ಮಾ.3ರಂದು ಜಿಲೇಬಿ ಚಿತ್ರ ರಾಜ್ಯಾದ್ಯಂತ ತೆರೆಗೆ


Team Udayavani, Feb 27, 2017, 1:04 PM IST

dvg5.jpg

ದಾವಣಗೆರೆ: ನೊಂದ ಹೆಣ್ಣಿನ ಕಥೆಯ ಜೊತೆಗೆ ಹಾಸ್ಯ, ಸಸ್ಪೆನ್ಸ್‌, ಒಂದೊಳ್ಳೆಯ ಸಂದೇಶದೊಂದಿಗೆ ಭರಪೂರ ಮನೋರಂಜನೆಯ ಜಿಲೇಬಿ…ಚಿತ್ರ ದಾವಣಗೆರೆಯ ತ್ರಿಶೂಲ್‌ ಚಿತ್ರಮಂದಿರ ಒಳಗೊಂಡಂತೆ ಮಾ. 3 ರಂದು ರಾಜ್ಯದ್ಯಾಂತ 150-180 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಲಕ್ಕಿ ಶಂಕರ್‌ ತಿಳಿಸಿದ್ದಾರೆ.

ಮೂವರು ಬ್ಯಾಚುಲರ್ಸ್‌ ತಮ್ಮ ಕೊಠಡಿಗೆ ಯುವತಿಯೊಬ್ಬಳನ್ನು ಕರೆ ತಂಂದಾಗ 48 ಗಂಟೆಯಲ್ಲಿ ಏನೆಲ್ಲ ಸಮಸ್ಯೆ ಎದುರಾಗುತ್ತವೆ, ಅವರು ತಮ್ಮ ಚಪಲ ತೀರಿಸಿಕೊಳ್ಳಲು ಪರದಾಡುವ ಜೊತೆಗೆ ನೊಂದ ಮಹಿಳೆಯ ಕಥೆಯೂ ಇದೆ. ಚಿತ್ರದಲ್ಲಿ ಒಳ್ಳೆಯ ಸಂದೇಶ ಇದೆ. ಆದರೆ, ಅದನ್ನೇ ಮುಖ್ಯವಾಗಿಟ್ಟುಕೊಂಡಿಲ್ಲ.

ಪ್ರೇಕ್ಷಕರು ಎರಡೂವರೆ ಗಂಟೆ ಕಾಲ ಮನೋರಂಜನೆ ಪಡೆಯುವಂತೆ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಸ್ವತಃ ನಿರ್ಮಾಪಕರೂ ಆಗಿರುವ ಲಕ್ಕಿ ಶಂಕರ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಮ್ಮ ಶಿವಶಂಕರ್‌ μಲಂ ಫ್ಯಾಕ್ಟರಿ ಬ್ಯಾನರ್‌ನಡಿ ನೈಂಟಿ ಹೊಡಿ, ಪಲ್ಟಿ ಹೊಡಿ, ದೇವರಾಣೆ, ಸಿಗರೇಟು ಸೇದೆಡ… ನಂತರ ಜಿಲೇಬಿ ಹೊರ ಬರುತ್ತಿದೆ. ಜಿಲೇಬಿ ಹಾಟ್‌, ಸೀಟ್‌. ಪೂಜಾ ಗಾಂಧಿ ಈವರೆಗೆ ಕಾಣಿಸಿಕೊಳ್ಳದೇ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಲೈಮಾಕ್ಸ್‌ನಲ್ಲಿ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಒಂದು ಘಟನೆಯೊಂದಿಗೆ ಸಂಪೂರ್ಣ ಮನೋರಂಜನೆ ಚಿತ್ರ ನೀಡಲಾಗಿದೆ. ಜನರು ಚಿತ್ರ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಚಿತ್ರದ ನಾಯಕಿ ಪೂಜಾ ಗಾಂಧಿ ಮಾತನಾಡಿ, ಜಿಲೇಬಿ… ಒಳ್ಳೆಯ ಕಲರ್‌ ಫುಲ್‌ ಚಿತ್ರ. ದಂಡುಪಾಳ್ಯ, ಅಭಿನೇತ್ರಿ… ನಂತರ ಒಳ್ಳೆಯ ಕಥೆ ಹೊಂದಿರುವ ಚಿತ್ರದಲ್ಲಿ ನಟಿಸಿದ್ದೇನೆ.

ಚಿತ್ರದ ನೃತ್ಯ ಸಂಯೋಜಕ ಶ್ರೀನಿವಾಸ್‌ ಮಾಲೂರು ಕಥೆ ಹೇಳಿದ್ದಂತೆ ಅಭಿನಯಿಸಲು ಒಪ್ಪಿಕೊಂಡೆ. ತೀರಾ ಬೋಲ್ಡ್‌, ನೇರ ಮಾತಿನ ಹುಡುಗಿಯ ವಿಭಿನ್ನ ಪಾತ್ರ ಮಾಡಿದ್ದೇನೆ. ಚಿತ್ರದ ನಾಯಕರಾದ ನಾಗೇಂದ್ರ, ಯಶಸ್ಸು ಸೂರ್ಯ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು. 

ಮುಂದಿನ ದಿನಗಳಲ್ಲಿ ದಂಡುಪಾಳ್ಯ-2, ದಂಡುಪಾಳ್ಯ-3 ರಲ್ಲಿ ನಟಿಸುತ್ತಿದ್ದೇನೆ. ನಮ್ಮದೇ ಬ್ಯಾನರ್‌ನ ಚಿತ್ರದ ಚಿತೀಕರಣ ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತಿದೆ. 2 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ ಒಳ್ಳೆಯ ಕಥೆಯ ಕೊರತೆ ಎನ್ನುವುದು ನಿಜ. ಕೆಲ ಕಥೆ ಕೇಳಿದಾಗ ಇಂತಹ ಚಿತ್ರದಲ್ಲಿ ನಟಿಸಬೇಕಾ ಎಂಬ ಪ್ರಶ್ನೆ ಹಾಕಿಕೊಂಡಿದ್ದುಂಟು.

ಒಳ್ಳೆಯ ಸಂದೇಶದ ಕಥೆಯ ಚಿತ್ರದಲ್ಲಿ ನಟಿಸುವ ಇರಾದೆ ತಮ್ಮದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚಿತ್ರದ ನಾಯಕ ನಟರಾದ ನಾಗೇಂದ್ರ, ಯಶಸ್ಸು ಸೂರ್ಯ, ಸಂಗೀತ ನಿರ್ದೇಶಕ ಜೇಮ್ಸ್‌ ಆರ್ಕಿಟೆಕ್ಟ್, ಗೀತ ರಚನಕಾರ ತಿಪ್ಪೇಸ್ವಾಮಿ ಮಾತನಾಡಿದರು. ನೃತ್ಯ ಸಂಯೋಜಕ ಶ್ರೀನಿವಾಸ್‌ ಮಾಲೂರು, ಎಂ.ಆರ್‌. ಸೀನು ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

ಟಾಪ್ ನ್ಯೂಸ್

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Sullia: ಅಸ್ವಸ್ಥ ಮಹಿಳೆ ಸಾವು

Sullia: ಅಸ್ವಸ್ಥ ಮಹಿಳೆ ಸಾವು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್‌ ಹೆಡ್‌ ಓಪನಿಂಗ್‌?

Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್‌ ಹೆಡ್‌ ಓಪನಿಂಗ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.