ನಾಲೆ ನಿರ್ವಹಣಾ ಕೇಂದ್ರಕ್ಕೆ ಪವಿತ್ರ ರಾಮಯ್ಯ ಭೇಟಿ
Team Udayavani, Apr 17, 2021, 6:51 PM IST
ದಾವಣಗೆರೆ : ಭದ್ರಾ ಅಚ್ಚುಕಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ ಸಮಿತಿ) ಅಧ್ಯಕ್ಷೆ ಪವಿತ್ರ ರಾಮಯ್ಯ ಚನ್ನಗಿರಿ ತಾಲೂಕು ಸೇವಾನಗರ ಗ್ರಾಮದಲ್ಲಿರುವ ರೆಗ್ಯುಲೇಟರಿ-2 ನಾಲೆ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ನಾಲ್ಕು ತಿಂಗಳು ಹಗಲು ರಾತ್ರಿ, ಬಿಸಿಲು ಮಳೆ ಲೆಕ್ಕಿಸದೆ ಬೆವರು ಹರಿಸಿ ನಾಟಿ ಮಾಡಿದ ಭತ್ತ, ರಾಗಿ ಇನ್ನು ಮುಂತಾದ ಬಿತ್ತನೆ ಮಾಡಿ, ಬೆಳೆಗಳನ್ನು ಕಟಾವು ಮಾಡುವ ಸಮಯದಲ್ಲಿ ನೀರಿನ ಅವಶ್ಯಕತೆ ಬಹಳಷ್ಟು ಇರುತ್ತದೆ. ರೈತಾಪಿ ವರ್ಗದವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂದು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ದಿನವೇ ತೀರ್ಮಾನ ಮಾಡಿದ್ದೇನೆ. ನೀರು ಸರಿಯಾದ ಪ್ರಮಾಣದಲ್ಲಿ ತಲುಪಿಲ್ಲ ಎಂದು ಒಂದೇ ಒಂದು ಕರೆ ಬಂದರೆ ರಾತ್ರಿ ನಿದ್ದೆ ಮಾಡುವುದಿಲ್ಲ ಎಂದು ತಿಳಿಸಿದರು. ನೀರಿನ ಗೇಜ್ ಪ್ರತಿ ಬಾರಿ ಸುಮಾರು 13.2 ಅಡಿ ಇದ್ದರೆ ಮಾತ್ರ ಅಚ್ಚುಕಟ್ಟಿನ ಕೊನೆಯ ಭಾಗಗಳಿಗೆ ಸರಾಗವಾಗಿ ನೀರು ತಲುಪುತ್ತದೆ.
ಆದರೆ, ನೀರಿನ ಏರಿಳಿತದಿಂದ ಕಳೆದ ಎರಡು ದಿನಗಳಿಂದ ದಾವಣಗೆರೆ ಹಾಗೂ ಮಲೆಬೆನ್ನೂರು ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಗ್ರಾಮಗಳಿಗೆ ನೀರಿನ ನಿರ್ವಹಣೆಯಲ್ಲಿ ಕೊಂಚ ಮಟ್ಟಿನ ಏರಿಕೆಯಾಗಿ ತೊಂದರೆಯಾಗಿತ್ತು. ತಕ್ಷಣವೇ ಅ ಧಿಕಾರಿಗಳೊಂದಿಗೆ ದಾವಣಗೆರೆ ಹಾಗೂ ಮಲೇಬೆನ್ನೂರು ಭಾಗಗಳಿಗೆ ನಾಲೆಯ ಮೂಲಕ ಜಲಾಶಯದ ನೀರು ವಿಭಜಿಸುವ ರೆಗ್ಯುಲೇಟರಿ-2 ಕೇಂದ್ರಕ್ಕೆ ಭೇಟಿ ನೀಡಿ ಸದರಿ ಗೇಜ್ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ನಾನು ಅಧಿಕಾರದಲ್ಲಿ ಇರುವವರೆಗೂ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಲು ಅವಕಾಶ ಮಾಡಿಕೊಡುವುದಿಲ್ಲ, ಅಧಿಕಾರಿಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಮತ್ತೆ ಎಂದಿಗೂ ಗೇಜ್ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಡಿ.ಬಿ.ಹಳ್ಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ, ದಾವಣಗೆರೆ ವಿಭಾಗದ ಸಹಾಯಕ ಕಾರ್ಯಾಪಾಲಕ ಅಭಿಯಾಂತರ ರುದ್ರೇಶ್ ನಾಯ್ಕ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಸಿದ್ದಗಂಗಾ ಶ್ರೀ ರಾಷ್ಟ್ರಸಂತನೆಂದು ಘೋಷಿಸಿ: ಕೂಡಲಸಂಗಮ ಶ್ರೀ
Davanagere: ಮೀಸಲಾತಿಗಾಗಿ ಇನ್ನು ಮುಂದೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ: ಪಂಚಮಸಾಲಿ ಶ್ರೀ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
Davanagere: ಮಹಾನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಹೋರ್ಡಿಂಗ್ ತೆರವು