ಜಯದೇವ ಸ್ವಾಮೀಜಿ ಅನರ್ಘ್ಯ ರತ್ನ
ಶರಣ-ಮುರುಘಾ ಸಂಸ್ಕೃತಿ ಒಟ್ಟಿಗೆ ಸಾಗಿಸಿದ ಶ್ರೇಯಸ್ಸು! ಡಾ| ಶಿವಮೂರ್ತಿ ಮುರುಘಾ ಶರಣರ ಬಣ್ಣನೆ
Team Udayavani, Mar 1, 2021, 3:51 PM IST
ದಾವಣಗೆರೆ: ಜಯದೇವ ಮುರುಘಾ ರಾಜೇಂದ್ರ ಸ್ವಾಮೀಜಿಯವರು ಜವಾಬ್ದಾರಿಗಾಗಿಯೇ ತಮ್ಮ ಜೀವನ ಸಮರ್ಪಣೆ ಮಾಡಿದವರು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶಿವಯೋಗಿ ಮಂದಿರದಲ್ಲಿ ಭಾನುವಾರ ಜಯದೇವ ಮಹಾಸ್ವಾಮೀಜಿಗಳ 64ನೇ ಸ್ಮರಣೋತ್ಸವ ಜಯದೇವಶ್ರೀ, ಶೂನ್ಯಪೀಠ ಪ್ರಶಸ್ತಿ ಪ್ರದಾನ ಮತ್ತು ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯದೇವ ಸ್ವಾಮೀಜಿವರು ಶರಣ ಮತ್ತು ಮುರುಘಾ ಸಂಸ್ಕೃತಿಯನ್ನ ಒಟ್ಟಿಗೆ ತೆಗೆದುಕೊಂಡ ಹೋದವರು. ಅವರೊಬ್ಬ ಅನರ್ಘ್ಯ ರತ್ನ ಎಂದು ಬಣ್ಣಿಸಿದರು.
ಶೂನ್ಯಪೀಠಕ್ಕೆ ತನ್ನದೆ ಆದ ಜವಾಬ್ದಾರಿ ಇದೆ. ಅಂತಹ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದವರು ಜಯದೇವ ಸ್ವಾಮೀಜಿವರು. ಪ್ರತಿಯೊಬ್ಬರು ಜವಾಬ್ದಾರಿಯುತ ಜೀವನ ನಡೆಸಬೇಕು. ಜವಾಬ್ದಾರಿಯಿಂದ ಹೋದಂತೆ ಜೀವನ ಉಜ್ವಲಮಾನ್ಯವಾಗಿರುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆ ಆಗಿದ್ದಾರೆ ಎಂದು ಸ್ಮರಿಸಿದರು.
ಬಸವಣ್ಣನವ ಆಂತರ್ಯದಲ್ಲಿ ವಿಶ್ವತ್ವ, ವಿಶ್ವ ಮಾನವತ್ವ ಇತ್ತು. ಬದುಕಿನ ಆಂತರ್ಯದಲ್ಲಿ ವಿಶ್ವತ್ವ ಇಟ್ಟುಕೊಂಡು ಮಾನವತ್ವಯೊಂದಿಗೆ ಎಲ್ಲ ಜಾತಿ ಯವರನ್ನು ಅಪ್ಪಿಕೊಂಡು ಮುಂದೆ ಸಾಗಿದರು. ಜಯದೇವ ಜಗದ್ಗುರುಗಳಲ್ಲಿ ಬಸವತ್ವ ಇತ್ತು. ಬಸವತ್ವ ಇಟ್ಟುಕೊಂಡು ದೈವತ್ವದ ಕಡೆಗೆ ಸಾಗಿದರು. ಬದುಕಿನಲ್ಲಿ ಬಸವತ್ವ ಇಟ್ಟುಕೊಳ್ಳುವುದು ಸುಲಭ ಅಲ್ಲ. ಸಾಕಾರಗೊಳಿಸುವುದು ಸಹ ಸುಲಭ ಅಲ್ಲ. ಅದನ್ನು ಸಾಧಿಸಿ ತೋರಿಸಿದವರು ಜಯದೇವ ಮುರುಘಾ ಶರಣರು ಎಂದು ತಿಳಿಸಿದರು.
ಜಯದೇವ ಶ್ರೀಗಳ ಬದುಕು ಸುತ್ತಾಟದ ಬದುಕಾಗಿತ್ತು. ಸುತ್ತಾಟದ ಬದುಕಿನವರು ಇತಿಹಾಸ ನಿರ್ಮಾಣ ಮಾಡುತ್ತಾರೆ. ಅಂತಹ ಸುತ್ತಾಟದ ಬದುಕನ್ನ ಸಾಗಿಸಿದವರು ಜಯದೇವ ಸ್ವಾಮೀಜಿವರು. ವರ್ಷದ 11 ತಿಂಗಳು ಸುತ್ತಾಟದಲ್ಲೇ ಇರುತ್ತಿದ್ದರು ಎಂದರು.
ಮಠವನ್ನು ಸಮಾಜದ ಬಳಿಗೆ ತೆಗೆದುಕೊಂಡು ಹೋದಂತಹ ಮಹಾನ್ ದಾರ್ಶನಿಕರು. ಅಂತಹ ವಿಶಿಷ್ಟ ತೋರಿದಂತಹ ಜಯದೇವ ಸ್ವಾಮೀಜಿಯವರು ಅಧ್ಯಾತ್ಮಿಕ ಲೋಕದಲ್ಲಿದ್ದುಕೊಂಡು ವಿದ್ಯಾಕ್ಷೇತ್ರದತ್ತ ಗಮನ ಹರಿಸಿದ ಫಲವಾಗಿ ರಾಜ್ಯಾದ್ಯಂತ ಉಚಿತ ಪ್ರಸಾದ ನಿಲಯಗಳು ಸ್ಥಾಪನೆಗೆ ಕಾರಣವಾಯಿತು ಎಂದು ತಿಳಿಸಿದರು.
ಬಸವಾದಿ ಶರಣರ ಬದುಕಿನಲ್ಲಿ ನಿಂದನೆ ಸಾಮಾನ್ಯ ಎನ್ನುವಂತಿತ್ತು. ಮಹಾನ್ ದಾರ್ಶನಿಕ ಬಸವಣ್ಣನವರು ನಿಂದನೆಯ ನಡುವೆಯೇ ಮೇಲೆದ್ದು ಬಂದವರು. ಅದೇ ರೀತಿ ಜಯದೇವ ಸ್ವಾಮೀಜಿಯವರು ನಿಂದನೆಯೇ ಮಧ್ಯೆಯೇ ಮೇಲೆದ್ದು ಬಂದವರು ಎಂದು ತಿಳಿಸಿದರು.
ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿ, ನಾಡಿನ ಎಲ್ಲ ಮಠಗಳು ವಚನ ಸಾಹಿತ್ಯದ ಸಂಶೋಧನೆಗೆ ಹೆಚ್ಚಿನ ಗಮನ ನೀಡಬೇಕು. ಪ್ರತಿಯೊಬ್ಬರು ವಚನ ಕೇಳುತ್ತಾರೆ. ಆದರೆ, ಅದರಲ್ಲಿನ ತತ್ವಗಳ ಪಾಲನೆಗೆ ಮುಂದಾಗದೆ ಇರುವುದು, ಅದರ ಅರ್ಥದಂತೆ ಜೀವನ ಸಾಗಿಸದೇ ಇರುವುದು ಕಂಡು ಬರುತ್ತಿದೆ ಎಂದು ತಿಳಿಸಿದರು.
ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದೀಲ್ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ವಚನಗಳನ್ನು ಹೆಚ್ಚಾಗಿ ಸೇರ್ಪಡೆ ಮಾಡಬೇಕು ಎಂದು ಪ್ರತಿಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.