ಲಾರಿ ಮುಷ್ಕರ: 5 ದಿನದಲ್ಲಿ ಐದು ಕೋಟಿಗೂ ಹೆಚ್ಚು ನಷ್ಟ


Team Udayavani, Apr 6, 2017, 1:25 PM IST

dvg4.jpg

ದಾವಣಗೆರೆ: ಥರ್ಡ್‌ ಪಾರ್ಟಿ ಪ್ರೀಮಿಯಂ ಹೆಚ್ಚಳ ವಿರೋಧಿಸಿ, ಲೋಡಿಂಗ್‌, ಅನ್‌ ಲೋಡಿಂಗ್‌ ಹಮಾಲಿ ಮಾಮೂಲಿಯನ್ನು ಕಡ್ಡಾಯವಾಗಿ ನಿಲ್ಲಿಸಲು ಒತ್ತಾಯಿಸಿ ಕಳೆದ ಶನಿವಾರದಿಂದ ಆರಂಭಗೊಂಡಿರುವ ಅನಿರ್ದಿಷ್ಟಾವಧಿಯ ಲಾರಿ ಮುಷ್ಕರದಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಉಂಟಾಗಿರುವ 5 ಕೋಟಿಗೂ ಅಧಿಕ!. 

ಥರ್ಡ್‌ ಪಾರ್ಟಿ ಪ್ರೀಮಿಯಮ್‌ ಏಕಾಏಕಿ 27 ಸಾವಿರದಿಂದ 37 ಸಾವಿರಕ್ಕೆ ಹೆಚ್ಚಿಸಿರುವುದನ್ನು ಕೈ ಬಿಡುವುದು ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಭಾರತ ಲಾರಿ ಮಾಲಿಕರ ಸಂಘ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಲಾರಿಗಳು ಕಳೆದ 5 ದಿನದಿಂದ ರಸ್ತೆಗೆ ಇಳಿಯದ ಕಾರಣ ದಿನಕ್ಕೆ ಕೋಟ್ಯಂತರ ನಷ್ಟ ಆಗುತ್ತಿದೆ. 

ದಾವಣಗೆರೆಯಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ನಾಸಿಕ್‌.. ಒಳಗೊಂಡಂತೆ ಇನ್ನಿತರ ಭಾಗಕ್ಕೆ ಪ್ರತಿನಿತ್ಯ ಅಗತ್ಯ ವಸ್ತು, ತರಕಾರಿ ಸಾಗಾಣೆ ನಡೆಯುತ್ತಿತ್ತು. ಅದೇರೀತಿ ವಿವಿಧ ಭಾಗದಿಂದ ದಾವಣಗೆರೆಗೆ ಸರಕು ಬರುತ್ತಿದ್ದವು. ಮುಷ್ಕರದ ಪರಿಣಾಮ ಎಲ್ಲಾ ಸಾಗಾಟ ಅಕ್ಷರಶಃ ಸ್ತಬ್ಧ. ಹಾಗಾಗಿ ಮುಷ್ಕರ ಮುಂದುವರೆಯುತ್ತಿರುವುದರಿಂದ ನಷ್ಟದ ಪ್ರಮಾಣವೂ ಹೆಚ್ಚಾಗಲಿದೆ. 

ಏ. 3ರಂದು ಹೈದರಬಾದ್‌ನಲ್ಲಿ ದಕ್ಷಿಣ ಭಾರತ ಲಾರಿ ಮಾಲಿಕರ ಸಂಘದ ಮುಖಂಡರು ಹಾಗೂ ವಿಮಾ ಕಂಪನಿ ಅಧಿಕಾರಿಗಳ ನಡುವಿನ ಸಭೆ ವಿಫಲಗೊಂಡ ನಂತರ ಮುಷ್ಕರ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ದಕ್ಷಿಣ ಭಾರತ ಲಾರಿ ಮಾಲಿಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಕಾಲದ ಮುಷ್ಕರಕ್ಕೆ ಏ. 8 ರಿಂದ ಅಖೀಲ ಭಾರತ ಲಾರಿ ಮಾಲಿಕರ ಸಂಘವೂ ಕೈ ಜೋಡಿಸಲಿರುವುದರಿಂದ ಉತ್ತರ ಭಾರತದ ಲಾರಿಗಳು ದಕ್ಷಿಣ ಭಾರತಕ್ಕೆ ಬರುವುದು ಸ್ಥಗಿತಗೊಂಡಲ್ಲಿ ನಷ್ಟ ಹೆಚ್ಚಾಗುವುದು ನಿಶ್ಚಿತ. 

ಲಾರಿ ಮುಷ್ಕರದ ಬಿಸಿ ನಿಧಾನವಾಗಿ ಸಾರ್ವಜನಿಕರಿಗೆ ತಟ್ಟುತ್ತಿದೆ. ಸತತ ಮಳೆಯ ಕೊರತೆಯಿಂದ ಅಗತ್ಯ ವಸ್ತುಗಳು, ತರಕಾರಿ ಬೆಲೆ ಹೆಚ್ಚಳವಾಗಿದೆ. ಇನ್ನು ಸಾಗಾಣಿಕೆ ಕ್ರಮೇಣವಾಗಿ ನಿಲ್ಲುವುದರಿಂದ ಬೆಲೆ ಹೆಚ್ಚಳದ ಬಿಸಿಯನ್ನು ಜನರು ಅನಿವಾರ್ಯವಾಗಿ ಅನುಭವಿಸಬೇಕಾಗುತ್ತದೆ.  ಸದ್ಯಕ್ಕಂತೂ ಪೆಟ್ರೋಲ್‌, ಡೀಸೆಲ್‌ ಟ್ಯಾಂಕರ್‌ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲದ ಕಾರಣ ದ್ವಿಚಕ್ರ, ಕಾರು, ಬಸ್‌ ಇತರೆ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಕೊರತೆ ಕಾಡುತ್ತಿಲ್ಲ. ಮುಂದೆ ಟ್ಯಾಂಕರ್‌ ಸಂಚಾರವೂ ನಿಂತಲ್ಲಿ ಜನರು ಮತ್ತಷ್ಟು ಹೊಸ ಸಮಸ್ಯೆಗೀಡಾಗುತ್ತಾರೆ. 

ನಗರದಲ್ಲಿ 50-60 ಲಕ್ಷ ನಷ್ಟ…: ಲಾರಿ ಮುಷ್ಕರದಿಂದ ವಾಣಿಜ್ಯ ನಗರಿ ದಾವಣಗೆರೆಯಲ್ಲಿ 2 ಸಾವಿರ ಲಾರಿ, 500ಕ್ಕೂ ಹೆಚ್ಚು ಮಿನಿ ಲಾರಿಗಳು ರಸ್ತೆಗೆ ಇಳಿಯದೇ ಈವರೆಗೆ 50-60 ಲಕ್ಷ  ನಷ್ಟವಾಗಿದೆ. ಸರಕು, ತರಕಾರಿ ಸಾಗಾಣಿಕೆಯಿಂದ ಪ್ರತಿ ದಿನ 8 ರಿಂದ 10 ಲಕ್ಷದ ವರೆಗೆ ವಹಿವಾಟು ನಡೆಯುತ್ತಿತ್ತು.

ಮುಷ್ಕರದಿಂದಾಗಿ ಅನಿವಾರ್ಯದ ರಜೆಯಲ್ಲಿರುವ ಚಾಲಕರು, ಕೀÉನರ್‌ ಇತರರು ದಿನ ಲಾರಿ ನಿಲ್ಲಿಸಿರುವ ಸ್ಥಳಕ್ಕೆ ಬರುವುದು, ಸಾಕಾಗುವಷ್ಟು ಕಾಲ ಅಲ್ಲೇ ಇರುವುದು, ಮನೆಗೆ ತೆರಳುವುದು ಸಾಮಾನ್ಯ. ಲಾರಿ ನಿಂತಿರುವುದು ದೈನಂದಿಕ ಜೀವನ ನಿರ್ವಹಣೆಯ ತೊಂದರೆಗೆ ಕಾರಣವಾಗುತ್ತದೆ. ಅವರಲ್ಲಿ ಚಿಂತೆ ಹೆಚ್ಚಾಗುತ್ತಿದೆ. ಸರ್ಕಾರ ಏನಾದರೂ ಮಾಡಿ ಸಮಸ್ಯೆ ಬಗೆಹರಿಸಿದರೆ ಸಾಕು ಎನ್ನುವ ಭಾವನೆ ವ್ಯಕ್ತವಾಗುತ್ತಿದೆ. 

ಮಾರ್ಕೇಟ್‌ ಭಣ ಭಣ…: ಲಾರಿ ಮುಷ್ಕರದಿಂದ ಸದಾ ಗಿಜಿಗುಡುತ್ತಿದ್ದ ಈರುಳ್ಳಿ, ಎಪಿಎಂಸಿ ಮಾರ್ಕೆಟ್‌ನಲ್ಲಿ ಎಲ್ಲಾ ವಹಿವಾಟು ಸ್ತಬ್ದ. ದಿನಕ್ಕೆ 10-20 ಲಾರಿ ಲೋಡ್‌ ಈರುಳ್ಳಿ ಬೇರೆ ಕಡೆಗೆಲ್ಲಾ ಟ್ರಾನ್ಸ್‌ಪೊàರ್ಟ್‌ ಆಗುತ್ತಿತ್ತು. ಬೇರೆ ಕಡೆಯಿಂದ ಸಾಕಷ್ಟು ಮಾಲು(ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ) ಬರುತ್ತಿತ್ತು. ಏ. 1 ರಿಂದ ಎಲ್ಲವೂ ನಿಂತಿದೆ. ಮುಷ್ಕರ ಇನ್ನೂ ಮುಂದುವರೆಯುತ್ತೆ ಎನ್ನಲಾಗುತ್ತಿದೆ.

ಹಾಗಾಗಿ ನಾವು ಲಾಸ್‌ ಅನುಭವಿಸಲೇಬೇಕಾಗುತ್ತದೆ ಎನ್ನುತ್ತಾರೆ ಈರುಳ್ಳಿ ವರ್ತಕರಾದ ಎಸ್‌.ವಿ.ಟಿ. ರಾಜಣ್ಣ ಇತರರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಲ್ಲಿಯೋ ಒಂದರೆಡು ಕಡೆ ಮೆಕ್ಕೆಜೋಳ, ಭತ್ತದ ತೂಕ ನಡೆಯುತ್ತಿದೆ. ಬೇರೆ ಕಡೆಯಿಂದ ಬಂದು ನಿಂತಿರುವ ಲಾರಿ ಬಿಟ್ಟರೆ ಧಾವಂತದಿಂದ ದೌಡಾಯಿಸುತ್ತಿದ್ದ ಲಾರಿಗಳು ಈಗ ಕಂಡು ಬರುತ್ತಿಲ್ಲ.  

* ರಾ.ರವಿಬಾಬು

ಟಾಪ್ ನ್ಯೂಸ್

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Davanagere: Special tax operation: 1.65 crore tax collection in a single day

Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ

Siddaramaiah will resigns before Assembly session: R. Ashok

Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್

Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್‌ ಜೋಶಿ

Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್‌ ಜೋಶಿ

Davanagere: ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Davanagere: ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.