ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ಮನೆಗೆ ಬರಲಿದೆ ನೋಟಿಸ್!
Team Udayavani, May 27, 2017, 1:35 PM IST
ದಾವಣಗೆರೆ: ಪೊಲೀಸ್ ಕಮೀಷನರೇಟ್ ಹೊಂದಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಹೊರತುಪಡಿಸಿ ಪ್ರಥಮವಾಗಿ ದಾವಣಗೆರೆಯಲ್ಲಿ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್‌ಅನ್ನು ಶುಕ್ರವಾರ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ| ಎಂ.ಎ. ಸಲೀಂ ಉದ್ಘಾಟಿಸಿದರು.
ಶುಕ್ರವಾರ ನಗರ ಪೊಲೀಸ್ ಉಪಾಧೀಕ್ಷರ ಕಚೇರಿಯಲ್ಲಿ ಟ್ರಾಫಿಕ್ ಎನ್‌ಫೋರ್ಸ್ ಮೆಂಟ್ ಆಟೋಮೇಷನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಸಂಚಾರ ವ್ಯವಸ್ಥೆಯಲ್ಲಿ ಪಾರದರ್ಶಕತ್ವ, ಸುಧಾರಣೆ, ಸುಗಮ ಸಂಚಾರ… ಮುಂತಾದ ಉದ್ದೇಶದಿಂದ ದಾವಣಗೆರೆಯಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದರು.
ಪೊಲೀಸ್ ಕಮೀಷನರೇಟ್ ಹೊಂದಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಹೊರತುಪಡಿಸಿದರೆ ದಾವಣಗೆರೆ ಟ್ರಾಫಿಕ್ ಎನ್‌ಫೋಸ್ ìಮೆಂಟ್ ಆಟೋಮೇಷನ್ ಸೆಂಟರ್ ಕಾರ್ಯಾರಂಭಿಸುವ ಮೊದಲ ಜಿಲ್ಲೆಯಾಗಿದೆ. ಶಿವಮೊಗ್ಗದಲ್ಲಿ ಸೆಂಟರ್ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ, ಹಾವೇರಿಯಲ್ಲೂ ಈ ವ್ಯವಸ್ಥೆ ಅಳವಡಿಸಲಾಗುವುದು ಎಂದರು.
ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಡಿಜಿಟಲ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ಸಂಬಂಧಿತ ಠಾಣೆಗಳ ಮೂಲಕ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್‌ಗೆ ಮಾಹಿತಿ ರವಾನಿಸಲಾ ಗುತ್ತದೆ. ನಮ್ಮಲ್ಲಿರುವ ವಾಹನ ಮಾಲಿಕರ ವಿವರದ ಆಧಾರದಲ್ಲಿ ಸಂಬಂಧಿತರಿಗೆ ನೋಟಿಸ್ ಕಳಿಸಲಾಗುವುದು.
ಅವರು ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್‌ಗೆ ಬಂದು ನೋಟಿಸ್‌ಗೆ ಉತ್ತರ ನೀಡಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲಿ ನ್ಯಾಯಾಲಯದಲ್ಲಿ ದಂಡ ಕಟ್ಟಬೇಕಾಗುತ್ತದೆ.ಪ್ರತಿದಿನ ಸಾವಿರ ಜನಕ್ಕೆ ನೋಟೀಸ್ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಕೆಲಸ ಮಾಡುವುದರಿಂದ ಇನ್ನು ಮುಂದೆ ರಸ್ತೆಯಲ್ಲಿ ಸಂಚಾರಿ ಪೊಲೀಸರು ವಾಹನ ತಡೆದು, ನಿಲ್ಲಿಸುವುದು. ಸ್ಥಳದಲ್ಲೇ ದಂಡ ವಸೂಲು ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಹಿಂದಿನ ವ್ಯವಸ್ಥೆಯೇ ಮುಂದುವರೆಸಲಾಗುವುದು. 2 ವರ್ಷದಲ್ಲಿ ರಸ್ತೆಯಲ್ಲಿ ಹೊಸ ವ್ಯವಸ್ಥೆ ಜಾರಿಬರಲಿದೆ.
ಅತಿ ವೇಗ, ಕುಡಿದು ಚಾಲನೆ ಮಾಡುವವರ ತಪಾಸಣೆ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಕಾರ್‌ನಲ್ಲಿ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದರು. ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಕಾರ್ಯಾರಂಭದಿಂದ ಸಂಚಾರಿ ಪೊಲೀಸರಿಂದ ಕಿರುಕುಳ ಆಗುತ್ತಿದೆ.
ಸಕಾರಣ ಇಲ್ಲದೆ ವಾಹನ ತಡೆಯುತ್ತಾರೆ. ದಂಡ ವಸೂಲು ಮಾಡುತ್ತಾರೆ… ಎಂಬಿತ್ಯಾದಿ ಸಾರ್ವಜನಿಕರ ಆಕ್ಷೇಪಣೆ ಕೇಳಿ ಬರುವುದಿಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನೇರವಾಗಿ ನೋಟಿಸ್ ಕಳಿಸಲಾಗುತ್ತದೆ. ಅವರು ನ್ಯಾಯಾಲಯದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು.
2003ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಎನ್‌ಫೋಸ್ ìಮೆಂಟ್ ಆಟೋಮೇಷನ್ ಸೆಂಟರ್ ಪ್ರಾರಂಭಿಸಲಾಯಿತು. ಬೆಂಗಳೂರಿನ ಥಿಮ್ಯಾಟಿಕ್ಸ್ ಐಟಿ ಸಲ್ಯೂಷನ್ ಸಂಸ್ಥೆಯವರು ಉಚಿತವಾಗಿ ಸಾಫ್ಟ್‌ವೇರ್ ಸಿದ್ದಪಡಿಸಿಕೊಟ್ಟಿದ್ದರು.
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವರ್ಷಕ್ಕೆ ದಾಖಲಾಗುವ 90 ಲಕ್ಷದಷ್ಟು ಕೇಸ್‌ಗಳಲ್ಲಿ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್‌ನಿಂದಲೇ 40-50 ಲಕ್ಷ ಕೇಸ್ ದಾಖಲಾಗುತ್ತವೆ. ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ದಾವಣಗೆರೆಯಲ್ಲೂ ಆಧುನಿಕ ತಂತ್ರಜ್ಞಾನದ ಅಳವಡಿಕೆ ಅಗತ್ಯವಾಗಿರುವುದ ಮನಗಂಡು ಟ್ರಾಫಿಕ್ ಎನ್‌ಫೋಸ್ ìಮೆಂಟ್ ಆಟೋಮೇಷನ್ ಸೆಂಟರ್ ಗೆ ಚಾಲನೆ ನೀಡಲಾಗಿದೆ. 15 ಡಿಜಿಟಲ್, 10 ಬಾಡಿ ಹಾಗೂ 2 ಹ್ಯಾಂಡಿ ಕ್ಯಾಮೆರಾ ನೀಡಲಾಗಿದೆ. 15 ಸರ್ವಲೈನ್ ಕ್ಯಾಮೆರಾ ಸಹ ಬಂದಿವೆ.
ಮುಂದಿನ ದಿನಗಳಲ್ಲಿ ಪಬ್ಲಿಕ್ ಐ… ವ್ಯವಸ್ಥೆ ಮಾಡುವ ಚಿಂತನೆ ಇದೆ. ಅಂದರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದನ್ನು ಸಾರ್ವಜನಿಕರೇ ಚಿತ್ರಿಸಿ, ಸೆಂಟರ್‌ಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ಸ್ಮಾರ್ಟ್‌ಸಿಟಿಗೆ ತಕ್ಕಂತೆ ದಾವಣಗೆರೆಯಲ್ಲಿ ಅಚ್ಚುಕಟ್ಟಾದ ಸಂಚಾರಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆಯ ಪ್ರಮುಖ ರಸ್ತೆ, ವೃತ್ತದಲ್ಲಿ ಪೊಲೀಸ್ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ 150 ಗೃಹರಕ್ಷಕ ದಳ ಸಿಬ್ಬಂದಿ ಸೇವೆ ಪಡೆಯಲಾಗುವುದು. ತಿರುವನಂತಪುರ ಮಾದರಿಯಲ್ಲಿ ದಾವಣಗೆರೆಯಲ್ಲೂ ಸಿ-ಡಾಟ್ ಸಂಚಾರಿ ವ್ಯವಸ್ಥೆ ಆಗಲಿದೆ. ಸಾರ್ವಜನಿಕರು ಸಹ ಬದಲಾವಣೆಗೆ ಅತಿ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದಾವಣಗೆರೆಯಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸುವ ಸಂಬಂಧ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆದು, ದರ ನಿಗದಿ ಮಾಡಿದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಹೆಚ್ಚುವರಿ ಅಧೀಕ್ಷಕಿ ಯಶೋಧಾ ಎಸ್. ವಂಟಿಗೋಡಿ, ಥಿಮ್ಯಾಟಿಕ್ಸ್ ಐಟಿ ಸಲ್ಯೂಷನ್‌ನ ಸುಮಂತ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.