‘ಮರಳಿ ಮನಸಾಗಿದೆ’ ಚಿತ್ರದ ಚಿತ್ರೀಕರಣ ಆರಂಭ
ಕಾಲೇಜು ವಿದ್ಯಾರ್ಥಿಗಳ ನಡುವಿನ ಪ್ರೇಮ-ಕೌಟುಂಬಿಕ ಭಾವನೆಯ ಚಿತ್ರವಿದು: ನವೀನ್‌ಕುಮಾರ್
Team Udayavani, May 6, 2022, 2:43 PM IST
ದಾವಣಗೆರೆ: ನವಿರಾದ ಪ್ರೇಮ, ಸಂಗೀತ ಪಯಣ, ಮನುಷ್ಯರ ಭಾವನೆಗಳ ಸುತ್ತ ನಡೆಯುವ ಕಥಾ ಹಂದರದ ‘ಮರಳಿ ಮನಸಾಗಿದೆ’ ಚಿತ್ರ ಮುಂದಿನ ಮಾರ್ಚ್ ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಆರ್.ಓ. ನವೀನ್‌ಕುಮಾರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮರಳಿ ಮನಸಾಗಿದೆ’ ಚಿತ್ರದ ಕಥೆಗೆ ಪೂರಕವಾಗಿ ಋತುಮಾನ ಆಧಾರಿತವಾಗಿ ಚಿತ್ರವನ್ನು ಆರು ಷೆಡ್ನೂಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ನವೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳಿಸಿ ಮಾರ್ಚ್ ನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು.
ಕಾಲೇಜು ವಿದ್ಯಾರ್ಥಿಗಳ ನಡುವಿನ ಪ್ರೇಮ ಭಾವನೆ, ಕೌಟುಂಬಿಕ ಸೆಂಟಿಮೆಂಟ್ ಮುಂತಾದ ಅಂಶಗಳ ಒಳಗೊಂಡಿರುವ ಶೇ. 100 ಲವ್ ಸ್ಟೋರಿಯ ಪಕ್ಕಾ ಕಮರ್ಷಿಯಲ್ ಚಿತ್ರ ‘ಮರಳಿ ಮನಸಾಗಿದೆ’ ಚಿತ್ರದ ಚಿತ್ರೀಕರಣವನ್ನು ದಾವಣಗೆರೆ ತಾಲೂಕಿನ ಆವರಗೊಳ್ಳದಲ್ಲಿ ಪ್ರಾರಂಭಿಸಲಾಗಿದೆ. ದಾವಣಗೆರೆಯವನೇ ಆಗಿದ್ದರಿಂದ ದಾವಣಗೆರೆಯಲ್ಲಿ ಎರಡು ಹಾಡುಗಳ ಶೂಟಿಂಗ್ ಮಾಡಲಾಗುವುದು. ಒಂದು ಹಾಡಿನ ಚಿತ್ರೀಕರಣ ಬಹುತೇಕ ಮುಗಿದಿದೆ. ಎರಡು ಹಾಡುಗಳು ಅದ್ಭುತವಾಗಿವೆ. ದಾವಣಗೆರೆ ಗಾಜಿನಮನೆ, ನಿಜಲಿಂಗಪ್ಪ ಬಡಾವಣೆಯ ಕ್ಲಾಕ್ ಟವರ್, ಶಾಮನೂರು ಮುಂತಾದ ಕಡೆ ಹಾಡಿನ ಚಿತ್ರೀಕರಣ ನಡೆದಿದೆ. ನಾಯಕ ನಟನಾಗಿ ಮನೋಜ್, ನಾಯಕಿಯಾಗಿ ನಿರೀಕ್ಷಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಹಿರಿಯ ನಟರಾದ ಶ್ರೀಧರ್, ಮಂಜುಳಾ ಗುರುರಾಜ್ ಇತರರು ಚಿತ್ರದಲ್ಲಿದ್ದಾರೆ ಎಂದು ಹೇಳಿದರು.
ಚಿತ್ರದ ನಿರ್ದೇಶಕ ನಾಗರಾಜ್ ಶಂಕರ್ ಮಾತನಾಡಿ, ‘ಮರಳಿ ಮನಸಾಗಿದೆ’ ಚಿತ್ರ ಪ್ರೀತಿ ಹಾಗೂ ಸಂಗೀತಮಯವಾದ ಚಿತ್ರ. 9 ಹಾಡುಗಳಿದ್ದು, ವಿನು ಮನಸು ಸಂಗೀತ ನಿರ್ದೇಶಕರು. ಇಂದಿನ ಯುವ ಪೀಳಿಗೆಗೆ ಅಪೇಕ್ಷೆಗೆ ಅನುಗುಣವಾಗಿ ದಾವಣಗೆರೆ, ಕಾರವಾರ, ಮಂಗಳೂರು, ಕಳಸ ಮುಂತಾದ ಭಾಗದಲ್ಲಿ ಚಿತ್ರೀಕರಣ ಮಾಡಲಾಗುವುದು. ಸೀಸನ್‌ಗೆ ತಕ್ಕಂತೆ ಚಿತ್ರದ ಕಥೆ ಸಾಗುವ ಹಿನ್ನೆಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗುವುದು. ‘ಮರಳಿ ಮನಸಾಗಿದೆ’ ತಮ್ಮ ನಿರ್ದೇಶನದ ಮೊದಲ ಚಿತ್ರ. ಹೊಸಬರೇ ಇದ್ದರೂ ಚಿತ್ರ ಅದ್ಭುತವಾಗಿ ಮೂಡಿ ಬರುತ್ತಿದೆ ಎಂದು ತಿಳಿಸಿದರು.
ಚಿತ್ರದ ನಾಯಕ ಮನೋಜ್ ಮಾತನಾಡಿ, ‘ಮರಳಿ ಮನಸಾಗಿದೆ’ ಚಿತ್ರಕ್ಕಿಂತ ಮುನ್ನ ತುಳು, ತಮಿಳು, ಕನ್ನಡದ ಗಾಜನೂರು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಕಾಲೇಜು ವಿದ್ಯಾರ್ಥಿ ಪಾತ್ರ ನನ್ನದು. ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ, ಭಾವನೆಗಳು ಯಾವ ರೀತಿ ಬದಲಾಗುತ್ತಾ ಸಾಗುತ್ತದೆ ಎಂಬ ಒಳ್ಳೆಯ ಕಥೆ ಹೊಂದಿದೆ. ಒಳ್ಳೆಯ ಭಾವನೆಯೊಂದಿಗೆ ಚಿತ್ರಮಂದಿರದಿಂದ ಹೊರಬರುವಂತಹ ಸುಂದರ ಸಾಮಾಜಿಕ ಸಂದೇಶದ ಚಿತ್ರ ಎಂದು ಹೇಳಿದರು.
ಚಿತ್ರದ ನಾಯಕಿ ನಿರೀಕ್ಷಾ ಶೆಟ್ಟಿ ಮಾತನಾಡಿ, ತುಳುವಿನಲ್ಲಿ ನಾಲ್ಕು, ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ಕೆಲಸ ಮಾಡಿರುವೆ. ‘ಮರಳಿ ಮನಸಾಗಿದೆ’ ನಾಯಕಿಯಾಗಿ ಕನ್ನಡದ ಮೊದಲ ಚಿತ್ರ. ಎಲ್ಲರೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಛಾಯಾಗ್ರಾಹಕ ಜೈ ಆನಂದ್, ಪ್ರಜ್ಞಾ, ರಾಜೇಶ್, ಮಹೇಶ್, ಸಂಜಯ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.