Nyamathi ಗ್ರಾಮ ಪಂಚಾಯತ್ ಕಚೇರಿಯಲ್ಲೇ ಶವ ಇಟ್ಟರು!
ನ್ಯಾಮತಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಪ್ರತಿಭಟನೆ
Team Udayavani, Nov 27, 2023, 11:10 PM IST
ನ್ಯಾಮತಿ: ಅಂತ್ಯಸಂಸ್ಕಾರಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ವ್ಯಕ್ತಿ ಯೊಬ್ಬರ ಮೃತದೇಹವನ್ನು ಗ್ರಾ.ಪಂ. ಕಚೇರಿಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ರವಿವಾರ ರಾತ್ರಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವನಹಳ್ಳಿ ಗ್ರಾಮದ ದೊಡ್ಡಪ್ಪ (65) ರವಿವಾರ ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆ ಹೋದಾಗ ಬೇರೆ ಸಮುದಾ
ಯದವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ ಮೃತರ ಕುಟುಂಬಸ್ಥರು ಮೃತದೇಹವನ್ನು ಗ್ರಾ.ಪಂ. ಕಚೇರಿ ಒಳಗೆ ತಂದಿಟ್ಟರು. ಅಂತ್ಯಕ್ರಿಯೆಗೆ ಜಾಗ ನೀಡುವವರೆಗೂ ಮೃತದೇಹವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದ ಶಾಸಕ ಡಿ.ಜಿ. ಶಾಂತನಗೌಡ, ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬದವರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಬಳಿಕ ಎಸ್‌ಪಿ, ಸರ್ವೆ ಇಲಾಖೆ, ಕಂದಾಯ ಇಲಾಖೆ ಅಧಿ ಕಾರಿಗಳನ್ನು ಕರೆಸಿ ರುದ್ರಭೂಮಿಗೆ ಜಾಗ ಗುರುತಿಸಿ ಹದ್ದುಬಸ್ತು ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿ ತೆರಳಿದರು. ಅನಂತರ ಆಗಮಿಸಿದ ಡಿವೈಸ್‌ಪಿ ಪ್ರಶಾಂತ ಮುನ್ನೋಳಿ, ಗ್ರಾ.ಪಂ.ನಲ್ಲಿ ಮೃತದೇಹವನ್ನು ಇಡುವುದು ಕಾನೂನುಬಾಹಿರ ಎಂದು ಕುಟುಂಬ ಸ್ಥರು ಮತ್ತು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು. ಗ್ರಾಮಕ್ಕೆ ರುದ್ರಭೂಮಿ ಜಾಗ ಒದಗಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಕುಟುಂಬಿಕರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಭದ್ರಾ ನಾಲೆಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಯ ಶವಕ್ಕಾಗಿ ಮುಂದುವರಿದ ಶೋಧ
Davanagere: ಸಾಲಬಾಧೆ ತಾಳಲಾರದೆ ಆತ್ಮಹ*ತ್ಯೆಗೆ ಶರಣಾದ ರೈತ
Bribery Case: ದಾವಣಗೆರೆ ಪ್ರೊಫೆಸರ್ ಸೇರಿ 10 ಮಂದಿ ಸಿಬಿಐ ಬಲೆಗೆ
Davanagere: ನಾಲೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು
Davanagere: ಚನ್ನಗಿರಿ ಪ್ರಕರಣ ಆರೋಪಿ ಅಮ್ಜದ್ ಗೆ ಗಲ್ಲು ಶಿಕ್ಷೆ ಕೊಡಬೇಕು: ಮುತಾಲಿಕ್
MUST WATCH
ಹೊಸ ಸೇರ್ಪಡೆ
ನರೇಗಾ ಯೋಜನೆ ಸದ್ಬಳಕೆ: ಗೋವಿನಜೋಳ ಬೆಳೆಯುತ್ತಿದ್ದವರು ಕುರಿದೊಡ್ಡಿ ಕಟ್ಟಿದರು…
Game Changer : ಈ ದಿನ ಒಟಿಟಿಗೆ ಬರಲಿದೆ ಶಂಕರ್ – ರಾಮ್ಚರಣ್ರ ʼಗೇಮ್ ಚೇಂಜರ್ʼ
Mystery: ಒಂದೇ ರಾತ್ರಿಯಲ್ಲಿ ಸಾವಿರಾರು ಕುಟುಂಬಗಳು ಕಣ್ಮರೆಯಾದ ನಿಗೂಢ ಗ್ರಾಮ ಇದು…
Dandeli: ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ದ್ವಿಚಕ್ರ ವಾಹನ ಡಿಕ್ಕಿ; ಮಹಿಳೆಗೆ ಗಾಯ
Dandeli: ನಗರ ಸಭೆಯ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಮನೆಗಳ ತೆರವು