ಮಾವು ಕಳ್ಳನಿಂದ ಪೇದೆ ಮೇಲೆ ಹಲೆ
Team Udayavani, Mar 30, 2018, 10:10 AM IST
ದಾವಣಗೆರೆ: ಮಾವು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದ ಪೇದೆಯನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ ಘಟನೆ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ. ಬಡಾವಣೆ ಠಾಣೆ ಪೇದೆ ಇಟಗಿ ಸಿದ್ದಪ್ಪ ಹಲ್ಲೆಗೊಳಗಾದವರು. ಬುಧವಾರ ಬೆಳಗಿನ ಜಾವ 2.30ರ ವೇಳೆಗೆ ದೇವರಾಜ ಅರಸು ಬಡಾವಣೆಯ 2ನೇ ತಿರುವಿನಲ್ಲಿನ ವೀರೇಶ್ ಎಂಬುವರ ಮನೆ ಮುಂದಿದ್ದ ಮಾವಿನ ಗಿಡದಲ್ಲಿ ಮಾವಿನ ಕಾಯಿ ಕಳವು ಮಾಡುತ್ತಿರುವ ಕುರಿತು ದೂರು ನೀಡಲಾಗಿತ್ತು. ಸ್ಥಳಕ್ಕೆ ಹೋದ ಪೇದೆಗಳಾದ ಇಟಗಿ ಸಿದ್ದಪ್ಪ, ಇನಾಯತ್ ಮಾವಿನ ಕಾಯಿ ಕಳವು ಮಾಡುತ್ತಿದ್ದ ಜಾಲಿನಗರ ನಿವಾಸಿ ಅಸ್ಗರ್ ಆಲಿ ಪೇದೆ ಸಿದ್ದಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ.
ಜೊತೆಗೆ ಪ್ರಾಣ ಬೆದರಿಕೆ ಸಹ ಹಾಕಿದ್ದಾನೆ. ಹಲ್ಲೆ ಮಾಡುವ ವೇಳೆ ಜಮಾಯಿಸಿದ ಸಾರ್ವಜನಿಕರು ಆರೋಪಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದು ಪೊಲೀಸ್ ಅಧಿಕಾರಿಗಳು ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸ್ ಮೇಲೆ ಹಲ್ಲೆ
ದಾವಣಗೆರೆ: ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಮುಖ್ಯ ಪೇದೆ ಮತ್ತು ಹೋಂಗಾರ್ಡ್ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ,
ಘಟನಾ ಸ್ಥಳಕ್ಕೆ ಬಂದ ಎಎಸ್‌ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಎಸ್.ಎಸ್. ಬಡಾವಣೆಯ ಎ.ಆರ್. ಮಂಜುನಾಥ(28), ನಿಟುವಳ್ಳಿ ಧನುಷ್(28) ಹಲ್ಲೆಮಾಡಿದ ಆರೋಪಿಗಳು. ವಿದ್ಯಾನಗರ ಠಾಣೆಯ ಮುಖ್ಯ ಪೇದೆ ಮಲ್ಲೇಶ್ ಹಾಗೂ ಅವರ ಜೊತೆಗಿದ್ದ ಹೋಂ ಗಾರ್ಡ್ ಯುವರಾಜ್ ಹಲ್ಲೆಗೊಳಗಾದವರು. ರಾತ್ರಿ ಅವರಿಬ್ಬರು ಗಸ್ತಿನಲ್ಲಿದ್ದಾಗ ಕುಂದುವಾಡ ಕೆರೆ ಬಳಿ ಮಧ್ಯ ರಾತ್ರಿ 2 ಗಂಟೆ ವೇಳೆ ಬೈಕ್ ನಲ್ಲಿ ಬಂದ ಯುವಕರನ್ನು ತಡೆದು ವಿಚಾರಿಸಿದಾಗ ಅವರು ಏಕಾಏಕಿ ದಾಳಿ ಮಾಡಿದರು. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್‌ಐ ಎಂ. ವಿಜಯ್ ಜತೆಗೂ ಆ ಯುವಕರು ಅದೇ ಧಾಟಿಯಲ್ಲಿ ಮಾತನಾಡಿದ್ದಾರೆ. ಯವಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ರಾ.ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್; ಇಬ್ಬರ ಬಂಧನ, 2 ಬೈಕ್ ವಶ
Davanagere: ಸಿದ್ದಗಂಗಾ ಶ್ರೀ ರಾಷ್ಟ್ರಸಂತನೆಂದು ಘೋಷಿಸಿ: ಕೂಡಲಸಂಗಮ ಶ್ರೀ
Davanagere: ಮೀಸಲಾತಿಗಾಗಿ ಇನ್ನು ಮುಂದೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ: ಪಂಚಮಸಾಲಿ ಶ್ರೀ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ