ಕೋವಿಡ್ ಭೀತಿಯಲ್ಲೇ ಪಂಚಮಿ
Team Udayavani, Jul 25, 2020, 11:32 AM IST
ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್‌ನ ವ್ಯಾಪಕ ಹರಡುವಿಕೆ, ಭಯದ ವಾತಾವರಣದ ನಡುವೆಯೂ ದಾವಣಗೆರೆ ಜನರು ಶುಕ್ರವಾರ ನಾಗರಪಂಚಮಿ ಹಬ್ಬವನ್ನು ಆಚರಿಸಿದರು.
ಶ್ರಾವಣ ಮಾಸದ ಪಂಚಮಿ ದಿನ ಕಲ್ಲು ನಾಗರಕ್ಕೆ ಹಾಲು ಎರೆಯುವುದು, ಪೂಜೆ ಸಲ್ಲಿಸುವ ಸಂಪ್ರದಾಯವನ್ನು ದಾವಣಗೆರೆಯಲ್ಲಿ ಬಹುತೇಕ ಕಡೆ ಬಹಳ ಅದ್ಧೂರಿಯಾಗಿ ಆಚರಿಸುವುದು ಸಾಮಾನ್ಯ. ಆದರೆ ಈ ವರ್ಷ ಎಂದೆಂದೂ ಕಂಡು ಕೇಳರಿಯದ ಕೋವಿಡ್ ವೈರಸ್ ಹಾವಳಿ ಆ ಎಲ್ಲಾ ಸಂಭ್ರಮವನ್ನು ಆಪೋಶನ ಮಾಡಿದೆ. ಬೆಳಗ್ಗೆಯಿಂದಲೇ ನಾಗರಕಟ್ಟೆ, ದೇವಸ್ಥಾನ, ಹಿಂದಿನ ಕಾಲದಿಂದಲೂ ಹಾಲು ಎರೆಯುವ ಸ್ಥಳಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಹಾಲು ಎರೆಯುವುದು ಕಂಡು ಬಂದಿತು. ಕೋವಿಡ್ ವೈರಸ್ ಭಯದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು. ಸ್ಯಾನಿಟೈಸರ್ ಸಹ ಬಳಸಿದರು.
ಪ್ರತಿ ವರ್ಷ ಒಬ್ಬರು ಪೂಜೆ ಮಾಡಿದ್ದ ಕಲ್ಲುನಾಗರ, ದೇವರ ಮೂರ್ತಿಗಳನ್ನು ಶುಚಿಗೊಳಿಸಿ, ಹೂವು, ಹತ್ತಿ ಹಾರ ಹಾಕಿ ಪೂಜೆ ಮಾಡುತ್ತಿದ್ದರು. ಆದರೆ ಈ ವರ್ಷ ಯಾವುದೇ ಗೋಜಿಗೇ ಹೋಗಲಿಲ್ಲ. ಬೇರೆಯವರು ಪೂಜೆ ಮಾಡಿದ್ದನ್ನು ತೆಗೆಯುವುದು, ಮತ್ತೆ ಶೃಂಗರಿಸುವುದನ್ನು ಮಾಡಲಿಲ್ಲ. ಹಾಗೆಯೇ ಪೂಜೆ ಮಾಡಿ ಹಾಲು ಎರೆದರು. ಕಾರಣ ಕೋವಿಡ್ ಭಯ. ಅಷ್ಟೊಂದು ಮುಂಜಾಗ್ರತೆಯೊಂದಿಗೆ ಹಬ್ಬದಾಚರಣೆ ಮಾಡಿದರು. ಕೋವಿಡ್ ಧಾರ್ಮಿಕ ವಿಧಿ, ವಿಧಾನ, ಪೂಜಾ ಕಾರ್ಯಗಳಿಗೂ ತಡೆ ಉಂಟು ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
Nyamathi: ಎಸ್‌ಬಿಐ ಬ್ಯಾಂಕ್ ನಿಂದ 12.95 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ
Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್: ಮಹಾನಗರ ಪಾಲಿಕೆಯ ಹೊಸ ಕ್ರಮ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.