ನಮ್ಮವರಿಂದಲೇ ಕಲಾ ಪ್ರಕಾರಗಳ ನಿರ್ಲಕ್ಷ್ಯ
Team Udayavani, Jul 14, 2017, 2:21 PM IST
ದಾವಣಗೆರೆ: ಯಕ್ಷಗಾನಕ್ಕೆ ಕರಾವಳಿ ಮಂದಿಯಷ್ಟು ಆದ್ಯತೆ, ಪ್ರೋತ್ಸಾಹ, ಆಸಕ್ತಿ ರೀತಿ ಬಯಲಾಟಕ್ಕೆ ಉತ್ತರ ಕರ್ನಾಟಕದವರು ನೀಡುತ್ತಿಲ್ಲ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ, ನಾಡೋಜ ಬೆಳಗಲ್ಲು ವೀರಣ್ಣ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಶಿಕ್ಷಣ ಸಂಸ್ಥೆ, ಕಾಲೇಜು, ಸಂಘದೊಂದಿಗೆ ಅಕಾಡೆಮಿ ಹಮ್ಮಿಕೊಂಡಿರುವ ಎರಡು ದಿನಗಳ ಬಯಲಾಟ ಯಕ್ಷಗಾನ ಕಲಾ ಸಂಭ್ರಮದ ಗುರುವಾರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಿಂದ ಕಾಲೇಜುವರೆಗೂ ಯಕ್ಷಗಾನ ಅಭಿರುಚಿ ಬೆಳೆಸುವ ಮೂಲಕ ಆ ಕಲೆ ನಶಿಸಿ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ಬಯಲಾಟ, ಸಣ್ಣಾಟ, ಪಾರಿಜಾತದಂತಹ ಕಲಾ ಪ್ರಕಾರಗಳಿಗೆ ಮೂಲ ನೆಲೆಯಾದ ಉತ್ತರ ಕರ್ನಾಟಕದಲ್ಲೇ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು
ವಿಷಾದಿಸಿದರು.
ಕರಾವಳಿಯಲ್ಲಿ ವಿದ್ಯಾವಂತರು, ಪ್ರಜ್ಞಾವಂತರು, ವಿದ್ವಾಂಸರು ಯಕ್ಷಗಾನ ಅವನತಿ ಅಂಚಿಗೆ ಹೋಗದಂತೆ ಎಚ್ಚರವಹಿಸುತ್ತಿದ್ದಾರಲ್ಲದೆ, ಆ ಕಲೆ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಹಾಗಾಗಿಯೇ ಇಂದು ಯಕ್ಷಗಾನ ದೇಶ-ವಿದೇಶಗಳಲ್ಲೂ
ಪಸರಿಸಲು ಕಾರಣವಾಗಿದೆ. ಆದರೆ, ಬಯಲಾಟ, ಸಣ್ಣಾಟ, ಪಾರಿಜಾರದಂಥಹ ಕಲಾ ಪ್ರಕಾರಗಳು ಮರೆಯಾಗಲು ಬರೀ ಪ್ರೇಕ್ಷಕರ ಕೊರತೆಯೊಂದೇ ಕಾರಣವಲ್ಲ. ಕಲಾವಿದರೂ ಸಹ ಪ್ರಾಮಾಣಿಕವಾಗಿ ಆ ಕಲೆಗಳ ಉಳಿಸಲು ಶ್ರಮಿಸಬೇಕು. ಗುಣಮಟ್ಟದಿಂದ ಕೂಡಿದ ಯಾವುದೇ ಕಲೆ ಪ್ರೇಕ್ಷಕರಿಂದ ತಾತ್ಸಾರಕ್ಕೊಳಗಾಗದು. ಆದ್ದರಿಂದ ಹೊಸ ಹೊಸ ವಿಧಾನ ಅಳವಡಿಸಿಕೊಂಡು ಪ್ರೇಕ್ಷಕರ
ಆಕರ್ಷಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಇಂಥಹ ಪ್ರಯತ್ನ ತಾವು ತೊಗಲುಗೊಂಬೆ ಪ್ರದರ್ಶನದಲ್ಲಿ ಪ್ರಯೋಗಿಸಿದ್ದರಿಂದಲೇ ಆ ಕಲೆ ವಿದೇಶಗಳಲ್ಲಿ ಕಾಣುವಂತಾಯಿತು. ನನ್ನಂಥ ಕಲಾವಿದ ಸಹ ಹಲವಾರು ದೇಶ ಸುತ್ತುವ ಅವಕಾಶ ದೊರೆಯಿತು ಎಂದು ಹೇಳಿದರು.
ಈ ಹಿಂದೆ ಮೈಸೂರು ಸಮಾವೇಶದಲ್ಲಿ ಉತ್ತರ ಕರ್ನಾಟಕದ ಕಲಾ ಪ್ರಕಾರಗಳಿಗೆ ಅವಕಾಶವನ್ನೇ ನೀಡಲಿಲ್ಲ. ಕೆಲವು ದಿನಗಳಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಾಗಾಗದಿರಲಿ. ದಾವಣಗೆರೆ ಕಲೆ, ಸಂಸ್ಕೃತಿ, ಸಾಂಸ್ಕೃತಿಕ, ನಾಟಕ ಮುಂತಾದವುಗಳಿಗೆ ಸದಾ ಪ್ರೋತ್ಸಾಹ, ಗೌರವ ನೀಡುವ ನಗರಿ. ಮುಂದಿನ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಕಲೆಗಳಿಗೆ
ಆದ್ಯತೆ ದೊರೆಯುವಂತಾಗಲಿ ಎಂದು ಇದೇ ಸಂದರ್ಭದಲ್ಲಿ ವೀರಣ್ಣ ಆಶಿಸಿದರು.
ಇಂದು ಇಂಗ್ಲಿಷ್ ಸಂಸ್ಕೃತಿ ಹಾವಳಿಯಿಂದ ಶಾಲಾ-ಕಾಲೇಜುಗಳಲ್ಲಿ ವಾತಾವರಣವೇ ಬದಲಾಗಿದೆ. ಶ್ರೇಷ್ಠ ಭಾರತೀಯ ಸಂಸ್ಕೃತಿ ಕೈ ಬಿಟ್ಟರೆ ನಮ್ಮನ್ನು ನಾವೇ ಕಳೆದುಕೊಂಡಂತೆ. ಆದ್ದರಿಂದ ಅಧ್ಯಾಪಕರು ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಲು ಮುಂದಾಗಬೇಕು. ಮೇಲಾಗಿ ಶಿಕ್ಷಕರು ಮೊದಲು ತಾವು ಬಯಲಾಟ, ಸಣ್ಣಾಟ, ಪಾರಿಜಾತದಂಥಹ ಕಲಾ ಪ್ರಕಾರಗಳ ಬಗ್ಗೆ ತಿಳಿದುಕೊಂಡು ಮಕ್ಕಳಲ್ಲಿ ಅವುಗಳನ್ನು ಬೆಳೆಸಲು ಕಾರ್ಯೋನ್ಮುಖರಾಗಬೇಕಿದೆ ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಕಲೆ ಮನುಷ್ಯನ ಜೀವನವನ್ನ ಎಲ್ಲಿಯೋ ಕರೆದೊಯ್ಯಲಿದೆ. ಅಂಥಹ ಶಕ್ತಿ ಕಲೆಗಿದೆ. ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಬಹು ಎತ್ತರದ ಸ್ಥಿತಿಯಲ್ಲಿ ನಿಲ್ಲಲಿದೆ. ಮುಖ್ಯವಾಗಿ ಯಕ್ಷಗಾನ ಭೌತಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಯಿಂದ ಕೂಡಿದೆ. ವ್ಯಕ್ತಿ ಪ್ರತಿದಿನ ಕೊಂಚ ಕಾಲ ಸಂಗೀತ, ನೃತ್ಯ ಇಲ್ಲವೆ ಯಾವುದೇ ಕಲಾ ಪ್ರಕಾರದಲ್ಲಿ ತೊಡಗುವುದರಿಂದ ಸದೃಢ ಆರೋಗ್ಯವಲ್ಲದೆ, ಮನಸ್ಸಿಗೆ ಶಾಂತಿ ಲಭ್ಯವಾಗಲಿದೆ ಎಂದರು.
ಎಲ್ಲಾ ಕಲಾ ಪ್ರಕಾರಗಳೂ ಕ್ಷೀಣಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅಕಾಡೆಮಿ ಮೂಲಕ ಉಳಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ
ಒಳ್ಳೆಯ ಕೆಲಸ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಬಹುಮುಖ್ಯ ಎಂದು ಒತ್ತಿ ಹೇಳಿದರು.
ದಾವಿವಿ ಸಿಂಡಿಕೇಟ್ ಸದಸ್ಯ ಡಾ|ಎಚ್. ವಿಶ್ವನಾಥ್ ಮಾತನಾಡಿ, ಬಯಲಾಟ-ಯಕ್ಷಗಾನ ರಂಗಭೂಮಿಯ ಇನ್ನೊಂದು ಮುಖ. ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳನ್ನ ಹಿಡಿದಿಡುವಲ್ಲಿ ಅಕಾಡೆಮಿ ಬಹುದೊಡ್ಡ ಪ್ರಯತ್ನ ಮಾಡುತ್ತಿದೆ. ಇಂದು ಜಾನಪದರ ಬದುಕು ಅತ್ಯಂತ ದುಸ್ಥಿತಿಯಲ್ಲಿದೆ. ಮುಖ್ಯವಾಗಿ ನಮ್ಮ ಕಲೆಗಳ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳಬೇಕಿದೆ ಎಂದರು. ಸಿದ್ದಗಂಗಾ ಶಾಲೆ ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜ ಮಾತನಾಡಿ, ಶ್ರೀಮಂತ ಕಲಾ ಪ್ರಕಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿ ಪ್ರತ್ಯೇಕ ಆಗಲಿವೆ. ಇಲಾಖೆಗೆ ಸರ್ಕಾರ ಹೆಚ್ಚು ಅನುದಾನ ನೀಡಿದೆ.
ಕಲಾವಿದರ ಬಗ್ಗೆ ಸರ್ಕಾರ ಕೂಡ ಸಾಕಷ್ಟು ಕಾಳಜಿ ವಹಿಸಿದೆ ಎಂದು ತಿಳಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ
ವೇದಿಕೆಯಲ್ಲಿದ್ದರು. ಸದಸ್ಯ ಸಂಚಾಲಕ ಡಾ| ಬಿ.ಎಂ. ಗುರುನಾಥ ಸ್ವಾಗತಿಸಿದರು. ಎನ್.ಎಸ್.ರಾಜು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.