೀಕೇಂದ್ರ ಪ್ರಾರಂಭಿಸಲಾಗಿದೆ. ಮಳೆ ನೀರು ನುಗ್ಗಿ ಆಗಿರುವ ಬೆಳೆ ಮತ್ತಿತರ ಹಾನಿ ಪ್ರಮಾಣದ ಮಾಹಿತಿ ಪಡೆದು ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ನದಿ ನೀರು ನುಗ್ಗುತ್ತಿರುವ ಬಗ್ಗೆ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ. ನಾನು ಸಹ ನಿರಂತರ ಸಂಪರ್ಕದಲ್ಲಿದ್ದೇನೆ. ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಜಲಾಶಯಗಳಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯ ಬಿಡುತ್ತಿರುವ ಕಾರಣಕ್ಕೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. 10-15 ವರ್ಷಗಳ ನಂತರ ಅತಿ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ನದಿಯಲ್ಲಿ 12.3 ಮೀಟರ್‌ನಷ್ಟು ನೀರು ಹರಿಯುತ್ತಿದೆ ಎಂದು ತಿಳಿಸಿದರು.
ನದಿ ನೀರು ನುಗ್ಗಿದ ಮತ್ತು ನುಗ್ಗಬಹುದಾದ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ, ಮನೆ ತೆರವುಗೊಳಿಸಿ, ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವಿ ಮಾಡುತ್ತಿದ್ದರೂ ಅನೇಕರು ಮನೆ ತೊರೆಯುತ್ತಿಲ್ಲ. ಕೆಲವು ಕಡೆ ಮನೆ ಕಟ್ಟಿಸಿಕೊಟ್ಟಿದ್ದರೂ ಹೋಗುತ್ತಿಲ್ಲ, ಸಾರಥಿ ಬಳಿ ಸೇತುವೆ ಮೇಲೆ ನದಿ ನೀರಿನ ಪ್ರಮಾಣ ಏರಿಕೆ-ಇಳಿಕೆ ಆಗುತ್ತಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.