ನನ್ನ ಪರಿವಾರ-ಬಿಜೆಪಿ ಪರಿವಾರ ಅಭಿಯಾನ ಇಂದಿನಿಂದ
Team Udayavani, Feb 17, 2019, 7:18 AM IST
ದಾವಣಗೆರೆ: ಭಾರತೀಯ ಜನತಾ ಪಕ್ಷ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ನನ್ನ ಪರಿವಾರ ಬಿಜೆಪಿ ಪರಿವಾರ ಎಂಬ ಘೋಷವಾಕ್ಯದಡಿ ಮುಖಂಡರ ಮನೆಯ ಮೇಲೆ ಪಕ್ಷದ ಬಾವುಟ ಹಾರಿಸುವ ಅಭಿಯಾನ ಜಿಲ್ಲೆಯಾದ್ಯಂತ ಫೆ. 17ರಿಂದ ಆರಂಭಗೊಳ್ಳಲಿದೆ.
ಶನಿವಾರ, ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಭಾನುವಾರ ಬೆಳಗ್ಗೆ 8-30ಕ್ಕೆ ತಮ್ಮ ನಿವಾಸದ ಮೇಲೆ ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈ ಅಭಿಯಾನ ಮಾ. 2ರವರೆಗೆ ನಡೆಯಲಿದೆ ಎಂದರು.
ಪಕ್ಷದ ಶಾಸಕರು, ಮಾಜಿ ಶಾಸಕರು, ಮಂಡಲ ಹಾಗೂ ಮಹಾಶಕ್ತಿ ಕೇಂದ್ರ, ಬೂತ್ ಮಟ್ಟದ ಅಧ್ಯಕ್ಷರ ನಿವಾಸದ ಮೇಲೆ ಬಾವುಟ ಹಾರಿಸಲಾಗುವುದು. ಜಿಲ್ಲೆಯಲ್ಲಿ 1956 ಬೂತ್‌ಮಟ್ಟದ ಹಾಗೂ 348 ಮಂಡಲ ಮಹಾಶಕ್ತಿ ಕೇಂದ್ರಗಳಿವೆ. ಒಟ್ಟಾರೆ 3000 ಮುಖಂಡರ ನಿವಾಸಗಳ ಮೇಲೆ ಪಕ್ಷದ ಬಾವುಟ ಹಾರಾಡಲಿದೆ ಎಂದು ಹೇಳಿದರು.
ಅದೇ ರೀತಿ ಫೆ. 26ರಿಂದ ಕಮಲ್ ಉಜ್ವಲ್ ಜ್ಯೋತಿ ಕಾರ್ಯಕ್ರಮ ಎಲ್ಲಾ ಮಂಡಲಗಳಲ್ಲಿ ಆರಂಭವಾಗಲಿದೆ. ಇನ್ನು ಕಮಲ್ ಸಂದೇಶ್ ಬೈಕ್ ರ್ಯಾಲಿ ಲೋಕಸಭಾ ಚುನಾವಣೆಯ ಮತದಾನದವರೆಗೂ ನಡೆಯಲಿದೆ. ಪ್ರತಿ ಮಂಡಲದಲ್ಲಿ ಮೂರು ಬೈಕ್‌ಗಳಲ್ಲಿ ಮತದಾನದವರೆಗೂ
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈವರೆಗೆ ಜಾರಿಗೊಳಿಸಿದ ಯೋಜನೆಗಳು ಫಲಾನುಭವಿಗಳಿಗೆ ತಲುಪದಿದ್ದಲ್ಲಿ ಅವುಗಳನ್ನು ತಲುಪಿಸಲು ಪ್ರತಿ ಬೂತ್‌ನ ಅಧ್ಯಕ್ಷರು ಕಾರ್ಯೋನ್ಮುಖರಾಗಲಿದ್ದಾರೆ ಎಂದು ಹೇಳಿದರು.
ಈವರೆಗೂ ಉಜ್ವಲ ಯೋಜನೆಯಡಿ 95 ಸಾವಿರ ಫಲಾನುಭವಿಗಳಿಗೆ ಗ್ಯಾಸ್ ಸಿಲೆಂಡರ್ ವಿತರಿಸಲಾಗಿದೆ. ಮುದ್ರಾ ಯೋಜನೆಯಡಿ 62 ಸಾವಿರ ಮಂದಿಗೆ ಸಾಲ ಸೌಲಭ್ಯ ಹಾಗೂ ಮಾತೃ ವಂದನಾ ಯೋಜನೆಯಡಿ 24 ಸಾವಿರ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗಿದೆ
ಎಂದು ಮಾಹಿತಿ ನೀಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆಯಂತೆ ಈಗಾಗಲೇ ಕಳೆದ 11ರಿಂದ ಸಮರ್ಪಣಾ ದಿವಸ್ ಆರಂಭವಾಗಿದ್ದು, ಆನ್‌ಲೈನ್ ಮೂಲಕ 5ರಿಂದ 1000 ರೂ. ವರೆಗೆ ದೇಣಿಗೆ ಪಾವತಿಸಬಹುದು ಎಂದು ಅವರು ಹೇಳಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಎನ್.ಶಿವಕುಮಾರ್, ಎನ್.ರಾಜಶೇಖರ್, ಖಜಾಂಚಿ ಹೇಮಂತಕುಮಾರ್, ದಕ್ಷಿಣ ಮಂಡಲದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರರ್, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.