ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ
Team Udayavani, Dec 10, 2021, 4:26 PM IST
ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್‌ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿಡಿ. 10 ಮತ್ತು 11 ರಂದು ರಾಷ್ಟ್ರೀಯ ಶಿಕ್ಷಣನೀತಿ-2020 ಕುರಿತು ಎರಡು ದಿನಗಳಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಸಾರ್ವಜನಿಕ ಸಂಪರ್ಕ ಡೀನ್ ಡಾ|ಜಿ.ಪಿ. ದೇಸಾಯಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕವಿಶ್ವ ವಿದ್ಯಾಲಯದ ಸಹಯೋಗದಲ್ಲಿಹಮ್ಮಿಕೊಂಡಿರುವ ಈ ಕಾರ್ಯಾಗಾರದಲ್ಲಿ ರಾಜ್ಯದವಿವಿಧ ತಾಂತ್ರಿಕ ಮಹಾವಿದ್ಯಾ ಲಯಗಳ 400ಕ್ಕೂಅಧಿಕ ಉಪನ್ಯಾಸಕರು ಭಾಗವಹಿಸುವರು.ಕೊರೊನಾ ನಿಯಮಾವಳಿಗಳಂತೆ ಆಫ್ ಮತ್ತುಆನ್‌ಲೈನ್‌ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಶಿಕ್ಷಣ ವ್ಯವಸ್ಥೆ ಮತ್ತು ನೀತಿಗಳುಕಾಲಕ್ಕೆ ಅನುಗುಣವಾಗಿ ಹೊಸ ಪದ್ಧತಿಗಳನ್ನುಅಳವಡಿಸಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆತಂದು ಆಧುನೀಕರಣಗೊಳಿಸಲು ರಾಷ್ಟ್ರೀಯಶಿಕ್ಷಣ ನೀತಿ-2020 ರೂಪಿಸಲಾಗಿದೆ. ನೂತನರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನುಅರ್ಥೈಸುವುದು, ವಿಶ್ಲೇಷಿಸುವುದು, ಕೌಶಲ್ಯತರಬೇತಿ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದನಡುವಿನ ಅಂತರ ಕಡಿಮೆ ಮಾಡುವುದು,ನೀತಿಯ ಅನುಷ್ಠಾನದಲ್ಲಿ ವಿದ್ಯಾರ್ಥಿಗಳ,ಶಿಕ್ಷಕರ, ಸಮಾಜದ ಪಾತ್ರದ ಬಗ್ಗೆ ಚರ್ಚಿಸುವಉದ್ದೇಶದಿಂದ ಎರಡು ದಿನಗಳ ಕಾರ್ಯಾಗಾರಏರ್ಪಡಿಸಲಾಗಿದೆ ಎಂದು ಹೇಳಿದರು.
ಶುಕ್ರವಾರ ಬೆಳಗ್ಗೆ 10ಕ್ಕೆ ಕಾಲೇಜಿನಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನಸಾಂಸ್ಕೃತಿಕ ಕೇಂದ್ರದಲ್ಲಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದಕುಲಪತಿ ಡಾ| ಕರಿಸಿದ್ದಪ್ಪ ಕಾರ್ಯಾಗಾರಉದ್ಘಾಟಿಸುವರು. ಕುಲಸಚಿವ ಡಾ|ಎ.ಎಸ್. ದೇಶಪಾಂಡೆ, ಬೆಂಗಳೂರುವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಡಾ| ಕೆ. ಸಿದ್ದಪ್ಪ, ಬಿಐಇಟಿ ನಿರ್ದೇಶಕ ಪ್ರೊ| ವೈ.ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ| ಎಚ್.ಬಿ.ಅರವಿಂದ್ ಇತರರು ಭಾಗವಹಿಸುವರು ಎಂದರು.
ಡಾ| ನಿರ್ಮಲಾ ಮಾತನಾಡಿ,ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣಪರಿಷತ್ತಿನಿಂದ ಅಸ್ತಿತ್ವದಲ್ಲಿರುವ ರಾಷ್ಟ್ರೀಯಮಾನ್ಯತಾ ಮಂಡಳಿ ರೂಪಿಸಿರುವಮಾನದಂಡಗಳಂತೆ ಬಾಪೂಜಿ ಇಂಜಿನಿಯರಿಂಗ್‌ಮತ್ತು ತಾಂತ್ರಿಕ ಮಹಾವಿದ್ಯಾಲಯವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣನೀಡುತ್ತಿದೆ. ಹಲವಾರು ಅಂಶಗಳ ಆಧಾರದಲ್ಲಿಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮನ್ನಣೆದೊರೆತಿದೆ. ಅಖೀಲ ಭಾರತ ಮಟ್ಟದಲ್ಲಿ 57,ರಾಜ್ಯ ಮಟ್ಟದಲ್ಲಿ 14ನೇ ರ್‍ಯಾಂಕ್ ದೊರೆತಿದೆ ಎಂದು ತಿಳಿಸಿದರು.
ಬಾಪೂಜಿ ಇಂಜಿನಿಯರಿಂಗ್ ಮತ್ತುತಾಂತ್ರಿಕ ಮಹಾವಿದ್ಯಾಲಯದ ಅಭ್ಯಾಸಮಾಡಿರುವ ಮತ್ತು ಮಾಡುತ್ತಿರುವ 400ಕ್ಕೂಹೆಚ್ಚು ವಿದ್ಯಾರ್ಥಿಗಳು 64ಕ್ಕೂ ಹೆಚ್ಚು ಪ್ರತಿಷ್ಠಿತಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.ಸಿಂಗಾಪುರ ಮೂಲದ ಕಂಪನಿಗಳಲ್ಲೂ ನಮ್ಮಕಾಲೇಜಿನ ವಿದ್ಯಾರ್ಥಿಗಳು ಉನ್ನತ ಮಟ್ಟದಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದರು.ಬಿಐಇಟಿ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ,ಪ್ರಾಚಾರ್ಯ ಡಾ| ಎಚ್.ಬಿ. ಅರವಿಂದ್,ಕಲ್ಲೇಶಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.