ಕೋವಿಡ್‌ನಿಂದ ಮೃತ ರೈತರ ಸಾಲಮನ್ನಾಕ್ಕೆ ಸಿದ್ಧತೆ
Team Udayavani, Jul 17, 2021, 9:28 AM IST
ಸಾಂದರ್ಭಿಕ ಚಿತ್ರ
ದಾವಣಗೆರೆ: ಮಹಾಮಾರಿ ಕೋವಿಡ್‌ನಿಂದ ಮೃತಪಟ್ಟ ರೈತರು ಸಹಕಾರಿ ಸಂಘ/ ಬ್ಯಾಂಕ್ ಗಳಲ್ಲಿ ಮಾಡಿದ ಸಾಲದ ವಿವರಗಳನ್ನು ಸರ್ಕಾರ ಸಂಗ್ರಹಿಸುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 402 ರೈತರ ಸಾಲದ ಮಾಹಿತಿ ಸಹಕಾರ ಇಲಾಖೆ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ.
ರಾಜ್ಯ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಸಹಕಾರ ಸಂಘ/ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕೋವಿಡ್‌ನಿಂದ ಮೃತಪಟ್ಟ ಸಾಲಗಾರರ ಮಾಹಿತಿ ಕೊಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಮಾಹಿತಿ ಕಳುಹಿಸಲಾಗಿದ್ದು, ಕೋವಿಡ್‌ನಿಂದ ಮೃತಪಟ್ಟಜಿಲ್ಲೆಯ 402ರೈತರಿಗೆ ಸಂಬಂಧಿಸಿ 2.66 ಕೋಟಿ ರೂ. ಸಾಲದ ಮಾಹಿತಿ ನೀಡಲಾಗಿದೆ.
ಸಹಕಾರ ಸಂಘ/ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಜನವರಿ 2020ರಿಂದ ಕೋವಿಡ್‌ನಿಂದ ಮೃತಪಟ್ಟ ಸಾಲಗಾರರ ಸಾಲದ ಮಾಹಿತಿ ಪರಿಶೀಲನೆಗೆಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಿರುವನಿಬಂಧಕರು, ಕೃಷಿ ಮತ್ತು ಕೃಷಿಯೇತರ ಸಾಲ ಪಡೆದು ಕೋವಿಡ್‌ನಿಂದ ಮೃತಪಟ್ಟ ಸಾಲಗಾರರು30-6-2021ಕ್ಕೆ ಹೊರ ಬಾಕಿ ಹೊಂದಿರುವಸಾಲದ ಮಾಹಿತಿಯನ್ನು ನಿಗದಿತನಮೂನೆಯಲ್ಲಿ ಕ್ರೋಢೀಕರಿಸಿ ಕಚೇರಿಗೆ ಕಳುಹಿಸಬೇಕು ಎಂದು ಸೂಚಿಸಿದ್ದರು.
ಸಂಗ್ರಹಿಸಿದ ಮಾಹಿತಿ: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಸಾಲದ ಖಾತೆ ಇದ್ದಲ್ಲಿ ಮಾತ್ರಮಾಹಿತಿ ಮಾಹಿತಿ ನೀಡಬೇಕು. ಸಾಲ ಪಡೆದಕುಟುಂಬದ ಸದಸ್ಯರು ಕೋವಿಡ್‌ನಿಂದ ಮೃತಪಟ್ಟರೆಅಂಥ ಸಾಲದ ಮಾಹಿತಿ ನಮೂದಿಸುವುದು ಬೇಡಎಂದು ಸಹ ನಿಬಂಧಕರು ನಿರ್ದೇಶಿಸಿದ್ದು, ಆ ಪ್ರಕಾರ ನಿಗದಿತ ನಮೂನೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಸಾಲಗಾರರ ಮಾಹಿತಿ ಕೊಡಲಾಗಿದೆ.
ಸಾಲಗಾರರ ಹೆಸರು, ಸಾಲಗಾರರ ತಂದೆ ಇಲ್ಲವೇ ಗಂಡನ ಹೆಸರು, ತಾಲೂಕು, ಜಿಲ್ಲೆ, ಆಧಾರ್ ಸಂಖ್ಯೆ,ಸಾಲದ ಖಾತೆ ಸಂಖ್ಯೆ, ಸಾಲದ ಉದ್ದೇಶ,ಸಾಲ ಪಡೆದ ಮೊತ್ತ, 30-6-2021ಕ್ಕೆಹೊರ ಬಾಕಿ ಅಸಲು-ಬಡ್ಡಿ, ಮರಣಹೊಂದಿದ ದಿನಾಂಕ, ಕೋವಿಡ್ ಮರಣ ಪ್ರಮಾಣ ಪತ್ರದ ದಿನಾಂಕದ ಮಾಹಿತಿ ನೀಡಲಾಗಿದೆ.
ಈ ವಿಚಾರದಲ್ಲಿ ಸರ್ಕಾರ ಕೋವಿಡ್‌ನಿಂದ ಮೃತಪಟ್ಟ ರೈತರ ಕೃಷಿ ಸಾಲವಷ್ಟೇ ಮನ್ನಾ ಮಾಡುತ್ತದೆಯೋ, ಕೃಷಿಯೇತರ ಸಾಲವನ್ನೂ ಮನ್ನಾ ಮಾಡುತ್ತದೆಯೋ, ಸಾಲದ ಬಡ್ಡಿಯಷ್ಟೇ ಮನ್ನಾ ಮಾಡುತ್ತದೆಯೋ ಇಲ್ಲವೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರು ಘೋಷಿಸಿದಂತೆಗರಿಷ್ಠ ಒಂದು ಲಕ್ಷ ರೂ.ವರೆಗೆ ಮಾತ್ರ ಸಾಲಮನ್ನಾ ಮಾಡುತ್ತದೆಯೋ ಎಂಬುದು ರೈತ ಕುಟುಂಬದವರಲ್ಲಿ ಕುತೂಹಲ ಕೆರಳಿಸಿದೆ.
ಸಾಲಮನ್ನಾಕ್ಕೆ ಪ್ರಸ್ತಾವನೆ: ಸಹಕಾರ ಇಲಾಖೆಯಿಂದ ಕೋವಿಡ್‌ನಿಂದ ಮೃತಪಟ್ಟ ಸಾಲಗಾರರ ಮಾಹಿತಿ ಕೇಳಿದ್ದು, ನಿಗದಿತನಮೂನೆಯಲ್ಲಿ ನಾವು ಮಾಹಿತಿ ಕಳುಹಿಸಿ, ಸಂಪೂರ್ಣ ಸಾಲಮನ್ನಾ ಮಾಡಲು ಮನವಿ ಮಾಡಿದ್ದೇವೆ.ಸಾಲಮನ್ನಾ ವಿಚಾರವಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾಯ್ದು ನೋಡಬೇಕು. –ಜೆ.ಎಸ್. ವೇಣುಗೋಪಾಲರೆಡ್ಡಿ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್, ದಾವಣಗೆರೆ.
ಕೋವಿಡ್‌ನಿಂದ ಮೃತಪಟ್ಟವರ ಸಹಕಾರಿ ಸಂಘಗಳಲ್ಲಿನ ಸಾಲಮನ್ನಾ ಮಾಡುವ ರಾಜ್ಯ ಸರ್ಕಾರ ಚಿಂತನೆ ಸ್ವಾಗತಾರ್ಹ. ಇದರ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲವನ್ನೂ ಮನ್ನಾ ಮಾಡಲು ಕ್ರಮವಹಿಸಬೇಕು.-ತೇಜಸ್ವಿ ಪಟೇಲ್, ರೈತ ಮುಖಂಡರು.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
Davanagere: ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.