ಮರುಳಸಿದ್ಧರ ಯಶೋಗಾಥೆ ಸಾರುವ ಇನ್ನಷ್ಟು ಕೃತಿ ಬರಲಿ
Team Udayavani, May 8, 2017, 1:10 PM IST
ದಾವಣಗೆರೆ: ನಾಡು ಕಂಡಂತಹ ಅತಿ ಶ್ರೇಷ್ಠ ಅನುಭಾವಿ, ವಿಶ್ವಬಂಧು ಮರುಳಸಿದ್ಧರು ಮತ್ತು ಅವರ ಜೀವನ, ಸಾಧನೆ ಕುರಿತಂತೆ ಮಾಹಿತಿ ನೀಡುವಂತ ಹೆಚ್ಚಿನ ಸಾಹಿತ್ಯ ಹೊರ ಬರಬೇಕಿದೆ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೈಸೂರಿನ ಸಂವಹನ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರೊ| ಬಿ. ಸೋಮಶೇಖರಪ್ಪನವರ ವಿಶ್ವಬಂಧು, ಡಾ| ಚಂದ್ರಶೇಖರಯ್ಯನವರ ಇಂಗ್ಲಿಷ್ ಭಾಷೆಯ ಗಾಡ್ ಆಫ್ ದಿ ಲೆಸ್ ಫಾಚೂನೆಟ್… ಕಾದಂಬರಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶ್ವಬಂಧು ಮರುಳಸಿದ್ಧರ ಕುರಿತಂತೆ ಹೆಚ್ಚಿನ ಸಾಹಿತ್ಯ ಹೊರ ಬಂದಿಲ್ಲ. ಅವರ ಜೀವನ, ಸಾಧನೆ ಕುರಿತಂತೆ ಹೆಚ್ಚಿನ ಪ್ರಚಾರ ಇಲ್ಲದ ಸಂದರ್ಭದಲ್ಲಿ ಇಬ್ಬರು ಲೇಖಕರು ಮರುಳಸಿದ್ಧರ ಕುರಿತು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕಾದಂಬರಿ ಹೊರ ತಂದಿರುವುದು ಸಂತಸದ ವಿಚಾರ ಎಂದರು. ವಿಶ್ವಬಂಧು ಮರುಳಸಿದ್ಧರು ಸಾಮಾನ್ಯತೆಯಿಂದ ಅಸಾಮಾನ್ಯತೆಯಡೆಗೆ ಸಾಗಿದವರು.
ತಮ್ಮ ಪ್ರಖರ ವೈಚಾರಿಕ ಚಿಂತನೆ, ಸಂದೇಶದ ಮೂಲಕ ಸಮಾಜದ ಅಂಕುಡೊಂಕನ್ನು ತಿದ್ದಿದಂತಹ ಮಹಾನ್ ಚೇತನ. ಜೀವನದ ಅನುಭವದ ಮೂಲಕವೇ ಮಹಾನ್ ಶ್ರೇಷ್ಠ ಅನುಭಾವಿಯಾದವರು. ಅವರಂತಹ ಚೈತನ್ಯವನ್ನು ಈವರೆಗೆ ಕಾಣಲಿಕ್ಕೆ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ಸಿರಿಗೆರೆಯ ಹಿರಿಯ ಜಗದ್ಗುರುಗಳಾದ ಡಾ| ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಮರುಳಸಿದ್ಧರನ್ನು ಬೆಳಕಿಗೆ ತಂದವರು. ಮರುಳಸಿದ್ಧರ ಜೀವನ, ಸಾಗಿ ಬಂದ ಹಾದಿಯ ಬಗ್ಗೆ ನಾಟಕ ರಚಿಸುವ ಮೂಲಕ ಅವರನ್ನು ನಾಡಿಗೆ ಪರಿಚಯಿಸಿದರು ಎಂದು ತಿಳಿಸಿದರು.
ತಮಗೆ ತಿಳಿದಿರುವಂತೆ ವಿಶ್ವಬಂಧು ಮರುಳಸಿದ್ಧರು ಹೆಚ್ಚಿನ ಅಧ್ಯಯನ ಮಾಡಿದವರಲ್ಲ. ಅವರು ನಾಡಿಗಿಂತಲೂ ಕಾಡಿನಲ್ಲೇ ಹೆಚ್ಚಿನ ಸಂಪರ್ಕ ಹೊಂದಿದವರು. ಜನರಲ್ಲಿ ವಾಮಾಚಾರವನ್ನ ಬಿತ್ತುತ್ತಿದ್ದ ರಸಸಿದ್ಧರ ಮನ ಪರಿವರ್ತನೆಗೆ ಶ್ರಮಿಸಿದವರು. ಅಂತಹ ಮಹಾನ್ ಶಕ್ತಿಯ ಬಗ್ಗೆ ಏಕಕಾಲಕ್ಕೆ ಎರಡು ಕಾದಂಬರಿ ಲೋಕಾರ್ಪಣೆಗೊಳ್ಳುತ್ತಿರುವುದು ತಮಗೆ ಹೆಚ್ಚಿನ ಆಶ್ಚರ್ಯ ಉಂಟು ಮಾಡುತ್ತಿದೆ ಎಂದು ತಿಳಿಸಿದರು.
ವಿಶ್ವಬಂಧು ಮರುಳಸಿದ್ಧರು ಕೆಳಸ್ತರದಿಂದ ಬಂದವರು ಮಾತ್ರವಲ್ಲ ಅನೇಕಾನೇಕರ ಉಪೇಕ್ಷೆಗೆ ಒಳಗಾದವರು. ಹಾಗಾಗಿಯೇ ಅವರ ಕುರಿತಂತೆ ಹೆಚ್ಚಿನ ಸಾಹಿತ್ಯ ಹೊರ ಬರಲಿಲ್ಲ. ಹೆಚ್ಚಿನದ್ದಾಗಿ ಮಾತನಾಡಲೂ ಇಲ್ಲ. ವಿಶ್ವಬಂಧು ಮರುಳಸಿದ್ಧರು 68 ಸಾವಿರ ವಚನಗಳನ್ನ ನೆಲಮೂಲ ಭಾಷೆಯಲ್ಲಿ ಬರೆದವರು.
ಅವರಲ್ಲಿ ಪುಸ್ತಕದ ಜ್ಞಾನಕ್ಕಿಂತೂ ಮಸ್ತಕದ ಜ್ಞಾನವೇ ಹೆಚ್ಚಾಗಿತ್ತು. ತಮ್ಮ ಜೀವಿತಾವಧಿಯುದ್ದಕ್ಕೂ ಸಮಾಜದ ಅಂಕುಡೊಂಕು ತಿದ್ದುವುದಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡವರು ಎಂದು ತಿಳಿಸಿದರು. ವಿಶ್ವಬಂಧು ಮರುಳಸಿದ್ಧರು ಸಮಾಜದಲ್ಲಿನ ಜನರ ಹಾದಿ ತಪ್ಪಿಸುವ ಕೆಲಸ ಮಾಡುವರನ್ನು ಸರಿಪಡಿಸುವ ಕೆಲಸ ಮಾಡಿದವರು. ಅಂತಹ ಕೆಲಸವನ್ನೇ ಈಗ ನಾವೆಲ್ಲರೂ ಮಾಡಬೇಕಿದೆ.
ವಿಶ್ವಬಂಧು ಮರುಳಸಿದ್ಧರು ಬಾಲ್ಯದಲ್ಲಿ ದನಕರು ಕಾಯುತ್ತಾ, ಪಕ್ಷಿ, ಪ್ರಾಣಿಗಳೊಂದಿಗೆ ಬಾಳಿದವರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮಾರಿಜಾತ್ರೆಯಲ್ಲಿನ ಮೂಕಪ್ರಾಣಿಗಳ ಬಲಿಯನ್ನ ವಿರೋಧಿಸುವ ಮೂಲಕ ಹೋರಾಟ ಪ್ರಾರಂಭಿದವರು. ವಿಶ್ವಬಂಧು ಮರುಳಸಿದ್ಧರು ಅಂದೇ ಮಾರಿಹಬ್ಬದ ವಿರುದ್ದ ಧ್ವನಿ ಎತ್ತಿದವರು. ನಾವು ಇಂದು ಸಹ ಅದೇ ಕೆಲಸ ಮಾಡುತ್ತಿದ್ದೇವೆದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.