ನನ್ನ ಹೋರಾಟ ರಾಜ್ಯದಲ್ಲೂಮುಂದುವರಿಯಲಿದೆ: ಚೇತನ್
Team Udayavani, Apr 30, 2018, 10:04 AM IST
ದಾವಣಗೆರೆ: ನಾನು 23 ವರ್ಷದವರೆಗೆ ಅಮೆರಿಕದಲ್ಲಿ ನೆಲೆಸಿದವನು. ಕಾಯಕ ತತ್ವ ಹಾಗೂ ಶೋಷಿತರ ಪರ ದನಿ ಎತ್ತುವುದಕ್ಕೆ ಅಲ್ಲೂ ಅವಕಾಶ ಇಲ್ಲ. ನಾನು ಈ ಕಾರ್ಯ ಮಾಡಿದ್ದಕ್ಕೆ ನನ್ನನ್ನು ಅಮೆರಿಕ ವಿರೋಧಿ ಎಂದು ಪಟ್ಟ ಕಟ್ಟಿ ಓಡಿಸಿದರು ಎಂದು ಚಲನಚಿತ್ರ ನಟ, ಆ ದಿನಗಳು ಖ್ಯಾತಿಯ ಚೇತನ್ ಹೇಳಿದರು.
ಭಾನುವಾರ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ನಾಡು ಕರ್ನಾಟಕಕ್ಕೆ ಬಂದು ಮತ್ತೆ ಈ ಹೋರಾಟಕ್ಕೆ ಅಣಿಯಾಗಿದ್ದೇನೆ. ಇಲ್ಲಿಯ ಜನ ನನ್ನನ್ನು ಒಪ್ಪುತ್ತಾರೆ. ನನ್ನ ವಿಷಯಗಳಿಗೆ ಮನ್ನಣೆ ನೀಡುತ್ತಾರೆ ಎಂಬ ಕಾರಣಕ್ಕೆ ಇಲ್ಲೂ ಸಹ ಅದೇ ಹೋರಾಟ ಆರಂಭಿಸಿದ್ದೇನೆ. ಈಗಾಗಲೇ ಕೆಲ ವಿಷಯಗಳಲ್ಲಿ ನಾವು ಜಯ ಸಾಧಿಸಿದ್ದೇವೆ ಎಂದರು.
ಬಿಜೆಪಿಗರು ನನ್ನನ್ನು ನಕ್ಸಲೈಟ್ ತರಹ ನೋಡುತ್ತಿದ್ದಾರೆ. ಕೆಲ ಹೋರಾಟಗಳಲ್ಲಿ ಭಾಗಿಯಾಗಿದ್ದಕ್ಕೆ ನಕ್ಸ್‌ಲೈಟ್ ಪಟ್ಟ ಕಟ್ಟಿದ್ದಾರೆ. ಆದರೆ ನಾನು ಹಿಂದೇಟು ಹಾಕಲ್ಲ. ಮುಂದೆ ರಾಜಕೀಯ ಪ್ರವೇಶ ಕುರಿತು ಸಹ ಚಿಂತಿಸುತ್ತಿದ್ದೇನೆ ಎಂದರು.
ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವುದು ಅನಿವಾರ್ಯ. ಈ ಹಿಂದೆಯೇ ಅಂದರೆ 1871ರಲ್ಲಿ ಇಂಗ್ಲಿಷರ ಆಳ್ವಿಕೆ ಕಾಲದಲ್ಲಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ಇತ್ತು. ಇದನ್ನೇ ಆಧರಿಸಿ, ಈ ಹಿಂದೆ ವೀರಶೈವ ಲಿಂಗಾಯತ ಹೆಸರಲ್ಲಿ ಸ್ವತಂತ್ರ ಧರ್ಮ ಸ್ಥಾನಮಾನ ಪಡೆಯುವಯತ್ನ ನಡೆಯಿತು. ಆದರೆ, ಶೈವ ಎಂಬ ಪದ ಬಂದ ಹಿನ್ನೆಲೆಯಲ್ಲಿ ಸ್ವತಂತ್ರ ಧರ್ಮ ಸ್ಥಾನಮಾನ ಸಿಗಲಿಲ್ಲ. ಈ ಬಾರಿ ಬಸವಣ್ಣನವರ ಶರಣ ತತ್ವ ಆಧಾರದಡಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ದೊರಕಿಸುವ ಯತ್ನ ನಡೆದಿದೆ. ಇದಕ್ಕೆ ಕೇಂದ್ರ ಸರ್ಕಾರ ಬೆಂಬಲಿಸಬೇಕು. ನಾಗಮೋಹನ್ ದಾಸ್ ವರದಿ ಅಂಗೀಕರಿಸಿ, ಸ್ವತಂತ್ರ ಧರ್ಮ ಸ್ಥಾನಮಾನ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ನಾವು ದೇವದಾಸಿ ಪದ್ಧತಿ ವಿರುದ್ಧ ಹೋರಾಟ ನಡೆಸಲು ಅಣಿಯಾಗಿದ್ದೇವೆ. ಸರ್ಕಾರ ಈಗಾಗಲೇ ಈ ಪದ್ಧತಿ ರದ್ದು ಮಾಡಿದ್ದರೂ ಸಹ ಆಚರಣೆಯಲ್ಲಿದೆ. ಇದರ ವಿರುದ್ಧ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇದೇ ಕಾರಣಕ್ಕೆ ನಾನು ಶನಿವಾರ ಮುತ್ತುಕಟ್ಟು ಆಚರಣೆ ಮಾಡಲಾಗುವ ಸ್ಥಳ ಉಚ್ಚಂಗಿದುರ್ಗಕ್ಕೆ ಹೋಗಿ ಬಂದೆ ಎಂದು ತಿಳಿಸಿದರು.
ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಬಡದಾಳ್, ಖಜಾಂಚಿ ಎ.ಎಲ್. ತಾರಾನಾಥ, ಹಿರಿಯ ಪತ್ರಕರ್ತರಾದ ಬಕ್ಕೇಶ ನಾಗನೂರು, ಸುಭಾಷ್ ಬಣಗಾರ್ ಸೇರಿದಂತೆ ವಿವಿಧ ಪತ್ರಿಕೆ, ಟಿವಿ ಮಾಧ್ಯಮದ ಪ್ರತಿನಿಧಿಗಳು ಸಂವಾದದಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.