ಮಕ್ಕಳನ್ನು ಸಾಹಿತ್ಯ ರಾಯಭಾರಿಗಳಾಗಿಸಿ
ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಸಾಹಿತ್ಯದ ಅಭಿರುಚಿ ಬೆಳೆಸಿ: ಹೇಮಲತಾ ಕರೆ
Team Udayavani, May 30, 2022, 2:13 PM IST
ದಾವಣಗೆರೆ: ಮಕ್ಕಳನ್ನು ಸಾಹಿತ್ಯ, ಸಾಹಿತ್ಯದ ರಾಯಭಾರಿಗಳನ್ನಾಗಿ ಬೆಳೆಸಬೇಕು ಎಂದು ಬೆಂಗಳೂರಿನ ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ ಸಿ.ಸಿ. ಹೇಮಲತಾ ಹೇಳಿದರು.
ಜಿಲ್ಲಾ ಕನ್ನಡ, ಚುಟುಕು ಸಾಹಿತ್ಯ ಪರಿಷತ್, ಜನಮಿಡಿತ ದಿನಪತ್ರಿಕೆ, ಭಾವ ಸಿರಿ ಪ್ರಕಾಶನ, ಗಾನಶ್ರೀ ಸ್ವರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೆ.ಪಿ. ಅಣಬೇರು ತಾರೇಶ್ ಅವರ ನಾಲ್ಕನೇ ಕವನ ಸಂಕಲನ ‘ನೀರ ಮೇಲಿನ ರಂಗೋಲಿ’ ಮತ್ತು ‘ಹಳ್ಳಿಹೈದನ ನೊಂದ ಹಾಡು’ ಎಂಬ ಮಕ್ಕಳ ಗೀತೆಗಳ ಧ್ವನಿಸುರುಳಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮೊಬೈಲ್ ದಾಸ್ಯತನಕ್ಕೆ ಒಳಗಾಗುತ್ತಿರುವ ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ, ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ ಎಂದರು.
ಇಂದಿನ ಸ್ಪರ್ಧಾತ್ಮಕ, ತಂತ್ರಜ್ಞಾನ ಯುಗದಲ್ಲಿ ಪೋಷಕರು ಮಕ್ಕಳ ಪ್ರತಿಭೆ ಗುರುತಿಸದೆ ಓದುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬರೀ ಓದಿನಿಂದ ಏನೂ ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಓದಿನ ಜೊತೆಗೆ ಅವರು ಇಷ್ಟಪಡುವ ಕ್ಷೇತ್ರದ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಮೂಲಕ ಸೂಕ್ತ ವಾತಾವರಣ, ವೇದಿಕೆ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.
ನಮ್ಮ ಕಾಲಘಟ್ಟದಲ್ಲಿ ಸಾಂಸ್ಕೃತಿಕ, ಕವನ ಕಮ್ಮಟಗಳು ನಡೆಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಚಿಂತನೆ ಬೆಳಸಲಾಗುತ್ತಿತ್ತು. ಆದರೆ ಈಗ ಸಾಹಿತ್ಯದ ಕಮ್ಮಟ, ವಿಚಾರಸಂಕಿರಣಗಳು ವಿರಳವಾಗಿವೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಚಿಂತನೆ, ಆಸಕ್ತಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಈಗ ಹೆಚ್ಚಿನ ಸಾಹಿತಿಗಳಲ್ಲಿ ನಾವು ಬೆಳೆದರೆ ಸಾಕು ಎಂಬ ಭಾವನೆ ಇದೆ. ಮುಂದಿನ ತಲೆಮಾರನ್ನು ಬೆಳೆಸುವಂತಹ ನಿಟ್ಟಿನಲ್ಲಿ ಕೊಡುಗೆ ಏನು ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಹಿರಿಯ ಸಾಹಿತಿಗಳು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಾಹಿತ್ಯದ ಚಟುವಟಿಕೆಯನ್ನು ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜಾನಪದ ಸಾಹಿತ್ಯ ಯಾವುದೇ ವಿದ್ವಾಂಸರಿಂದ ಹುಟ್ಟಿಲ್ಲ. ಅದು ಹಳ್ಳಿಗಾಡಿನಿಂದ ಬಂದ ಸಾಹಿತ್ಯ. ಈಗ ಶಿಷ್ಟ ಸಾಹಿತ್ಯ ರೂಪಕ್ಕೆ ತಲುಪಿದೆ. ಅದರಲ್ಲೂ ಕನ್ನಡ ಭಾಷೆ ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಸಾಹಿತ್ಯದಲ್ಲಿ ಅನೇಕ ವಿಧಾನಗಳಲ್ಲಿ ಕವನ ಶ್ರೇಷ್ಠವಾದ ವಿಧಾನವಾಗಿದೆ. ಅಂತಹದ್ದೇ ಮಾದರಿಯಲ್ಲಿ ತಾರೇಶ್ ಅಣಬೇರು ಅವರ “ನೀರಿನ ಮೇಲಿನ ರಂಗೋಲಿ’ ಕವನ ಸಂಕಲನವಾಗಿದೆ ಎಂದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಚ್. ರಾಜಶೇಖರ್ ಗುಂಡಗಟ್ಟಿ, ಅಣಬೇರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಣಬೇರು ಶಿವಮೂರ್ತಿ, ಡಾ| ಶಶಿಕಲಾ ಕೃಷ್ಣಮೂರ್ತಿ, ಡಾ| ಪ್ರೀತಿ, ಗಂಗಮ್ಮ ಪರಮೇಶ್ವರಪ್ಪ, ಕವಿ ಕೆ.ಪಿ. ಅಣಬೇರು ತಾರೇಶ್, ಉಮಾದೇವಿ ಇತರರು ಇದ್ದರು.
ಎಲ್ಲರಂತೆ ಸಾಹಿತಿಗಳಿಗೂ ಸಾವಿದೆ. ಆದರೆ ಅವರ ಸಾಹಿತ್ಯಕ್ಕೆ ಎಂದೆಂದಿಗೂ ಸಾವಿಲ್ಲ. ಸಾಹಿತ್ಯದ ಚಿಂತನೆಗಳು ಪ್ರಪಂಚದಲ್ಲಿ ಸೂರ್ಯ-ಚಂದ್ರ ಇರುವವರೆಗೂ ಪುಸ್ತಕಗಳಲ್ಲಿ ಇರುತ್ತವೆ. –ಸಿ.ಸಿ. ಹೇಮಲತಾ, ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.