ಬಾಳಿಗೆ ಬೆಳಕು ನೀಡುವ ಶಕ್ತಿ ಗುರು


Team Udayavani, Jul 28, 2018, 11:07 AM IST

dvg-3.jpg

ಹರಿಹರ: ನಗರ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಹಾಗೂ ನಗರದ ಪಟೇಲ್‌ ಬಡಾವಣೆಯಲ್ಲಿರುವ ಸಾಯಿ ಮಂದಿರದಲ್ಲಿ ಶುಕ್ರವಾರ ಗುರುಪೌರ್ಣಿಮೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪಂಚಮಸಾಲಿ ಪೀಠದಲ್ಲಿ ಬೆಳಗ್ಗೆಯಿಂದಲೆ ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ವಚನಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿದವು. ನಂತರ ಪ್ರವಚನ ನೀಡಿದ ಶ್ರೀಗಳು, ಗುರು ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ನೀಡುವ ಶಕ್ತಿಯಾಗಿದ್ದಾನೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಗುರುವಿನ ಅನುಗ್ರಹ ಮುಖ್ಯ. ನಿರ್ಮಲ ಮನಸ್ಸು, ಜ್ಞಾನದ ಭಂಡಾರವಾಗಿರುವ ಗುರು ಸಿಗುವುದು ಅದೃಷ್ಟವೇ ಸರಿ. ಸರಿಯಾದ ಗುರು ಸಿಕ್ಕರೆ ಶಿಷ್ಯನ ಬದುಕು ಬಂಗಾರವಾಗುತ್ತದೆ ಎಂದರು. 

ಭಕ್ತರು ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆದರು. ಪೀಠದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಉಮಾಪತಿ, ಹದಡಿ ನಟರಾಜ್‌, ಚಂದ್ರಶೇಖರ್‌ ಪೂಜಾರ್‌, ದೊಡ್ಡಪ್ಪ, ಕರಿಬಸಪ್ಪ ಗುತ್ತೂರು ಇತರರಿದ್ದರು.

ಸಾಯಿ ಮಂದಿರ: ನಗರದ ಪಟೇಲ್‌ ಬಡಾವಣೆಯಲ್ಲಿನ ಸಾಯಿ ಮಂದಿರದಲ್ಲಿ ನೂರಾರು ಭಕ್ತರು ದೇವರ ದರ್ಶನ ಪಡೆದರು. ಬೆಳಿಗ್ಗೆ ಕ್ಷೀರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಹೋಮ, ವಿಶೇಷ ಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು. ನಂತರ ವಚನಾನಂದ ಶ್ರೀಗಳು ಪ್ರವಚನ ನೀಡಿದರು. ದೇವಸ್ಥಾನ ಸಮಿತಿಯ ಶಂಕರ್‌ ಖಟಾವ್‌ಕರ್‌, ಬಸವರಾಜ್‌ ಪಟೇಲ್‌, ಹನುಮಂತರಾವ್‌ ಸುರ್ವೆ, ವಾಗೀಶ್‌ ಪಟೇಲ್‌, ಚಂದ್ರಶೇಖರ್‌ ಸರಪದ್‌, ಲಿಂಗರಾಜ್‌ ಪಟೇಲ್‌, ಭೀಮಣ್ಣ ಐರಣಿ, ಮಹದೇವಪ್ಪ ಸರಪದ್‌, ಎಸ್‌.ಎಸ್‌. ಸಂಗನಾಳಮಠ, ಚಳಗೇರಿ ಇತರರಿದ್ದರು.

ಬದುಕಿಗೆ ಸನ್ಮಾರ್ಗ ತೋರುವ ಗುರು
ಹೊನ್ನಾಳಿ: ಬದುಕಿಗೆ ಸನ್ಮಾರ್ಗವನ್ನು ದಯಪಾಲಿಸುವ ಹಾಗೂ ಶಿಷ್ಯನ ಬದುಕಿಗೆ ಬೆಳಕನ್ನು ಚೆಲ್ಲುವಂತೆ ಮಾಡುವ ಗುರುವಿಗೆ ಗುರುಪೌರ್ಣಿಮೆಯಂದು ಗುರುವಂದನೆ ಸಲ್ಲಿಸುವುದು ಪ್ರತಿ ಶಿಷ್ಯನ ಕರ್ತವ್ಯವಾಗಿದೆ ಎಂದು ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಗುರುಪೌರ್ಣಿಮೆ ಅಂಗವಾಗಿ ಪಟ್ಟಣದ ಶ್ರೀಹಳದಮ್ಮದೇವಿ ಬಾಲಕಿಯರ ಹಾಗೂ ಅಕ್ಕಮಹಾದೇವಿ ಅಂಗ್ಲ ಮಾಧ್ಯಮ ಶಾಲೆಗಳ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಡಾಕ್ಟರೇಟ್‌ ಪದವಿಗೆ ಭಾಜನರಾದ ಶ್ರೀಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ತಮಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದ ಶ್ರೀ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಸ್ಮರಿಸಿಕೊಂಡು, ತಮ್ಮ ಬದುಕಿನ ಪಯಣ ಕುರಿತು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಜೀವನದಲ್ಲಿ ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧನೆ ಮಾಡಬೇಕು. ಜೀವನದಲ್ಲಿ ಸೋಲುಗಳು ಸಹಜ. ಆದರೆ ಛಲಬಿಡದೆ ಸಾಧನೆ ಮಾಡಿದಾಗ ಮಾತ್ರ ಸಫಲತೆ ನಮ್ಮದಾಗುತ್ತದೆ ಎಂದು ಹೇಳಿದರು. ಶ್ರೀಮಠದ ವಿದ್ಯಾಪೀಠದ ಆಡಳಿತಾಧಿ ಕಾರಿ ಡಾ| ಜಯಪ್ಪ ಮಾತನಾಡಿ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ನಿರಂತರ ಸಾಧನೆಯಿಂದ ಮನುಷ್ಯ ತಾನು ಅಂದುಕೊಂಡಿದ್ದನ್ನು ಸಾಧಿ ಸಬಹುದಾಗಿದೆ ಎಂದು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ.ಎಂ. ವಿಜಯಾನಂದಕುಮಾರಸ್ವಾಮಿ, ಅಕ್ಕಮಹಾದೇವಿ ಅಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಂಕರಸ್ವಾಮಿ, ಸಂಗೀತ ಶಿಕ್ಷಕಿ ಶಾಂತಾದೇವಿ ಹಿರೇಮಠ, ಶಿಕ್ಷಕ ಎಂ.ವಿ. ಮೃತ್ಯುಂಜಯ ಮಾತನಾಡಿದರು. ಶ್ರೀಹಳದಮ್ಮ ದೇವಿ
ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ.ಎಂ. ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲೆಗಳ ಶಿಕ್ಷರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಭಯ ಶಾಲೆಗಳಿಂದ ಸ್ವಾಮೀಜಿಯವರನ್ನು ಸನ್ಮಾನಿಸಲಾಯಿತು.

ಟಾಪ್ ನ್ಯೂಸ್

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.