ಕೆಟ್ಟಿದ್ದ ರಸ್ತೆ ದುರಸ್ತಿ ಮಾಡಿದ್ರು, ಉದ್ಘಾಟಿಸಿದ್ರು..!
Team Udayavani, Jan 2, 2017, 12:04 PM IST
ದಾವಣಗೆರೆ: ರಸ್ತೆ ತುಂಬೆಲ್ಲಾ ಮಾರುದ್ದುದ ಗುಂಡಿಗಳು, ವಾಹನಗಳು ಇರಲಿ ಜನರು ಓಡಾಡುವುದಕ್ಕೂ ಯೋಚಿಸಬೇಕಾದ ಸ್ಥಿತಿ. ಸರಿಪಡಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿಕೊಂಡರು. ಆದರೆ, ಎಂದಿನಂತೆ ಪ್ರಯೋಜನವಾಗಲಿಲ್ಲ.
ಏನು ಮಾಡುವುದು ಎಂದು ಯೋಚಿಸಿದ ನಿವಾಸಿಗಳು ತಾವೇ ರಸ್ತೆ ದುರಸ್ತಿಗೆ ಮುಂದಾದರು. ತಾತ್ಕಾಲಿಕವಾಗಿ ದುರಸ್ತಿ ಮಾಡಿದರು ಮಾತ್ರವಲ್ಲ ತಾವೇ ಉದ್ಘಾಟಿಸಿದರು. ಇದು ಮಹಾನಗರ ಪಾಲಿಕೆ ವ್ಯಾಪ್ತಿಯ 17ನೇ ವಾರ್ಡಿನಲ್ಲಿರುವ ಮೈಸೂರು ಮಠದ ರಸ್ತೆ ನಿವಾಸಿಗಳ ಕಥೆ.
ತುಂಬಾ ಗುಂಡಿಗಳಿಂದ ಹಾಳಾಗಿದ್ದು, ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಈ ವಿಷಯವನ್ನು ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಧಿಕಾರಿಗಳ ಗಮನಕ್ಕೆ ತರಲಾಯಿತು. ಯಾವ ಅಧಿಧಿಕಾರಿಗಳು ಗಮನ ಹರಿಸಲಿಲ್ಲ. ಕೊನೆಗೆ ಸ್ಥಳೀಯ ನಾಗರಿಕರು ಹಾಗೂ ಯುವಕರು ತಾತ್ಕಾಲಿಕವಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ವಾಹನ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ.
ಹಾಳಾಗಿದ್ದ ರಸ್ತೆಯನ್ನು ದುರಸ್ತಿ ಮಾಡಿ ಉದ್ಘಾಟನೆಯನ್ನೂ ಮಾಡಿದರು. ರಾಜು ನೀಲಗುಂದ (ಕಭಿ), ರಾಕೇಶ್ ಜಾಧವ್, ಮಲ್ಲಿಕಾರ್ಜುನ್, ಬೇಕರಿ ವಿರುಪಾಕ್ಷ, ಮಂಜು, ಸಿ.ಸಿ. ತಿಲಕ್ , ಉಮೇಶ್, ಪ್ರಭು, ಸಂತೋಷ್, ಮಧು, ಮಾಲತೇಶ್, ಪರಶು, ಅಂಜಿನಿ, ಮುಬಾರಕ್, ಪವನ್, ಮಲ್ಲೇಶ್, ಪ್ರಭು, ರಮೇಶ್ ಇತರರು ಈ ಕಾರ್ಯದಲ್ಲಿ ಕೈ ಜೋಡಿಸಿದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.