19ರಂದು ಕ್ರಿಯಾಸಮಿತಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ
Team Udayavani, Jun 12, 2017, 1:41 PM IST
ದಾವಣಗೆರೆ: ಜಾತಿವಾರು ಜನಗಣತಿ, ಆರ್ಥಿಕ ಸಮೀಕ್ಷೆ ವರದಿ ಬಹಿರಂಗಕ್ಕೆ ಒತ್ತಾಯಿಸಿ, ಹಂತ ಹಂತದ ಹೋರಾಟ ಹಮ್ಮಿಕೊಳ್ಳಲು ಬಹಿರಂಗ ಸಭೆ ಹಮ್ಮಿಕೊಳ್ಳಲು ಜಾತಿ ಗಣತಿ ವರದಿ ಬಹಿರಂಗಕ್ಕಾಗಿ ಒತ್ತಾಯಿಸಿ ಕ್ರಿಯಾಸಮಿತಿ ನಿರ್ಧರಿಸಿದೆ. ಜೂ.19ರಂದು ಬೃಹತ್ ಮೆರವಣಿಗೆ ಹಮ್ಮಿಕೊಳ್ಳುವ ನಂತರ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲು ಮಾತುಕತೆ ನಡೆಸಲು ಭಾನುವಾರ ನಾಯಕರ ಹಾಸ್ಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸಮಿತಿ ಸಭೆ ನಿರ್ಧರಿಸಿದೆ.
ಸಭೆಯಲ್ಲಿ ಪಾಲ್ಗೊಂಡ ಮುಖಂಡರು 19ರಂದು ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿ, ಉಪವಿಭಾಗಾಧಿಕಾರಿ ಕಚೇರಿ ಎದುರು ಬಹಿರಂಗ ಸಭೆ ನಡೆಸಲು ನಿರ್ಧರಿಸಿದರು. ಇದರ ಜೊತೆಗೆ ರಾಜ್ಯಮಟ್ಟದ ನಾಯಕರೊಂದಿಗೆ ಮಾತುಕತೆ ನಡೆಸಿ, ರಾಜ್ಯಾದ್ಯಂತ ಹೋರಾಟ ನಡೆಸಬೇಕು. ಜೂ.14ಕ್ಕೆ ಮತ್ತೂಮ್ಮೆ ಸಭೆ ನಡೆಸಿ, ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ನಿರ್ಧರಿಸಲಾಯಿತು.
ಜಾತಿವಾರು ಜನಗಣತಿ ವರದಿ ಬಹಿರಂಗ ಪಡಿಸುವುದು ಮಾತ್ರವಲ್ಲದೆ, ಅದರ ಆಧಾರದಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಿದರೆ ಹಿಂದುಳಿದವರ ಕಲ್ಯಾಣ ಸಾಧ್ಯವಾಗಲಿದೆ. ಆದರೆ, ಮೇಲ್ಜಾತಿಯ ಕೆಲವರು ವರದಿ ಬರಹಿರಂಗಪಡಿಸಿದಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಸರ್ಕಾರ ಮಣಿಯಲೇಬೇಕಾದ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರಂಭದಲ್ಲಿ ಮಾತನಾಡಿದ ಮುಖಂಡ ಚಂದ್ರಪ್ಪ, ಇದುವರೆಗೆ ಯಾವುದೇ ಸರ್ಕಾರ ಮಾಡದ ಕೆಲಸವನ್ನು ಹಾಲಿ ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ. ಈ ವರದಿಯಿಂದ ಹಿಂದುಳಿದ ಜಾತಿ, ಜನಾಂಗದವರ ಸಂಖ್ಯೆ ಎಷ್ಟಿದೆ ಎಂಬುದು ನಿಖರವಾಗಿ ತಿಳಿಯಲಿದೆ. ಆದರೆ, ದೊಡ್ಡ ಸಮಾಜಗಳು ಇದುವರೆಗೆ ಅನುಭವಿಸಿಕೊಂಡು ಬಂದಿರುವ ಸವಲತ್ತು, ರಾಜಕೀಯ, ಸಾಮಾಜಿಕ ಲಾಭಕ್ಕೆ ಕುತ್ತು ಬರಬಹುದು ಎಂಬ ಕಾರಣಕ್ಕೆ ಇಂದು ವರದಿ ಬಹಿರಂಗ ಆಗದಂತೆ ತಡೆಯುತ್ತಿವೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್. ಓಬಳೇಶಪ್ಪ ಮಾತನಾಡಿ, ಈ ಸರ್ಕಾರ ಕೈಗೊಂಡಿರುವ ಜಾತಿವಾರು ಜನಗಣತಿ ಅತ್ಯಂತ ಉಪಯುಕ್ತ ಕಾರ್ಯಗಳಲ್ಲಿ ಒಂದಾಗಿದೆ. ಆದರೆ, ವರದಿ ಜಾರಿಯಾಗದೆ ಹೊರತು ಉಪಯೋಗ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಅನೇಕ ಮೇಲ್ಜಾತಿಯವರು ಒತ್ತಡ ಹೇರಿ, ವರದಿ ಬಹಿರಂಗ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.
ಆದರೆ, ನಮ್ಮ ಸಮಾಜಗಳು ಇದನ್ನು ನೋಡಿಕೊಂಡು ಸುಮ್ಮನಿರಬಾರದು. ಚುನಾವಣೆಗೂ ಮುನ್ನವೇ ವರದಿ ಬಹಿರಂಗ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಹೇಳಿದರು. ತಾಲೂಕು ಪಂಚಾಯತ್ ಸದಸ್ಯ ಆಲೂರು ನಿಂಗರಾಜ್ ಮಾತನಾಡಿ, ನಮ್ಮ ಎಲ್ಲಾ ಸಮಾಜದವರು ಒಗ್ಗೂಡಿ ಕೈಗೊಳ್ಳುವ ಹೋರಾಟ ಸಣ್ಣಮಟ್ಟದಲ್ಲಿ ಇರಬಾರದು. ನಾವುಗಳು ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದೇವೆ.
ಈಗ ಕೈಗೊಂಡಿರುವ ಹೋರಾಟದಲ್ಲಿ ಪ್ರತಿ ಸಮಾಜದಿಂದ ಕನಿಷ್ಠ 100 ಜನ ಸೇರಬೇಕಿದೆ. ಎಲ್ಲಾ ಸಮಾಜದ ಮುಖಂಡರಿಗೆ ನೇತೃತ್ವ ವಹಿಸಿಕೊಡಬೇಕಿದೆ. ಆಗ ಮತ್ತೆ ಮುಂದೆ ನಡೆಯುವ ಹೋರಾಟಗಳಿಗೆ ಅವರು ಅತಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ ಎಂದರು. ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಅನೀಸ್ ಪಾಷ ಮಾತನಾಡಿ, ನಮ್ಮ ಹೋರಾಟದ ಬಿಸಿ ಸರ್ಕಾರಕ್ಕೆ ತಟ್ಟುವಂತೆ ಆಗಬೇಕು.
ರಾಜ್ಯದ ಇತರೆ ಭಾಗಗಳಲ್ಲೂ ಹೋರಾಟ ಆರಂಭ ಆಗುವ ರೀತಿಯ ಹೋರಾಟ ಮಾಡಬೇಕಿದೆ ಎಂದರು. ಕ್ರಿಯಾಸಮಿತಿಯ ಅಧ್ಯಕ್ಷ ಬಿ.ಎಂ. ಸತೀಶ್, ವಿವಿಧ ಸಮಾಜದ ಮುಖಂಡರಾದ ಚಂದ್ರಪ್ಪ, ಹೆಗ್ಗೆರೆ ರಂಗಪ್ಪ, ಕುಂದುವಾಡ ಮಂಜುನಾಥ, ಡಿ. ಬಸವರಾಜ ಗುಬ್ಬಿ, ಟಿ. ಅಜ್ಜೆಶ್, ಮಹೇಂದ್ರಪ್ಪ, ಕಮ್ಮ ಸುನೀತಾ, ಎಚ್. ಮಲ್ಲೇಶ್, ಕೆ.ಎ. ಪಾಪಣ್ಣ, ರಾಘು ದೊಡ್ಮನಿ, ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.