ಧರ್ಮ ರಕ್ಷಣೆಗೆ ಮಠಾಧಿಧೀಶರು ಒಂದಾಗಲಿ


Team Udayavani, Nov 12, 2018, 5:08 PM IST

dvg-3.jpg

ಹರಪನಹಳ್ಳಿ: ವಿಜ್ಞಾನ, ರಾಜಕೀಯದ ಲಾಭಕ್ಕಾಗಿ ಧರ್ಮ ನಾಶದ ವ್ಯವಸ್ಥಿತ ಸಂಚು ನಡೆಯುತ್ತಿದೆ. ಆದ್ದರಿಂದ ಧರ್ಮದ ರಕ್ಷಣೆಗೆ ಮಠಾಧಿಧೀಶರು ಒಂದಾಗಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠಾಧ್ಯಕ್ಷ ಡಾ| ಪ್ರಸನ್ನ ರೇಣುಕಾ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಸಿಂಗ್ರಿಹಳ್ಳಿ ಗ್ರಾಮದಲ್ಲಿ ಭಾನುವಾರ ಶಿವ ಗಣಪತಿ ದೇವಾಲಯದ ಉದ್ಘಾಟನೆ, ಸಾಮೂಹಿಕ ವಿವಾಹ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ವೈಚಾರಿಕತೆ ಹಾಗೂ ಧಾರ್ಮಿಕ ಸುಧಾರಣೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರಲಾಗುತ್ತಿದೆ. ಇಂಥವರ ಬಗ್ಗೆ
ಉದಾಸೀನ ಮಾಡಿದರೆ ಧರ್ಮ ಅವನತಿಯತ್ತ ಸಾಗುತ್ತದೆ. ವೀರಶೈವ ಧರ್ಮಕ್ಕೆ ಜಾತ್ಯತೀತವಾಗಿ ಎಲ್ಲಾ ಸಮುದಾಯಕ್ಕೆ ಮಾರ್ಗದರ್ಶನ, ಸಂಸ್ಕಾರ ನೀಡಿರುವ ಹೆಗ್ಗಳಿಕೆಯಿದೆ.  ಭಕ್ತರು ನಿಷ್ಠೆ, ಸಹಿಷ್ಣತೆ, ರಾಷ್ಟ್ರಾಭಿಮಾನ ಮೈಗೂಡಿಸಿಕೊಂಡು ನಡೆದುಕೊಳ್ಳುವುದು ಅವಶ್ಯಕವಾಗಿದೆ. ಧರ್ಮವು ಕೇವಲ ವೇದಿಕೆ ಸಮಾರಂಭಕ್ಕೆ ಸೀಮಿತವಾಗಿಲ್ಲ, ಧಾರ್ಮಿಕ ನುಡಿಯನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉಜ್ಜಯಿನಿ ಪೀಠಾಧ್ಯಕ್ಷ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ನ್ಯಾಯಾಲಯಗಳು ಇಲ್ಲದ ಸಮಯದಲ್ಲಿ ದೇವಾಲಯಗಳೇ ನ್ಯಾಯಾಲಯಗಳಾಗಿದ್ದವು. ಅಪರಾಧಗಳನ್ನು ಕಡಿಮೆ ಮಾಡುವಂತಹ ಸಾಮರ್ಥ್ಯ ದೇವಸ್ಥಾನಗಳಿಗಿದೆ.

ದೇವಾಲಯಗಳು ಭಯ, ಭಕ್ತಿ ಮೂಲಕ ಮನುಷ್ಯರ ಮನಪರಿವರ್ತನೆ ಮಾಡುವ ಕೇಂದ್ರಗಳಾಗಿವೆ ಎಂದರು. ಭಾರತ ಮಂದಿರಗಳ ದೇಶವಾಗಿದ್ದು, ಇಲ್ಲಿ  ವಸ್ಥಾನಗಳಿಲ್ಲದ ಒಂದು ಗ್ರಾಮವೂ ಕಾಣಿಸುವುದಿಲ್ಲ. ವಿದೇಶಗರು ತಮ್ಮ ದೇಹವನ್ನು ಪ್ರೀತಿಸುತ್ತಾರೆ. ಆದರೆ ಭಾರತದಲ್ಲಿ ದೇಹಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುತ್ತಾರೆ. ತಾವು ದುಡಿದ ಹಣವನ್ನು ದೇವರಿಗೆ ದಾನ ಮಾಡುವ ಸಂಸ್ಕೃತಿ, ಪರಂಪರೆ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ತಿಳಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್‌ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ನವ ದಂಪತಿಗಳಿಗೆ ಮಠಾಧೀಶರ ಆಶೀರ್ವಾದ ಸಿಗುವುದರಿಂದ ಯೋಗ ಪ್ರಾಪ್ತಿಯಾಗುತ್ತದೆ. ದೇವಸ್ಥಾನ ಉದ್ಘಾಟನೆ ಮೂಲಕ ನವ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ನಿಜಕ್ಕೂ ಧನ್ಯರು ಎಂದರು.

ಶ್ರೀಗಳ ಸಾನ್ನಿಧ್ಯದಲ್ಲಿ 7 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಂದಿಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿಂಗ್ರಿಹಳ್ಳಿ ಕೊಟ್ರೇಶ್ವರ ಸ್ವಾಮೀಜಿ, ನೀಲಗುಂದ ಚನ್ನಬಸವ ಸ್ವಾಮೀಜಿ, ಐನಹಳ್ಳಿ ಮಹೇಶ್ವರ ಸ್ವಾಮೀಜಿ, ಲೆಕ್ಕದೇವರ ಮಠ ಬಸವರಾಜಪ್ಪ, ಚಿರಸ್ತಹಳ್ಳಿ ಮಲ್ಲಿಕಾರ್ಜುನ್‌ ಕಲ್ಮಠ, ಗ್ರಾ.ಪಂ ಅಧ್ಯಕ್ಷ ಮಂಜ್ಯನಾಯ್ಕ, ದೇವಸ್ಥಾನ ಸಮಿತಿ ಜಯಪ್ರಕಾಶ್‌ ಬಣಕಾರ್‌, ದೇವೇಂದ್ರಪ್ಪ, ಕೋಟ್ರಯ್ಯಸ್ವಾಮಿ, ಬಸವರಾಜಪ್ಪ, ವೀರಯ್ಯ, ಸೋಮಪ್ಪ, ವಿರಭದ್ರಪ್ಪ, ಬಸಪ್ಪ, ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ

arrested

Mangaluru: ಕಾರಾಗೃಹದೊಳಗೆ ಮೊಬೈಲ್ ಎಸೆಯಲು ಯತ್ನಿಸಿದವ ಅರೆಸ್ಟ್

Beggars baby

Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!

police crime

Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕಿ ಹ*ತ್ಯೆ!

Ullala-bike-Accident

Ullala: ಲಾರಿ-ಬೈಕ್ ಅಪಘಾತ: ಮೆಡಿಕಲ್ ಅಂಗಡಿ ಮಾಲೀಕ ದಾರುಣ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ACT

Mangaluru: ಕೊಕೇನ್‌, ಚರಸ್‌ ಸೇವನೆ; ಮೂವರ ಬಂಧನ

Raichuru-Rims

Raichuru: ರಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ

car-parkala

Brahmavar: ಕಂಟೈನರ್‌ ಢಿಕ್ಕಿ; ಬೈಕ್‌ ಸಹಸವಾರೆ ಸಾವು

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

satish jarakiholi

60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.