ರೈತರ ಸೇವೆಗೆಂದೇ ಕೃಷಿ ಖಾತೆ ಪಡೆದೆ: ಪಾಟೀಲ
Team Udayavani, Jan 15, 2021, 2:27 PM IST
ಹರಿಹರ: ರಾಜ್ಯದ ರೈತರ ಸೇವೆ ಮಾಡುವ ಉದ್ದೇಶದಿಂದ ಸಿಎಂಗೆ ಮನವಿ ಮಾಡಿ ಕೃಷಿ ಖಾತೆ ಪಡೆದುಕೊಂಡಿರುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಗುರುವಾರ ಎರಡನೇ ವರ್ಷದ ಹರ ಜಾತ್ರೆ ಅಂಗವಾಗಿ ನಡೆದ ಭೂತಪಸ್ವಿ ಸಮಾವೇಶದಲ್ಲಿ “ಪಂಚವಾಣಿ’ ಮಾಸಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪಡೆದ ನಂತರ ರೈತರ ಏಳ್ಗೆಗೆ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ. ಬಹುತೇಕ ರೈತರ ಬದುಕು ಈಗಲೂ ಶೋಚನೀಯವಾಗಿಯೇ ಇದೆ. ಆದ್ದರಿಂದ ರೈತರ ಪ್ರಗತಿಗೆ ಪೂರಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಕೃಷಿ ಖಾತೆ ಪಡೆದುಕೊಂಡಿದ್ದೇನೆ. ರಾಜ್ಯಾದ್ಯಂತ ಸಂಚರಿಸಿ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ:ಮೂಲಸೌಕರ್ಯ ಅಭಿವೃದ್ಧಿಗೆ ಆಗ್ರಹ
ನೀರಾವರಿ ಸೌಲಭ್ಯ ಇರುವ ಮಂಡ್ಯ ಭಾಗದ ರೈತರು ಭತ್ತ ಮತ್ತು ಕಬ್ಬು ಬೆಳೆಯುತ್ತಾರೆ. ಈ ಬೆಳೆಗಳ ದರ ಇಳಿದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಆದರೆ ನೀರಿನ ಸೌಕರ್ಯವಿಲ್ಲದ ಕೋಲಾರದ ರೈತರು ಮಳೆ ಬಾರದಿದ್ದರೂ ಕೆಲ ಬೆಳೆಗಳ ದರ ಇಳಿದರೂ ಸಂಕಷ್ಟಕ್ಕೀಡಾಗುವುದಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಒಂದು ಅವಧಿಯಲ್ಲಿ 95 ಇದ್ದರೆ, ಆ ವರ್ಷ ಕೋಲಾರದಲ್ಲಿ ಕೇವಲ 5 ಇತ್ತು. ಕೋಲಾರದ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದೇ ಅವರ ಸ್ವಾವಲಂಬಿತನಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ಕೃಷಿಯ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ, ಮೀನು, ಮೊಲ ಸಾಕಾಣಿಕೆ, ಟೊಮ್ಯಾಟೋ ಕೆಚಪ್, ಕಬ್ಬಿನ ಜ್ಯೂಸ್, ಬೆಲ್ಲ, ಸಂಸ್ಕರಿಸಿದ ಗೋಮೂತ್ರ ತಯಾರಿಕೆಯಂತಹ ಚಟುವಟಿಕೆ ರೈತರ ಕೈ ಹಿಡಿಯುತ್ತದೆ. ಆಧುನಿಕತೆ, ತಂತ್ರಜ್ಞಾನದ ಬಳಕೆ ಮಾಡಿಕೊಂಡರೆ ಕಡಿಮೆ ಭೂಮಿಯಲ್ಲೂ ರೈತರು ಸಂತುಷ್ಟವಾಗಿ ಬದುಕು ನಡೆಸಲು ಸಾಧ್ಯ ಎಂದರು. ಅ ಧಿಕಾರಿಗಳ ಅಪಸ್ವರದ ನಡುವೆಯೂ ಬೆಳೆ ಸಮೀಕ್ಷೆಯನ್ನು ರೈತರಿಂದಲೇ ಮಾಡಿಸಲಾಯಿತು. 45 ದಿನಗಳ ಅವ ಧಿಯಲ್ಲಿ 46 ಲಕ್ಷ ರೈತರು ಬೆಳೆ ಸಮೀಕ್ಷೆ ನೋಂದಣಿ ಮಾಡಿಸಿದರು ಎಂದ ಸಚಿವರು, ಆತ್ಮ ನಿರ್ಭರ ಯೋಜನೆಯಡಿ ಸಂಕಷ್ಟಕ್ಕೀಡಾಗಿದ್ದ ಮೆಕ್ಕೆಜೋಳ ಬೆಳೆಗಾರರಿಗೆ 500 ಕೋಟಿ ರೂ. ಸಹಾಯಧನ ನೀಡಲಾಯಿತು ಎಂದು ತಿಳಿಸಿದರು.
ಸಮಾಜದ ಮುಖಂಡ ಬಸವರಾಜ್ ದಿಂಡೂರು ಮಾತನಾಡಿ, ಇಡೀ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಗೊಬ್ಬರದ ಅಭಾವವಾಗದಂತೆ ಕೇಂದ್ರ ಸರಕಾರ ಉತ್ತಮ ವ್ಯವಸ್ಥೆ ಮಾಡಿದೆ. ಆಧುನಿಕತೆ, ಸಾವಯವ ಪದ್ಧತಿ ಮಾತ್ರ ರೈತರಿಗೆ ಸಂಜೀವಿನಿಯಾಗಿದೆ ಎಂದು ತಿಳಿಸಿದರು. ಇಳಕಲ್ ಚಿತ್ತರಗಿ ಶ್ರೀ ವಿಜ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಶ್ರೀ ವಚನಾನಂದ ಸ್ವಾಮೀಜಿ, ಸಚಿವರಾದ ಜಗದೀಶ್ ಶೆಟ್ಟರ್, ಸಿ.ಸಿ. ಪಾಟೀಲ್, ಬಳ್ಳಾರಿ ಸಂಸದ ದೇವೇಂದ್ರಪ್ಪ, ನಶಾಸಕರಾದ ಅರವಿಂದ ಬೆಲ್ಲದ, ನೆಹರು ಓಲೆಕಾರ್, ವನಜಾಕ್ಷಿ ಬಿ.ಸಿ. ಪಾಟೀಲ್, ಬಾವಿ ಬೆಟ್ಟಪ್ಪ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.