
ಮಹಿಳಾ ನಿಲಯ ಯುವತಿಗೆ ಕಂಕಣ ಭಾಗ್ಯ
ಸೌಮ್ಯಳ ವರಿಸಿದ ಕಡೇಕೋಡಿ ಸುಬ್ರಾಯ ಭಟ್ಟ| ವಿವಾಹಕ್ಕೆ ಸಾಕ್ಷಿಯಾದ ಜಿಲ್ಲಾಧಿಕಾರಿ, ಜಿಪಂ ಸಿಇಒ
Team Udayavani, Mar 18, 2021, 8:40 PM IST

ದಾವಣಗೆರೆ: ನಗರದಲ್ಲಿರುವ ರಾಜ್ಯ ಮಹಿಳಾ ನಿಲಯದ ಆವರಣ ಬುಧವಾರ ಎಂದಿನಂತಿರಲಿಲ್ಲ. ಇಡೀ ಆವರಣ ತಳೀರು ತೋರಣದ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ಚಿತ್ತಾಕರ್ಷಕ ರಂಗೋಲಿ ಚಿತ್ತಾರವೂ ಇತ್ತು. ಈ ನಡುವೆ ಮಂಗಳವಾದ್ಯದ ನಿನಾದ, ಅತ್ತಿತ್ತ ಸಡಗರದಿಂದ ಓಡಾಡುವ ಹೆಂಗಳೆಯರ ಕಾಲ್ಗೆಜ್ಜೆಯ ಸದ್ದು ಸಂಭ್ರಮವನ್ನು ಇಮ್ಮಡಿಸಿತ್ತು.
ಮಹಿಳಾ ನಿಲಯದಲ್ಲಿ ಇಷ್ಟೊಂದು ಸಡಗರ-ಸಂಭ್ರಮಕ್ಕೆ ಕಾರಣವಾದದ್ದು ನಿಲಯ ವಾಸಿ ಯುವತಿಯ ಮದುವೆ. ನಿಲಯವಾಸಿ ಸೌಮ್ಯಳನ್ನು (28 ವರ್ಷ) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೇಕೋಡಿಯ ಸುಬ್ರಾಯ ಮಂಜುನಾಥ ಭಟ್ಟ (37 ವರ್ಷ) ಬಾಳಸಂಗಾತಿಯನ್ನಾಗಿ ಸ್ವೀಕರಿಸಿದರು. ವಧು ಸೌಮ್ಯಳ ಪಾಲಿಗೆ ಅಧಿಕಾರಿಗಳೇ ಪೋಷಕರಾಗಿ, ಹಿರಿಯರಾಗಿ, ಬಂಧು-ಬಾಂಧವರಾಗಿ ಶಾಸ್ತ್ರೋಕ್ತವಾಗಿ ಧಾರೆ ಎರೆದು ತಮ್ಮದೇ ಮಗಳ ಮದುವೆ ಮಾಡಿದ ಹೆಮ್ಮೆಯ ಭಾವ ಮೆರೆದರು.
ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ, ನೌಕರ ಸಿಬ್ಬಂದಿಯವರು ಮದುವೆಯ ಎಲ್ಲ ಶಾಸ್ತ್ರಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿ ನಿಲಯವಾಸಿ ಸೌಮ್ಯಳ ಮೇಲೆ ತಮಗಿರುವ ಪ್ರೀತಿ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಡಾ| ವಿಜಯಮಹಾಂತೇಶ್ ದಾನಮ್ಮನವರ್ ವಧುವಿನ ಪೋಷಕ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರಗಳಿಗೆ ಕೈಜೋಡಿಸಿದರು. ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್, ಜಿಪಂ ಸದಸ್ಯ ತೇಜಸ್ವಿ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್ ಸೇರಿದಂತೆ ಇತರ ಗಣ್ಯರು ಈ ಅಪರೂಪದ ಮದುವೆಗೆ ಸಾಕ್ಷಿಯಾದರು.
ನಿಲಯದಲ್ಲಿ ಈ ಹಿಂದೆ ಮದುವೆಯಾದವರು ಸಹ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ತಾವು ಸಂತೋಷದಿಂದ ಜೀವನ ನಡೆಸುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ನಿಲಯದಲ್ಲಿ 40 ವಿವಾಹ: ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಈವರೆಗೆ 40 ವಿವಾಹ, 7 ನಾಮಕರಣ ನಡೆದಿವೆ. ನಿಲಯದಲ್ಲಿ ಮದುವೆಯಾಗುವ ಈ ಜೋಡಿಯ ಜೀವನ ಹೇಗಿದೆ ಎಂದು ಇಲಾಖೆ ಐದು ವರ್ಷ ನಿಗಾ ಇಡುತ್ತದೆ. ಮದುವೆ ಸಂದರ್ಭದಲ್ಲಿ ವಧು-ವರರ ಜಂಟಿ ಖಾತೆಯಲ್ಲಿ 15 ಸಾವಿರ ರೂ.ಗಳ ಬಾಂಡ್ ನೀಡಲಾಗುತ್ತದೆ. ಮದುವೆ ಖರ್ಚಿಗಾಗಿ ತಲಾ ಐದು ಸಾವಿರ ರೂ. ನೀಡಲಾಗುತ್ತದೆ ಹಾಗೂ ಮದುವೆ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಈವರೆಗೆ ನಿಲಯದ ಯುವತಿಯರನ್ನು ಮದುವೆಯಾದವರೆಲ್ಲರೂ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಇದೇ ಸಂದರ್ಭದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.