ಕವಿ ಹೃದಯದಲ್ಲಿರಲಿ ನೈತಿಕತೆ ದಿಕ್ಸೂಚಿ
ಕಗ್ಗಂಟಿನ ಬದಲು ಸರಳ ಭಾಷೆ ಬಳಸಿ: ಚಿಂತಕ ಸುರೇಶ್
Team Udayavani, Apr 25, 2022, 5:24 PM IST
ದಾವಣಗೆರೆ: ಕವಿತೆ, ಕವನ ಸಂಕಲನ ಎಂದೆಂದಿಗೂ ಪ್ರಚಾರದ ಹಪಾಹಪಿಯ ಕೃತಿಗಳಂತೆ ಆಗಬಾರದು ಎಂದು ಮೈಸೂರಿನ ಚಿಂತಕ ಕೆ.ಪಿ. ಸುರೇಶ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ, ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕವಿಗೆ ಸದಾ ಸಾಮಾಜಿಕ ಕ್ರಾಂತಿಯ ಚಿಂತನೆ, ಸಂಯಮ, ಬರವಣಿಗೆ ಕೌಶಲ್ಯ ಇರಬೇಕು. ಆಯಾ ಕಾಲಘಟ್ಟದ ಆಗು-ಹೋಗು, ತಲ್ಲಣಗಳಿಗೆ ಸ್ಪಂದಿಸುವಂತಾಗಬೇಕು ಎಂದು ಆಶಿಸಿದರು.
ಕವಿಯಿಂದ ಸಮಾಜ ಅಪಾರವಾದುದನ್ನು ನಿರೀಕ್ಷಿಸುತ್ತದೆ. ಕವಿಯ ಹೃದಯದಲ್ಲಿ ಸದಾ ನೈತಿಕತೆಯ ದಿಕ್ಸೂಚಿ ಇರಲೇಬೇಕು. ನೈತಿಕತೆಯ ದಿಕ್ಸೂಚಿ ಇಲ್ಲದೇ ಹೋದಲ್ಲಿ ಕವಿ ಮಾತ್ರವಲ್ಲ, ಮನುಷ್ಯರಾಗಲಿಕ್ಕೂ ಸಾಧ್ಯವಿಲ್ಲ. ಕವಿ ತನ್ನದೇ ಆದ ನುಡಿಗಟ್ಟನ್ನು ಹೇಳುವಂತಹ ಶ್ರದ್ಧೆ ಇರಬೇಕು. ಯಾವುದೇ ಆಸೆ, ಆಮಿಷಗಳಿಗೆ ಮಣಿಯಬಾರದು. ಕಗ್ಗಂಟಿನ ಭಾಷೆಯ ಬದಲಿಗೆ ಜನಭಾಷೆಯನ್ನೇ ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು.
ಸಮಾಜ ಬಯಸುವಂತಹ ನಿರೀಕ್ಷೆಯನ್ನ ಯುವ ಕವಿಗಳು ಈಡೇರಿಸುವಂತಾಗಬೇಕು. ಕಾಲ ಕಾಲದ ಆಧಾರಿತ ಪರಿಣಾಮವನ್ನು ಅಭಿವ್ಯಕ್ತಗೊಳಿಸಬೇಕು. ಕನ್ನಡದ ವರಕವಿ ದ.ರಾ. ಬೇಂದ್ರೆ ಕಾಲಕ್ಕೆ ತಕ್ಕಂತೆ ಬರೆದ ಪರಿಣಾಮ ಅವರ ಸಾಹಿತ್ಯ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದೆ. ಸಾಹಿತ್ಯದ ಮೂಲಕ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸಬೇಕು. ಇಲ್ಲದೇ ಹೋದಲ್ಲಿ ಧಾರ್ಮಿಕತೆ, ರಾಷ್ಟ್ರೀಯತೆಯ ಸರ್ವಾಧಿಕಾರವನ್ನ ಕಿತ್ತೂಗೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ ಎಂದರು. ಹೂವಿನಹಡಗಲಿಯ ಪ್ರಗತಿಪರ ಚಿಂತಕ ಪೀರ್‌ಬಾಷಾ ಮಾತನಾಡಿ, ಈಗ ಮತ್ತು ನಾಳೆ ಏನಾಗಬಹುದು ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜೋರಾಗಿ ಮಾತನಾಡುವುದು ಅರ್ಥಹೀನವಾಗಿದೆ, ಮಾತ್ರವಲ್ಲ ದೇಶದ್ರೋಹದ ಪಟ್ಟಕ್ಕೂ ಕಾರಣವಾಗುತ್ತಿದೆ. ಹಾಗಾಗಿ ಈಗ ಪಿಸು ಮಾತುಗಳ ಮೂಲಕವೇ ಸಾಮಾಜಿಕ ಕ್ರಾಂತಿ ಉಂಟು ಮಾಡುವಂತಾಗಿದೆ ಎಂದು ವಿಷಾದಿಸಿದರು. ಸಾಹಿತಿ ಡಾ| ದಾದಾಪೀರ್ ನವಿಲೇಹಾಳ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ| ಆನಂದ ಋಗ್ವೇದಿ ಇತರರು ಇದ್ದರು. ಸನಾವುಲ್ಲಾ ನವಿಲೇಹಾಳ್ ನಿರೂಪಿಸಿದರು.
ಈಗ ಎಲ್ಲೆಡೆ ಬುಲ್ಡೋಜರ್ ಸಂಸ್ಕೃತಿ ಕಂಡು ಬರುತ್ತಿದೆ. ಕರ್ನಾಟಕಕ್ಕೂ ಬುಲ್ಡೋಜರ್ ಸಂಸ್ಕೃತಿಯ ಆಡಳಿತವನ್ನು ಕರೆ ತರುವ ಮಾತುಗಳು ಕೇಳಿ ಬರುತ್ತಿವೆ. ತಪ್ಪು ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಮನೆ ಇತರೆ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವ ಬಗ್ಗೆ ಜನಪ್ರತಿನಿಧಿಗಳೇ ಮಾತನಾಡುತ್ತಿದ್ದಾರೆ. ಧರ್ಮ, ರಾಷ್ಟ್ರೀಯತೆ ಸಹ ಬುಲ್ಡೋಜರ್‌ನಂತಾಗುತ್ತಿದೆ. ದಾವಣಗೆರೆ: ಕವಿಗೋಷ್ಠಿಯಲ್ಲಿ ಮೈಸೂರಿನ ಚಿಂತಕ ಕೆ.ಪಿ. ಸುರೇಶ್ ಮಾತನಾಡಿದರು. -ಪೀರ್‌ಬಾಷಾ, ಪ್ರಗತಿಪರ ಚಿಂತಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.