ಲಿಂಗಾಯತ ಧರ್ಮಕ್ಕೆ ಬೇಕಿದೆ ಸ್ವತಂತ್ರ ಸ್ಥಾನಮಾನ 


Team Udayavani, Aug 2, 2017, 1:21 PM IST

02-DV-1.jpg

ದಾವಣಗೆರೆ: ಮಹಾನ್‌ ದಾರ್ಶನಿಕ ಬಸವಣ್ಣನವರೇ ಧರ್ಮಗುರು, ವಚನಗಳೇ ಧರ್ಮಗ್ರಂಥ, ಕನ್ನಡವೇ ಧರ್ಮಭಾಷೆ, ಬಸವಕಲ್ಯಾಣವೇ ಧರ್ಮಕೇಂದ್ರ. ಹಾಗಾಗಿ ಬಸವಣ್ಣನವರ ಅನುಯಾಯಿಗಳು ಒಪ್ಪುವ, ಅಪ್ಪುವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ದಾವಣಗೆರೆ ಸರಸ್ವತಿ ಬಡಾವಣೆಯಲ್ಲಿರುವ ಬಸವ ಬಳಗದ ಪದಾಧಿಕಾರಿಗಳು ಒಕ್ಕೊರಲಿನಿಂದ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಸವ ಬಳಗದ ಉಪಾಧ್ಯಕ್ಷ ಹುಚ್ಚಪ್ಪ ಮಾಸ್ತರ್‌, ಲಿಂಗ ಧರಿಸಿದವರು ಲಿಂಗಾಯತರು. ವೀರಶೈವ-ಲಿಂಗಾಯತ ಒಂದಲ್ಲ. ಹಾಗಾಗಲು ಸಾಧ್ಯವೇ ಇಲ್ಲ. ಬಸವಣ್ಣನವರೇ ನಮ್ಮ ಧರ್ಮಗುರು, ಅವರ ವಚನಗಳೇ ಧರ್ಮಗ್ರಂಥ. ಹಾಗಾಗಿ ನಮಗೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು. ಬೇರೆಯವರು ಏನಾದರೂ ಹೇಳಿಕೊಳ್ಳಲಿ, ಅವರಿಗೂ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಲಿ ಬೇಡ ಎನ್ನುವುದಿಲ್ಲ. ನಮ್ಮದು ಲಿಂಗಾಯತ ಧರ್ಮ. ಹಾಗಾಗಿ ನಮಗೆ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಬೇಕು ಎಂದು ಕೋರಿದರು. 

12ನೇ ಶತಮಾನದಲ್ಲಿ ಕನ್ನಡದಲ್ಲಿ ಲಿಂಗಾಯತ ಧರ್ಮ ಉದಯವಾಯಿತು. ನಾವೆಲ್ಲರೂ ಬಸವಣ್ಣನವರನ್ನೇ ನಮ್ಮ ಧರ್ಮಗುರುಗಳಾಗಿ ಸ್ವೀಕರಿಸಿದ್ದೇವೆ. ಯಾವುದೇ ಧರ್ಮ, ಜಾತಿಯವರೇ ಆಗಿರಲಿ ಲಿಂಗಧಾರಿಗಳಾದಲ್ಲಿ ಸ್ವಾಗತಿಸುತ್ತೇವೆ. ನಮ್ಮಲ್ಲಿನ 30-40 ಒಳಪಂಗಡಗಳು ಇದ್ದರೂ ಲಿಂಗ ಧರಿಸಿದವರೆಲ್ಲ ಲಿಂಗಾಯತರು. ಬಸವಧರ್ಮದವರು. ನಮ್ಮ ಲಿಂಗಾಯತ ಧರ್ಮವನ್ನ ಸ್ವತಂತ್ರ ಧರ್ಮವನ್ನಾಗಿ ಮಾಡಬೇಕು ಎಂಬುದು ಬಸವಬಳಗದ ಆಗ್ರಹ ಎಂದು ತಿಳಿಸಿದರು.

1882ರಲ್ಲಿಯೇ ಬ್ರಿಟಷ್‌ ಅಧಿಕಾರಿ ಸ್ಟೀಲ್‌ ಎಂಬ ಅಧಿಕಾರಿ ವೀರಶೈವ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದರು. 2,08,325 ದಷ್ಟು ಸಂಸ್ಕೃತ ಶ್ಲೋಕಗಳನ್ನು ಕೊಟ್ಟು ಅವುಗಳ ಆಧಾರದಲ್ಲಿ ಸ್ವತಂತ್ರ ಧರ್ಮಧ ಸ್ಥಾನಮಾನ ಕೇಳಲಾಗಿತ್ತು. ಆಗ ಬ್ರಿಟಿಷ್‌ ಅಧಿಕಾರಿ ಸ್ಟೀಲ್‌ ಕೇಳಿದ್ದ ಮತ ಸ್ಥಾಪನೆ ಕಾಲ, ಮತ ಸ್ಥಾಪಕರು ಯಾರು, ಧಾರ್ಮಿಕ ಆಚರಣೆ ಏನು, ಗುರು-ವಿರಕ್ತರ ವ್ಯತ್ಯಾಸ, ಮಠಪತಿ ಕೆಲಸವೇನು, ಗಣಚಾರಿ ಎಂದರೇನು… ಎಂಬ ಆರು ಪ್ರಶ್ನೆಗಳಿಗೆ ಈವರೆಗೆ ಯಾರೂ ಉತ್ತರಿಸಿಯೇ ಇಲ್ಲ ಎಂದು ತಿಳಿಸಿದರು. 

ವೀರಶೈವ-ಲಿಂಗಾಯತ ಒಂದೇ ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ವೀರಶೈವರು-ಲಿಂಗಾಯತರು ಒಂದು ಅಲ್ಲವೇ ಅಲ್ಲ. ವೀರಶೈವರು-ಲಿಂಗಾಯತರು ಒಂದೇ ಎನ್ನುವುದಾದರೆ ಧರ್ಮಗುರುಗಳು ಎಂಬುದಕ್ಕೆ ಸಂಬಂಧಿತರು ಉತ್ತರ ನೀಡಬೇಕು. ಈ ಹಿಂದೆಯೂ ಪ್ರತ್ಯೇಕ ವೀರಶೈವ ಧರ್ಮದ
ಸ್ಥಾನಮಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು ಎಂದು ತಿಳಿಸಿದರು. ಬಸವಬಳಗದ ವಿ. ಸಿದ್ದರಾಮ ಶರಣರು, ಎಚ್‌.ಎಂ. ಸ್ವಾಮಿ, ದೇವಿಗೆರೆ ವೀರಭದ್ರಪ್ಪ, ಅಶೋಕ್‌ ಬಣಕಾರ್‌, ಟಿ.ಎಸ್‌. ಜಯರುದ್ರೇಶ್‌, ಅಜ್ಜಂಪುರಶೆಟ್ರಾ ಷಡಕ್ಷರಿ, ವೀಣಾ ಮಂಜುನಾಥ್‌, ಸುಮಂಗಲ, ಗಾಯತ್ರಿ, ನಿರ್ಮಲಮ್ಮ, ಲತಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

1-jaya

Legend; ಬಹುಭಾಷಾ ಪ್ರಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ವಿಧಿವಶ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

1-jaya

Legend; ಬಹುಭಾಷಾ ಪ್ರಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.