ಆಚಾರ್ಯ ಬಡಾವಣೆಗೆ ಪುರಸಭೆ ಅಧ್ಯಕ್ಷ ಭೇಟಿ


Team Udayavani, May 12, 2017, 1:10 PM IST

dvg5.jpg

ಹರಪನಹಳ್ಳಿ: ಪಟ್ಟಣದ ಆಚಾರ್ಯ ಬಡಾವಣೆಗೆ ಪುರಸಭೆ ಅಧ್ಯಕ್ಷ ಎಚ್‌.ಕೆ. ಹಾಲೇಶ್‌ ದಿಢೀರ್‌ ಭೇಟಿ ವಾರ್ಡ್‌ನ ಜನರ ಸಮಸ್ಯೆ ಅಲಿಸಿ ಪರಿಹಾರಕ್ಕೆ ಸೂಚಿಸಿದರು. ಡಿ. ರಾಮನಮಲಿ ಮುಂಭಾಗ ಒಳ ಚರಂಡಿ ಯೋಜನೆಯ ಚೇಂಬರ್‌ ನಿರ್ಮಿಸಿ ಮಣ್ಣು ಹಾಕದೇ ರಸ್ತೆಯಲ್ಲಿ ಹಾಗೆ ಬಿಟ್ಟ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಮಕ್ಕಳು ರಸ್ತೆಯಲ್ಲಿ ನಡೆದಾಡುವಂತಿಲ್ಲ. ಒಂದು ದಿನವೂ ಬಡಾವಣೆ ಚರಂಡಿಗಳನ್ನು ಸ್ವತ್ಛಗೊಳಿಸಲ್ಲ. ಇದರಿಂದ ಸೊಳ್ಳೆ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಹಂದಿಗಳ ಹಾವಳಿಗೆ ಮನೆಯಿಂದ ಮಕ್ಕಳು ಹೊರ ಬರದಂತಾಗಿದೆ ಎಂದು ನಿವಾಸಿಗಳು ಅಧ್ಯಕ್ಷರ ಗಮನಕ್ಕೆ ತಂದರು. 

ಒಳ ಚರಂಡಿ ಯೋಜನೆಯ ಇಂಜಿನಿಯರ್‌ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒಂದು ವಾರದೊಳಗೆ ಒಳ ಚರಂಡಿಗೆ ಮನೆಗಳ ಶೌಚಾಲಯ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಕೂಡಲೇ ಜೆಸಿಬಿ ಯಂತ್ರ ಕರೆಸಿ ಚರಂಡಿಗಳಲ್ಲಿ ಹಾಗೂ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳನ್ನು ಸ್ವತ್ಛಗೊಳಿಸಲಾಯಿತು. 

ಖಾಲಿ ವೇಶನದಲ್ಲಿ ಹಂದಿಗಳ ವಾಸ ಹಾಗೂ ಬೆಳದಿರುವ ಗಿಡ ಗಂಟೆಗಳಿಂದ ವಿಷ ಜಂತುಗಳು ಬರುತ್ತಿವೆ ಎಂದು ವಾರ್ಡ್‌ನ ನಿವಾಸಿಗಳು ದೂರಿದರು. ಖಾಲಿ ವೇಶನಗಳನ್ನು ಮಾಲೀಕರು ಸ್ವತ್ಛವಾಗಿಟ್ಟುಕೊಳ್ಳಬೇಕು. ಇಲ್ಲವೇ ಪುರಸಭೆವತಿಯಿಂದ ನಿವೇಶನ ಸ್ವತ್ಛಗೊಳಿಸಿ ಅದರ ಮೊತ್ತವನ್ನು ಮನೆ ನೋಂದಾಣಿಗೆ ಬಂದಾಗ ಮಾಲೀಕರಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡಿ ಎಂದು ಪುರಸಭೆ ಆರೋಗ್ಯಾಧಿಕಾರಿಗೆ ಅಧ್ಯಕ್ಷರು ಸೂಚಿಸಿದರು. 

ಸುಜಲಾನ್‌ ಸೇರಿದಂತೆ ವಿವಿಧ ಕಂಪನಿಗಳಿಂದ ಆಗಮಿಸಿರುವ ಹೊರ ರಾಜ್ಯದ ವಾನಹಗಳ ಹಾವಳಿಯಿಂದ ಸುತ್ತಮುತ್ತಲಿನ ಮನೆಗಳ ಮಾಲೀಕರಿಗೆ ಕಿರಿಕಿರಿ ಉಂಟಾಗುತ್ತಿದೆ. ವೇಗದ ಮಿತಿ ಮೀರಿ ಚಾಲನೆ ಮಾಡುವುದರಿಂದ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸುವಂತಿಲ್ಲ. ಹಾಗೆಯೇ ಹೆಚ್ಚಿನ ಬಾಡಿಗೆ ಆಸೆಯಿಂದ ಮನೆಗಳನ್ನು ಹಾಸ್ಟೆಲ್‌ಗ‌ಳಿಗೆ ಬಾಡಿಗೆ ನೀಡುತ್ತಿರುವುದರಿಂದ ಅನ್ನ, ಸಂಬಾರು ಚರಂಡಿಗೆ ಹಾಕುತ್ತಾರೆ.

ಇದರಿಂದ ಹಂದಿ, ನಾಯಿ ಕಿರುಕುಳ ಮತ್ತು ಕೆಟ್ಟ ವಾಸನೆಯಿಂದ ವಾಸಿಸುವುದು ದುಸ್ತರವಾಗಿದೆ. ಹಾಗಾಗಿ ಇದಕ್ಕೂ ಕಡಿವಾಣ ಹಾಕಿ ಎಂದು ನಿವಾಸಿಗಳು ಮನವಿ ಮಾಡಿದರು. ಕಸಾಪ ಅಧ್ಯಕ್ಷ ಡಿ. ರಾಮನಮಲಿ, ಸರ್‌ ಖವಾಸ್‌, ಎ. ಮೂಸಾಸಾಬ್‌, ಭಧಿದ್ರಸ್ವಾಮಿ, ಡಿ.ಬಿ. ಬಡಿಗೇರ್‌, ಎಸ್‌. ಜಾಕೀರಹುಸೇನ್‌, ಪರುಶುರಾಮ, ಆರೋಗ್ಯಾಧಿಕಾರಿ ದೇವರಾಜ್‌ ಇತರರು ಇದ್ದರು.  

ಟಾಪ್ ನ್ಯೂಸ್

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.