ದಾವಣಗೆರೆ ಪ್ರತಿಕ್ರಿಯೆಗೆ ಮಾಸ್ತಿಗುಡಿ ಖುಷ್
Team Udayavani, May 20, 2017, 1:10 PM IST
ದಾವಣಗೆರೆ: ಮಾಸ್ತಿಗುಡಿ ಚಲನಚಿತ್ರಕ್ಕೆ ದಾವಣಗೆರೆಯಲ್ಲಿ ಅತ್ಯುತ್ತಮ ಬೆಂಬಲ ವ್ಯಕ್ತವಾಗುತ್ತಿರುವುದಾಗಿ ಚಿತ್ರತಂಡ ಹೇಳಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ನಾಗಶೇಖರ್ ರಾಚಯ್ಯ, ನಾಯಕ ನಟ ವಿಜಯ್, ಉಳಿದೆಲ್ಲಾ ಭಾಗಗಳಿಗಿಂತ ಇಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಕಾಡು, ನೀರು, ಪ್ರಾಣಿ, ಪಕ್ಷಿಗಳು ಸೇರಿದಂತೆ ಇಡೀ ಪ್ರಕೃತಿಯ ಮಹತ್ವ ಸಾರುವಂತಹ ಚಿತ್ರ ಇದಾಗಿದೆ. ಇದೇ ಕಾರಣಕ್ಕೆ ನಾವು ವಿಜಯಯಾತ್ರೆಯನ್ನು ದಾವಣಗೆರೆಯಿಂದಲೇ ಆರಂಭಿಸುತ್ತಿದ್ದೇವೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಲೆಕ್ಷನ್ ಸಹ ಒಂಚೂರು ಇಳಿಕೆಯಾಗಿಲ್ಲ.
ಚಿತ್ರಮಂದಿರ ಬಹುತೇಕ ತುಂಬಿದ ಪ್ರದರ್ಶನದಿಂದ ನಡೆಯುತ್ತಿವೆ ಎಂದು ನಾಗಶೇಖರ್ ಹೇಳಿದರು. ಚಿತ್ರದ ದ್ವಿತೀಯ ಭಾಗ ನಿಧಾನಗತಿಯಲ್ಲಿ ಸಾಗುತ್ತದೆ. ಇದಕ್ಕೆ ಒಂದಿಷ್ಟು ಕತ್ತರಿ ಪ್ರಯೋಗ ಮಾಡಧಿಬೇಕೆಂದು ಪತ್ರಕರ್ತ ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು ಹೇಳಿದ್ದರಿಂದ 12 ನಿಮಿಷದ ಚಿತ್ರವನ್ನ ಕಟ್ ಮಾಡಲಾಗಿದೆ.
ಇದೀಗ ಮತ್ತಷ್ಟು ಅಭಿಮಾನಿಗಳು ಮತ್ತೆ ಚಿತ್ರ ನೋಡಲು ಇಷ್ಪಡುತ್ತಿದ್ದಾರೆ ಎಂದು ಅವರು ತಿಳಿಸಿದರು. ನಾಯಕ ನಟ ವಿಜಯ್ ಮಾತನಾಡಿ, ದಾವಣಗೆರೆಧಿಯ ಜನತೆ ನಮ್ಮ ಬೆನ್ನಿಗಿದ್ದಾರೆ. ಇಲ್ಲಿನ ಅಭಿಮಾನಿಗಳು ಅತಿ ಉತ್ಸಾಹದಲ್ಲಿ ಚಿತ್ರ ವೀಕ್ಷಿಸುತ್ತಾರೆ. ಇಡೀ ಕುಟುಂಬ ಸದಸ್ಯರು ಚಿತ್ರ ನೋಡುತ್ತಿದ್ದಾರೆ.
ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ ನೀಡಲು ನಮ್ಮ ಚಿತ್ರ ತಂಡ ನಿರ್ಧರಿಸಿದೆ. ಕಲಾವಿದ ರಂಗಾಯಣ ರಘು ಮಾತನಾಡಿ, ಕಾಡು, ನಾಡಿನ ಮಧ್ಯೆ ಇದೀಗ ಅಂತರ ಹೆಚ್ಚುತ್ತಿದೆ. ಇದನ್ನು ತೋರಿಸಬೇಕು. ಕಾಡು ಬೆಳೆಸುವಂತೆ ಪ್ರೇರೇಪಿಸಬೇಕು ಎಂಬ ಸದುದ್ದೇಶದಿಂದ ಈ ಚಿತ್ರ ಮಾಡಿದ್ದಾರೆ.
ದುನಿಯಾ ವಿಜಿ, ನಾಗಶೇಖರ್ ಅತ್ಯುತ್ತಮ ಕೆಲಸಮಾಡಿದ್ದಾರೆ. ಚಿತ್ರವನ್ನು ಬಹುತೇಕ ಕಾಡಿನಲ್ಲಿಯೇ ಚಿತ್ರಿಸಲಾಗಿದೆ. ಪರಿಸರ ಸಮತೋಲನ ಕಾಪಾಡದೇ ಇದ್ದರೆ ಆಗುವ ಅನಾಹುತ ಕುರಿತು ಚಿತ್ರ ಚೆನ್ನಾಗಿ ನಿರೂಪಿಸುತ್ತದೆ ಎಂದರು. ಪ್ರಕೃತಿಗೆ ವಿರುದ್ಧವಾಗಿ ನಾವು ನಡೆದುಕೊಂಡಿದ್ದೇ ಆದಲ್ಲಿ, ಮುಂದೆ ಭಾರೀ ಸಮಸ್ಯೆಗೆ ತುತ್ತಾಗಲಿದ್ದೇವೆ.
ಬರೀ ಕಾಂಕೀಟ್ ಕಾಡು ಕಟ್ಟಿಕೊಂಡು ಪ್ರಕೃತಿ ಮೇಲೆ ಅನಾಚಾರ ಮಾಡುತ್ತಾ ಸಾಗುತ್ತಾ ಹೋದರೆ ಇದೀಗ ನಾವು ಪಾತಾಳ ಗಂಗೆ ಹುಡುಕುವಷ್ಟು ಸಮಸ್ಯೆಗೆ ಸಿಲುಕಿದ ಹಾಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಈಡಾಗುವುದು ಖಚಿತ. ಇದನ್ನೇ ಚಿತ್ರ ಸು#ಟವಾಗಿ ಹೇಳಿದೆ ಎಂದು ಅವರು ತಿಳಿಸಿದರು. ನಮ್ಮ ನಾಡಿನಲ್ಲಿ ಎಲ್ಲಾ ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ.
ಕನ್ನಡಕ್ಕೆ ಅಷ್ಟಾಗಿ ಪ್ರಾಮುಖ್ಯತೆ ದೊರೆಯುವುದಿಲ್ಲ. ಇತರೆ ರಾಜ್ಯಗಳಲ್ಲಿ ಸೆಸ್ ಆ್ಯಕ್ಟ್ ಮೂಲಕ ಇತರೆ ಚಿತ್ರಗಳ ಜೊತೆಗೆ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯುತ್ತಾರೆ ಎಂದರು. ಇಂದು ನಾವು ಅನ್ಯಭಾಷೆಯ ಚಿತ್ರಗಳ ಜೊತೆ ಸ್ಪರ್ಧೆಗೆ ಇಳಿಯಬೇಕಿದೆ.
ಆದರೆ, ನಮ್ಮ ದಾವಣಗೆರೆ ಹಾಗಿಲ್ಲ. ಕಲಾವಿದರ ಪೋಷಕರು ಇಲ್ಲಿದ್ದಾರೆ. ಉತ್ತರ ಕರ್ನಾಟಕದ ಮುಕುಟವಾದ ಇಲ್ಲಿ ಸ್ವತ್ಛ ಕನ್ನಡ ಇದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿ ನಂತರ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವ ಅಶೋಕ ಚಿತ್ರಮಂದಿರಕ್ಕೆ ಚಿತ್ರತಂಡ ಭೇಟಿನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.