ಮತಗಟ್ಟೆಗಳಲ್ಲಿ ‘ಮದ್ಯ ಪರೀಕ್ಷೆ’ ಕಡ್ಡಾಯಗೊಳಿಸಿ!

ಚುನಾವಣಾ ಆಯೋಗಕ್ಕೆ ನಾಗರಿಕರ ವಿಶಿಷ್ಟ ಸಲಹೆ

Team Udayavani, May 15, 2022, 2:47 PM IST

drinks

ದಾವಣಗೆರೆ: ಭಾರತದ ಸಂವಿಧಾನ ನಾಗರಿಕರಿಗೆ ನೀಡಿದ ಅಮೂಲ್ಯವಾದ ಮತದಾನದ ಹಕ್ಕು ಹೆಂಡದ ಹಾವಳಿಯಿಂದ ಯೋಗ್ಯ ರೀತಿಯಲ್ಲಿ ಚಲಾವಣೆಯಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಚುನಾವಣಾ ಆಯೋಗ, ಎಲ್ಲ ಮತಗಟ್ಟೆಗಳಲ್ಲಿ ಉಸಿರು ಪರೀಕ್ಷಾ ಯಂತ್ರ (Breath analyzer tester) ಅಳವಡಿಸಬೇಕು ಹಾಗೂ ಮದ್ಯ ಸೇವಿಸಿ ಬಂದವರಿಗೆ ಮತದಾನ ಹಕ್ಕು ನಿಷೇಧಿಸಬೇಕು ಎಂಬ ಸಲಹೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಪ್ರತಿಯೊಬ್ಬ ನಾಗರಿಕ ಸಾಕಷ್ಟು ಆಲೋಚಿಸಿ, ಪರಾಮರ್ಶಿಸಿ ತನ್ನ ಹಕ್ಕು ಚಲಾಯಿಸಬೇಕು. ಮತ ಚಲಾಯಿಸುವಾಗ ಮತದಾರ ಯಾವುದೇ ನಶೆಯಲ್ಲಿರದೇ ಸ್ವಚ್ಛ ಮನಸ್ಸಿನಿಂದ ಆಲೋಚಿಸಿ ಮತ ಚಲಾಯಿಸಬೇಕು. ಜತೆಗೆ ಮತದಾನ ಸಂದರ್ಭದಲ್ಲಿ ಮದ್ಯದ ಆಮಿಷಕ್ಕೆ ಯಾರೂ ಒಳಗಾಗಬಾರದು ಎಂದು ಚುನಾವಣಾ ಆಯೋಗ ಮತದಾನದ ಮುನ್ನ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡುತ್ತದೆ. ಆದರೂ ಹಲವೆಡೆ ಹಂಚಿಕೆಯಾದ ಉಚಿತ ಮದ್ಯ ಕುಡಿದು, ನಶೆಯಲ್ಲೇ ಮತ ಚಲಾಯಿಸುವುದು ಮಾಮೂಲು ಆಗಿರುವುದು ಕಟು ಸತ್ಯ.

ಮದ್ಯ ಕುಡಿದು ಮತಗಟ್ಟೆಗೆ ಬಂದು ಮತ ಚಲಾಯಿಸುವುದನ್ನು ತಡೆಯಲು ಎಲ್ಲ ಮತಗಟ್ಟೆಗಳಲ್ಲಿ ಉಸಿರು ತಪಾಸಣೆ ಮಾಡುವ (ಕುಡಿದು ವಾಹನ ಚಾಲನೆ ಮಾಡುವರನ್ನು ಪತ್ತೆ ಹಚ್ಚಲು ಪೊಲೀಸರು ಉಸಿರು ಪರೀಕ್ಷೆ ಮಾಡುವಂತೆ) ವ್ಯವಸ್ಥೆಯಾಗಬೇಕು. ತನ್ಮೂಲಕ ಮತದಾನದಲ್ಲಿ ಒಂದಿಷ್ಟು ಸುಧಾರಣೆ ತರಬಹುದು ಎಂಬುದು ಈ ಸಲಹೆಯ ಹಿಂದಿನ ಉದ್ದೇಶವಾಗಿದೆ.

ಆಯೋಗಕ್ಕೆ ಪತ್ರ

ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಚನ್ನಗಿರಿ ಅವರು ಈ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗವು ಮತದಾನದ ಹಿಂದಿನ 48 ಗಂಟೆ ಅವಧಿ ಎಲ್ಲ ತರಹದ ಮದ್ಯದ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದರೂ ಅಕ್ರಮವಾಗಿ ಮದ್ಯ ಶೇಖರಿಸಿ ಮತದಾರರಿಗೆ ಸರಬರಾಜು ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇರುವುದು ಗುಟ್ಟಾಗಿ ಉಳಿದಿಲ್ಲ.

ಆದ್ದರಿಂದ ಆಯೋಗ ಮತದಾನ ಮಾಡುವ ಸಂದರ್ಭದಲ್ಲಿ ವ್ಯಕ್ತಿ ಮದ್ಯಪಾನ ಮಾಡಿರಬಾರದು ಎಂಬ ನಿಯಮ ಜಾರಿಗೆ ತರಬೇಕು. ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಉಸಿರು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು. ಮದ್ಯ ಸೇವಿಸಿ ಬಂದವರಿಗೆ ಮತದಾನದ ಹಕ್ಕು ನಿರ್ಬಂಧಿಸಬೇಕು. ಇದರಿಂದ ಮತದಾನ ವಿವೇಚನೆಯಿಂದ ಮಾಡಲು ಸಾಧ್ಯವಾಗುತ್ತದೆ. ಕುಡಿದು ಗಲಾಟೆ ಮಾಡುವುದು ನಿಯಂತ್ರಣಕ್ಕೆ ಬರುತ್ತದೆ. ಮತದಾನ ಯೋಗ್ಯರೀತಿಯಲ್ಲಿ ನಡೆದು ಯೋಗ್ಯ ವ್ಯಕ್ತಿ ಆಯ್ಕೆಗೆ ಸಹಕಾರಿಯಾಗಬಹುದು ಎಂದು ಸಲಹೆ ನೀಡಿದ್ದಾರೆ. ಸಾರ್ವಜನಿಕರು ನೀಡುತ್ತಿರುವ ಈ ಸಲಹೆಯನ್ನು ಚುನಾವಣಾ ಆಯೋಗ ಕಾನೂನು ವ್ಯಾಪ್ತಿಯಲ್ಲಿ ಪರಿಶೀಲಿಸಿ, ಸ್ವೀಕರಿಸುತ್ತದೆಯೋ ನಿರಾಕರಿಸುತ್ತದೆಯೋ ಕಾದು ನೋಡಬೇಕಿದೆ.

ಮತದಾನ ಹಕ್ಕು ಮಹತ್ವದ್ದಾಗಿದ್ದು ಇದನ್ನು ಚಲಾಯಿಸುವಾಗ ವ್ಯಕ್ತಿ ಯಾವುದೇ ನಶೆಯಲ್ಲಿರಬಾರದು. ಪ್ರತಿ ಮತಗಟ್ಟೆ ದ್ವಾರದಲ್ಲಿ ಉಸಿರು ತಪಾಸಣೆ ಯಂತ್ರ ಅಳವಡಿಸುವ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರಿಗೆ ಪತ್ರ ಬರೆದಿದ್ದೇನೆ. ಆಯೋಗ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲ ಕೆರಳಿಸಿದೆ. -ಚಂದ್ರಶೇಖರ್‌ ಚನ್ನಗಿರಿ, ಸಾಮಾಜಿಕ ಕಾರ್ಯಕರ್ತ

ಟಾಪ್ ನ್ಯೂಸ್

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.