ದಶಕದ ನಂತರ ಮಾರಿಕಾಂಬಾ ಜಾತ್ರೆ
Team Udayavani, Jan 28, 2019, 7:30 AM IST
ಮಾಯಕೊಂಡ: ಗ್ರಾಮದಲ್ಲಿ ಜ. 29ರಿಂದ ಫೆ.1ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಕಳೆದ ಬಾರಿ 2008ರಲ್ಲಿ ನಡೆದಿದ್ದ ಮಾರಿಕಾಂಬಾ ಜಾತ್ರೆ ಈಗ 11 ವರ್ಷಗಳ ಬಳಿಕ ನಡೆಯುತ್ತಿದೆ.
ಮನೆಗಳಿಗೆ ಸುಣ್ಣ-ಬಣ್ಣ, ಮಕ್ಕಳಿಗೆ ಹೊಸ ಬಟ್ಟೆ, ಮನೆ ಎದುರು ಶಾಮಿಯಾನಾ, ಬಾಡೂಟ ಸಿದ್ಧತೆ ಎಂದು ಪ್ರತಿ ಕುಟುಂಬ ಸುಮಾರು 50 ಸಾವಿರದಿಂದ 1 ಲಕ್ಷ ರೂ. ಖರ್ಚು ಮಾಡಿವೆ. 1 ಸಾವಿರಕ್ಕೂ ಹೆಚ್ಚು ಮನೆಯಿರುವ ಗ್ರಾಮದಲ್ಲಿ 5ರಿಂದ 6 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ದೂರದ ಊರುಗಳಲ್ಲಿರುವ ಸಂಬಂಧಿಕರು ಗ್ರಾಮದತ್ತ ಮುಖ ಮಾಡಿದ್ದು, ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ದೇವಸ್ಥಾನ ಕಮೀಟಿ ಮತ್ತು ಗ್ರಾಮ ಪಂಚಾಯಿತಿಯವರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈಗಗಾಲೇ ಗ್ರಾಮದಲ್ಲಿ ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಎಲ್ಲ ದೇವಸ್ಥಾನ ಮತ್ತು ಪ್ರಮುಖ ಬೀದಿಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.
ಬಾಡೂಟವೇ ಪ್ರಮುಖ ಇಲ್ಲಿ: ಮಾರಮ್ಮನಿಗೆ ಹರಕೆ ಒಪ್ಪಿಸೋದು, ಉರುಳು ಸೇವೆ ಮಾಡೋದು ಹೀಗೆ ವಿವಿಧ ರೀತಿ ಭಕ್ತಿ ಸಮರ್ಪಣೆ ಒಂದು ಭಾಗವಾದರೆ, ಜಾತ್ರೆಯ ಪ್ರಮುಖ ಭಾಗ ಬಾಡೂಟ.
ಮೊದಲ ದಿನ ಮಂಗಳವಾರ ಹೋಳಿಗೆ ಸಿಹಿಯೂಟದ ನಂತರ ಬುಧವಾರದಿಂದ ಪ್ರಾರಂಭವಾಗುವ ಬಾಡೂಟ ಎರಡು- ಮೂರು ದಿನಗಳವರೆಗೆ ನಿರಂತರವಾಗಿ ನಡೆಯುತ್ತದೆ. ಮಾರಮ್ಮನಿಗೆ ಹರಕೆ ಸಲ್ಲಿಸಿದ ನಂತರ ಮರುದಿನ ಅಂದರೆ ಬುಧವಾರ ಬೆಳಗಿನ ಜಾವದಿಂದ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ.
ಕುರಿಗಳ ಖರೀದಿ ಜೋರು: ಮಾರಮ್ಮನ ಜಾತ್ರೆಗಾಗಿ ಚಿತ್ರದುರ್ಗ, ರಾಣೆಬೇನ್ನೂರು, ಹರಿಹರ, ದಾವಣಗೆರೆ ಸಂತೆಗಳಿಂದ ಮತ್ತು ಅಕ್ಕ ಪಕ್ಕದ ಗ್ರಾಮಗಳಿಗೆ ತೆರಳಿ ಖರೀದಿ ಮಾಡಿಕೊಂಡು ಬಂದಿದ್ದಾರೆ. ಬುಧವಾರದ ಬಾಡೂಟಕ್ಕೆ ಅನುಕೂಲವಾಗುವಂತೆ ಜನ ಮನೆಯ ಖಾಲಿ ಜಾಗದಲ್ಲಿ ಶಾಮಿಯಾನ, ಇನ್ನು ಇತರೆ ದುರಸ್ತಿ ಕಾರ್ಯಗಳನ್ನು ಮಾಡಿಕೊಂಡಿದ್ದಾರೆ. ಬಾಡೂಟಕ್ಕಾಗಿ ಬೇಕಾದ ಮಸಾಲೆ, ತರಕಾರಿ, ಖರೀದಿ ಜೋರಾಗಿ ನಡೆದಿದೆ.
ಬಯಲು ಜಂಗಿ ಕುಸ್ತಿ ಪ್ರಮುಖ ಆಕರ್ಷಣೆ: ಸಂಪ್ರದಾಯದಂತೆ ಮಾರಿಕಾಂಬಾ ದೇವಿಗೆ ಮಂಗಳವಾರ ಮದುವಣಗಿತ್ತಿ ಶಾಸ್ತ್ರ, ಆಸಾದಿ ನಡೆಯುತ್ತದೆ. ಬುಧವಾರ ಬೇಟೆ, ಗಾವು ನಡೆಯಲಿವೆ. ಗುರುವಾರ ಮತ್ತು ಶುಕ್ರವಾರ ಬಯಲು ಜಂಗಿ ಕುಸ್ತಿಗಳನ್ನು ಆಯೋಜಿಸಲಾಗಿದೆ. ರಾಜ್ಯದ ನಾನಾ ಮೂಲೆಗಳಿಂದ ಹೆಸರಾಂತ ಪೈಲ್ವಾನರು ಆಗಮಿಸಲಿದ್ದಾರೆ. ವಿಜೇತರಿಗೆ ಬೆಳ್ಳಿಗಧೆ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ಜಾತ್ರಾ ಸಮಿತಿ ತಿಳಿಸಿದೆ.ಮೌಡ್ಯತೆಯ ಹೆಸರಿನಲ್ಲಿ ಪ್ರಾಣಿ ಬಲಿ, ಬೇವಿನ ಉಡುಗೆ ಹರಕೆ ಮೊದಲಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಿಎಸ್‌ಐ ಸಣಿಂಗಣ್ಣನವರ ತಿಳಿಸಿದ್ದಾರೆ.
ಶಶಿಧರ್ ಶೇಷಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.