ಶಾಯಿರಿ ಪ್ರಕಾರ ಹೆಚ್ಚಳವೇ ಇಟಗಿ ಈರಣ್ಣಗೆ ನುಡಿಕಾಣಿಕೆ


Team Udayavani, Mar 27, 2017, 1:09 PM IST

dvg3.jpg

ದಾವಣಗೆರೆ: ಕನ್ನಡದಲ್ಲಿ ಶಾಯಿರಿ ಪ್ರಕಾರವನ್ನು ಇನ್ನೂ ಹೆಚ್ಚು ಸದೃಢಗೊಳಿಸುವ ಮೂಲಕ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ನುಡಿಕಾಣಿಕೆ ಸಲ್ಲಿಸಬೇಕು ಎಂದು ಕವಿ ಚಂದ್ರಶೇಖರ ತಾಳ್ಯ ತಿಳಿಸಿದ್ದಾರೆ. 

ಭಾನುವಾರ ರೋಟರಿ ಬಾಲಭವನದಲ್ಲಿ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ದಾವಣಗೆರೆಯ ಪ್ರಗತಿಪರ ಸಾಹಿತ್ಯ ಪರಿಷತ್ತು ಮತ್ತು ಕಾವ್ಯ ಮಂಡಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಟಗಿ ಈರಣ್ಣ ಅವರು ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ತಕ್ಕುದಾದ ಶಾಯಿರಿ ಕವಿ ಆಗಿದ್ದರು. ಶಾಯಿರಿ ರಚನೆ ಹೆಚ್ಚಿಸುವ ಮೂಲಕ ಅವರಿಗೆ ನಿಜ ಅರ್ಥದಲ್ಲಿ ನುಡಿಕಾಣಿಕೆ ಸಲ್ಲಿಸಬೇಕೆಂದು ತಿಳಿಸಿದರು. ಕನ್ನಡಕ್ಕೆ ಅರೇಬಿಕ್‌ ಮೂಲದಿಂದ ಶಾಯಿರಿ ಪ್ರಾಕಾರ ಬಂದಿದೆ. ಅಂತಹ ಶಾಯಿರಿಯನ್ನು ಕವಿಗೋಷ್ಠಿಯಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. 

ಈಗಂತೂ ಕವಿಗೋಷ್ಠಿ ಎಂದರೆ ತೀರಾ ಸಪ್ಪೆ, ನಿರಾಸೆ ಮೂಡಿಸುವಂತಿರುತ್ತವೆ. ಓದುಗರು ಮತ್ತು ಕೇಳುಗರಲ್ಲಿ ಇರುಸು ಮುರುಸು ಉಂಟು ಮಾಡುವಂತಿರುತ್ತವೆ. ಅಂತಹ ಕಡೆ ಶಾಯಿರಿ ಬಳಸಬೇಕು. ಶಾಯಿರಿ ಕನ್ನಡ ಸಾಹಿತ್ಯ ಲೋಕಕ್ಕೆ ಬೆಳಕಿನಂತಿವೆ ಎಂದು ಅಭಿಪ್ರಾಯಪಟ್ಟರು. ಹಳೆಗನ್ನಡ ಮತ್ತಿತರ ಕಡೆ ಶಾಯಿರಿ ಇರಲಿಲ್ಲ.

ಇದ್ದರೂ ಹೆಚ್ಚಿನ ಮಟ್ಟದಲ್ಲಿ ಬೆಳಕಿಗೆ ಬಂದಿಲ್ಲ. ನವೋದಯ ಕಾವ್ಯ ಪ್ರಚಲಿತಕ್ಕೆ ಬಂದ ನಂತರ ಹೆಚ್ಚಾಗಿ ಶಾಯಿರಿ ಕಂಡು ಬಂದವು. ಎಲ್ಲಾ ಕಮ್ಮಟದಂತೆ ಶಾಯಿರಿ ಕಮ್ಮಟ ಏರ್ಪಡಿಸುವ ಮೂಲಕ ಹೊಸ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. 

ಸಂತೇಬೆನ್ನೂರಿನ ಯುವ ಕವಿ ಸಂತೆಬೆನ್ನೂರು ಫೈಜ°ಟ್ರಾಜ್‌ ಮಾತನಾಡಿ, ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ಅತಿ ಸರಳವಾದ ಮಾತಿನಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ, ಹೇಳುವಂತಹ ಶಕ್ತಿ ಇತ್ತು. ಸಾಹಿತ್ಯ ವಲಯದಲ್ಲಿ ಈ ರೀತಿಯ ನೆನಪು ಕಾರ್ಯಕ್ರಮಗಳ ಮೂಲಕ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುವುದು ಒಳ್ಳೆಯ ಕಾರ್ಯ.

ಸಾಂಸ್ಕೃತಿಕ ವಲಯದಲ್ಲಿ ಇಂತದ್ದು ಸದಾ ಕಾಡಬೇಕು ಎಂದು ಬಯಸಿದರು. ಇಟಗಿ ಈರಣ್ಣ ಅವರಗಿಂತಲೂ ಮುಂಚೆಯೇ ಈ.ಗೋ. ದುಂಡೆಪ್ಪ, ಕೆಸಿಕೆ, ಆರ್‌. ಎನ್‌. ಕುಬೇರಪ್ಪ ಮುಂತಾದವರು ಶಾಯಿರಿ ರಚಿಸಿದ್ದರು. ಪಾಟೀಲಪ್ಪ ಅವರಿಂದ ಶಾಯಿರಿ ಹುಚ್ಚು ಬೆಳೆಸಿಕೊಂಡಂತಹ ಈರಣ್ಣ ಅವರು ಉತ್ತರ ಕರ್ನಾಟಕದ  ಗಂಡುಮೆಟ್ಟಿನ ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಮೂಲಕ ಕನ್ನಡ ಲೋಕಕ್ಕೆ ಶಾಯಿರಿ ಕಾಣಿಕೆ ನೀಡಿದರು ಎಂದು ಸ್ಮರಿಸಿದರು. 

ವಿಶ್ರಾಂತ ಪ್ರಾಚಾರ್ಯ ಪ್ರೊ| ಎಚ್‌.ಎ. ಭಿಕ್ಷಾವರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಸ್‌.ಎಚ್‌. ಹೂಗಾರ್‌, ಹರಪನಹಳ್ಳಿ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ್‌, ಪ್ರಗತಿಪರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ಕಾವ್ಯ ಮಂಡಳ ಕಾರ್ಯದರ್ಶಿ ನಾಗರಾಜ ಸಿರಿಗೆರೆ ಇತರರು ಇದ್ದರು. 

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.