ಮಲಿನ ಸಮಾಜ ಮಡಿ ಮಾಡಿದ ಮಾಚಿದೇವರು
Team Udayavani, Feb 2, 2019, 5:08 AM IST
ದಾವಣಗೆರೆ: 12ನೇ ಶತಮಾನದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಮೈಲಿಗೆಯಾಗಿದ್ದ ಸಮಾಜದ ವಾತಾವರಣವನ್ನು ಮಡಿ ಮಾಡಿದ ಕೀರ್ತಿ ಬಸವಾದಿಶರಣರನ್ನು ಒಳಗೊಂಡಂತೆ ಶ್ರೀ ಮಡಿವಾಳ ಮಾಚಿದೇವ ಶ್ರೀಗಳಿಗೆ ಸಲ್ಲುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಪ್ರಾಧ್ಯಾಪಕ ಡಾ| ಪ್ರಕಾಶ್ ಹಲಗೇರಿ ಅಭಿಪ್ರಾಯಪಟ್ಟರು.
ವಿನೋಬಾನಗರದ ಶ್ರೀ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಾಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಸಮಪಾತಳಿಯ ಕಾಲಘಟ್ಟವಾದ 12ನೇ ಶತಮಾನದ ಆರಂಭದಲ್ಲಿ ಭಾಷಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಸ್ತ್ರೀಯರ ಶೋಷಣೆ ಹೆಚ್ಚಿತ್ತು. ವರ್ಗ, ವರ್ಣಭೇದ ಜೀವಂತವಾಗಿತ್ತು. ಇಂತಹ ಸಂದರ್ಭದಲ್ಲಿ ಬಸವಾದಿ ಶರಣರು ಒಳಗೊಂಡಂತೆ ಮಾಚಿದೇವ ಶ್ರೀಗಳು ವಚನ ರಚನೆ, ಕಾಯಕ ಪ್ರಜ್ಞೆಯ ಜೊತೆಗೆ ಸಮಾಜದ ಅನಿಷ್ಠ ಧೋರಣೆಗಳನ್ನು ಬುಡಸಮೇತ ಕಿತ್ತುಹಾಕಲು ಪ್ರಯತ್ನಿಸಿದರು. ಮಲೀನವಾಗಿದ್ದ ಸಮಾಜದ ವಾತಾವರಣವನ್ನು ಮಡಿ ಮಾಡಿದರು ಎಂದರು.
ಮಡಿವಾಳ ಮಾಚಿದೇವ ಶ್ರೀಗಳ 354 ವಚನಗಳು ಸದ್ಯಕ್ಕೆ ದೊರಕಿದ್ದು, ಅವರೆಂದಿಗೂ ಕಾಯಕದಿಂದ ವಿಮುಕ್ತರಾಗಿರಲಿಲ್ಲ. ತಮ್ಮ ಸಮಾಜದ ಕಾಯಕವಾದ ಬಟ್ಟೆ ಒಗೆಯುವ ಕಾಯಕದ ಮೂಲಕವೇ ವೃತ್ತಿ ಬದುಕಿಗೆ ಘನತೆ, ಗೌರವ, ಕೀರ್ತಿ ತಂದುಕೊಟ್ಟರು. ದೇವರನ್ನು ಗುಡಿಯಲ್ಲಿ ಕಾಣುವ ಬದಲು, ತಾವಿರುವ ನೆಲೆ, ಕಾಯಕದಲ್ಲಿ ಕಾಣುವಂತವರಾಗಿ ಎಂದು ಜಡಗಟ್ಟಿದ ಅಪಮೌಲ್ಯಗಳನ್ನು ಶುದ್ಧೀಕರಣಗೊಳಿಸಿದವರು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಬಿಜ್ಜಳ ರಾಜನ ಆಸ್ಥಾನದಿಂದ ಬಸವಣ್ಣನವರನ್ನು ಓಡಿಸಿದಾಗ ಮಡಿವಾಳ ಮಾಚಿದೇವ ಶ್ರೀಗಳು ಕತ್ತಿ ಹಿಡಿದು ಉಳಿಸುವುದಕ್ಕೆ ಮುಂದಾಗುತ್ತಾರೆ. ಅಷ್ಟರ ಮಟ್ಟಿಗೆ ಧೈರ್ಯ, ಶಕ್ತಿಯುಳ್ಳವರು ಆಗಿದ್ದರು ಎಂದರಲ್ಲದೇ, ಸಮಾಜದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪಾಲಿಕೆ ಸದಸ್ಯ ಎಚ್.ಜಿ. ಉಮೇಶ್ ಮಾತನಾಡಿ, ಮಾಡಿವಾಳ ಸಮಾಜ ದುರ್ಬಲವಾಗಿದ್ದು, ಆರ್ಥಿಕ, ಶೈಕ್ಷಣಿಕ. ರಾಜಕೀಯವಾಗಿ ಹಿಂದುಳಿದಿದೆ. 12ನೇ ಶತಮಾನದಿಂದ ಹಿಡಿದು ಇಲ್ಲಿಯವರೆಗೂ ಶೋಷಣೆಯಲ್ಲಿ ಬದುಕುತ್ತಿದೆ. ಅಸಮಾನತೆ ನಿವಾರಣೆ ಆಗಿಲ್ಲ. ತಮಿಳುನಾಡಿನಲ್ಲಿ ಬಟ್ಟೆ ತೊಳೆದುಕೊಂಡು ಮನೆಗೆ ತೆಗೆದುಕೊಂಡು ಹೋದರೆ ಬಾಗಿಲಿಗೂ ಬಿಟ್ಟುಕೊಳ್ಳುವುದಿಲ್ಲ. ಮೈ ಸೋಕುವ ರೀತಿಯಲ್ಲಿ ಮುಟ್ಟುವುದಿಲ್ಲ. ಇದು ನಿಜಕ್ಕೂ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದ ಅಸಮಾನತೆ ನಿವಾರಣೆಗೆ ಸಮಾಜದ ಮಕ್ಕಳು ಜ್ಞಾನವಂತರಾಗಬೇಕು. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ವೃತ್ತಿಗೆ ತಮ್ಮ ಮಕ್ಕಳನ್ನು ಬಳಸಿಕೊಳ್ಳದೇ ಉತ್ತಮ ಶಿಕ್ಷಣ ಕೊಡಿಸಿ. ಉನ್ನತ ಸ್ಥಾನಗಳಲ್ಲಿ ಗುರ್ತಿಸಿಕೊಳ್ಳಲು ಪ್ರೋತ್ಸಾಹ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ತಹಶೀಲ್ದಾರ್ ಸಂತೋಷ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ಎಂ.ಎನ್. ಸತೀಶ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾಮೇಳದೊಂದಿಗೆ ಶ್ರೀ ಮಡಿವಾಳ ಮಾಚಿದೇವ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಈ ವೇಳೆ ಡೊಳ್ಳುಕುಣಿತ, ಕಹಳೆ ಸೇರಿದಂತೆ ಇಫ್ತಿಯಾರ್ ಕಲಾವಿದರು ಸುಮಧುರ ಗೀತೆಗಳನ್ನು ಮೆರವಣಿಗೆಯುದ್ದಕ್ಕೂ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.