ಮಳೆಯಿಂದ ಮಕ್ಕಳಿಗೆ ಮುಕ್ತಿ
Team Udayavani, Jun 12, 2018, 12:56 PM IST
ಹರಪನಹಳ್ಳಿ: ಚಾವಣಿ ಒಡೆದು ಮಳೆ ನೀರು ತರಗತಿ ಕೊಠಡಿಯೊಳಗೆ ಶೇಖರಣೆಯಾಗುತ್ತಿದ್ದ ತಾಲೂಕಿನ ದುಗ್ಗಾವತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೋದಂಡರಾಮ ಸೋಮವಾರ ಭೇಟಿ ನೀಡಿ ಶಿಥಿಲ ಕಟ್ಟಡ ಪರಿಶೀಲಿಸಿದರು.
ಶಾಲಾ ಕಟ್ಟಡ ಶಿಥಿಲವಾಗಿದೆ. ತುರ್ತಾಗಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಪ್ರಕೃತಿ ವಿಕೋಪ ಅನುದಾನದಡಿ ಶಾಲೆಗೆ ಎರಡು ಕೊಠಡಿ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಡಿಡಿಪಿಐ ಕೋದಂಡರಾಮ ಭರವಸೆ ನೀಡಿದರು. ಆಗ ಗ್ರಾಪಂ ಸದಸ್ಯ ಎಂ.ಎಚ್. ಪರಶುರಾಮ ಮಾತನಾಡಿ, ಈ ಹಿಂದೆ ಶಾಲೆಗೆ ಭೇಟಿ ನೀಡಿದ್ದ ಅಂದಿನ ಡಿಡಿಪಿಐ ಕೂಡ ಭರವಸೆ ನೀಡಿ ಹೋಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನೀವು ಹಾಗೆಯೇ ಮಾಡಿದರೆ ಮಕ್ಕಳ ಗತಿ ಏನು ಎಂದು ಪ್ರಶ್ನಿಸಿದರು.
ದುಗ್ಗಾವತಿ ಶಾಲೆ ಶತಮಾನ ಕಂಡ ಶಾಲೆ ಎನ್ನಿಸಿಕೊಂಡಿರುವುದರಿಂದ ಸರ್ಕಾರದಿಂದ 1 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಬಿಇಒ, ಸಿಆರ್‌ಪಿ, ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರು ಒಂದು ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳುಹಿಸಲು ಬಿಇಒ ಎಲ್.ರವಿ ಅವರಿಗೆ ಡಿಡಿಪಿಐ ಸೂಚಿಸಿದರು.
ಶಿಥಿಲ ಕಟ್ಟಡದಲ್ಲಿ ಯಾವ ಕಾರಣಕ್ಕೂ ಮಕ್ಕಳನ್ನು ಕೂರಿಸಬೇಡಿ. ಮುಖ್ಯ ಶಿಕ್ಷಕರ ಕಚೇರಿಯನ್ನು ಇನ್ನೊಂದು
ಕೊಠಡಿಗೆ ಸ್ಥಳಾಂತರ ಮಾಡಿ ಮಕ್ಕಳ ತರಗತಿಗೆ ಅನುಕೂಲ ಮಾಡಿಕೊಡಿ ಎಂದು ಮುಖ್ಯ ಶಿಕ್ಷಕ ಕೆ.ಜಿ.ರುದ್ರಗೌಡ್ರ
ಅವರಿಗೆ ಡಿಡಿಪಿಐ ಆದೇಶಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಮ್ಮ ಬಸವರಾಜ, ಮುಖಂಡರಾದ ಎಚ್.ಎಂ. ರಾಜಕುಮಾರ, ಹಲವಾಗಲು ಮಂಜುನಾಥ, ಅಂಗಡಿ ವೀರೇಶ್, ಎಚ್. ಮಹಾಂತೇಶ್, ಯೋಗೇಶ್, ಕೆ.ಬಸವರಾಜ್ ಹಾಗೂ ಗ್ರಾಮಸ್ಥರಿದ್ದರು. ಜೂ.10ರ ಸಂಚಿಕೆಯಲ್ಲಿ “ಸೊರುತಿಹುದು ಸರ್ಕಾರಿ ಶಾಲೆಗಳ ಮಾಳಿಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.