ಫ್ಲೋರೈಡ್‌ ನೀರಿಗೆ ನಲುಗಿದ ಜನ

ಹರಿಹರ-ಹೊನ್ನಾಳಿಯಲ್ಲಿ ಹೆಚ್ಚು ಜನರಿಗೆ ಫ್ಲೋರೋಸಿಸ್‌,ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ

Team Udayavani, Nov 23, 2020, 8:47 PM IST

ಫ್ಲೋರೈಡ್‌ ನೀರಿಗೆ ನಲುಗಿದ ಜನ

ಸಾಮದರ್ಭಿಕ ಚಿತ್ರ

ದಾವಣಗೆರೆ: ಫ್ಲೊರೈಡ್‌ಯುಕ್ತ ನೀರಿನ ಸೇವನೆಯಿಂದಾಗಿ ಜಿಲ್ಲೆಯಲ್ಲಿ ಹೆಚ್ಚು ಜನರು ಫ್ಲೋರೋಸಿಸ್‌ ಕಾಯಿಲೆಗೆ ತುತ್ತಾಗುತ್ತಿದ್ದು,ಕುಡಿಯುವ ನೀರಿನ ಶುದ್ಧತೆ ಬಗ್ಗೆ ಜನರಲ್ಲಿ ಆತಂಕ ಶುರುವಾಗಿದೆ.

ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ತಾಲೂಕುಗಳಲ್ಲಿ ಅತಿ ಹೆಚ್ಚು ಜನರಲ್ಲಿ ಫ್ಲೋರೋಸಿಸ್‌ಕಾಯಿಲೆ ಕಂಡು ಬಂದಿದೆ. ಹೊನ್ನಾಳಿ ತಾಲೂಕಿನಲ್ಲಿಬಾವಿ, ಕೈಪಂಪ್‌ಗ್ಳ ಮೂಲಕ ಪಡೆಯುವಫ್ಲೋರೈಡ್‌ಯುಕ್ತ ನೀರು ಸೇವಿಸಿ ಹಲವರಿಗೆ ಫ್ಲೋರೋಸಿಸ್‌ ಕಾಯಿಲೆ ಬಂದಿದೆ. ಫ್ಲೋರೈಡ್‌ಯುಕ್ತನೀರಿನಿಂದ ಆಗಬಹುದಾದ ದುಷ್ಪರಿಣಾಮಗಳಅರಿವಿಲ್ಲದೆ ಈ ಭಾಗದ ಜನರು ದಶಕಗಳಿಂದ ಇದೇನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಇಂತಹ ನೀರಿನಲ್ಲಿ ವಿಷಪೂರಿತ ರಾಸಾಯನಿಕವಸ್ತುಗಳು ಕರಗಿರುತ್ತವೆ. ಇಂಥ ನೀರುಸೇವಿಸಿದರೆ ದೇಹದ ಆರೋಗ್ಯ ಹದಗೆಟ್ಟು ನಾನಾ ದುಷ್ಪರಿಣಾಮಗಳಾಗಿ ಅನೇಕ ಕಾಯಿಲೆಗಳುಬರುತ್ತವೆ. ಅವುಗಳಲ್ಲಿ ಪ್ಲೋರೋಸಿಸ್‌ ಕಾಯಿಲೆಯೂ ಒಂದಾಗಿದೆ.

ಇನ್ನು ಹರಿಹರ ತಾಲೂಕಿನಲ್ಲಿ ಹೆಚ್ಚು ಜನರುತುಂಗಭದ್ರಾ ನೀರು ಸೇವನೆ ಮಾಡುತ್ತಾರೆ. ನದಿನೀರು ಫ್ಲೋರೈಡ್‌ ರಹಿತವಾಗಿದ್ದರೂ ಈ ಭಾಗದಲ್ಲಿ ರೈತರು ಭತ್ತದ ಕೃಷಿಯಲ್ಲಿ ಬಳಸುವ ರಸಗೊಬ್ಬರಹಾಗೂ ಕೀಟನಾಶಕಗಳ ಕಾರಣದಿಂದ ಮತ್ತು ಕೆಲ ಕಾರ್ಖಾನೆಗಳ ತ್ಯಾಜ್ಯ ನದಿಗೆ ಬಿಡುವುದರಿಂದನೀರು ವಿಷಪೂರಿತವಾಗಿ ಈ ಭಾಗದಹೆಚ್ಚು ಜನರಲ್ಲಿ ಫ್ಲೋರೋಸಿಸ್‌ ಕಾಯಿಲೆ ಕಂಡು ಬಂದಿದೆ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ.

261 ಜನರಲ್ಲಿ ಫ್ಲೋರೋಸಿಸ್‌: ಆರೋಗ್ಯಇಲಾಖೆಯು ರಾಷ್ಟ್ರೀಯ ಫ್ಲೋರೋಸಿಸ್‌ ತಡೆಹಾಗೂ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಫ್ಲೋರೋಸಿಸ್‌ ತಪಾಸಣಾ ಶಿಬಿರಗಳನ್ನು ನಡೆಸಿದಾಗ 261 ಮೂಳೆ ಫ್ಲೋರೋಸಿಸ್‌ಪೀಡಿತರು ಕಂಡು ಬಂದಿದ್ದು, ತಪಾಸಣೆ ಮಾಡಿಸಿಕೊಳ್ಳದೇ ಲೆಕ್ಕಕ್ಕೆ ಸಿಗದವರ ಸಂಖ್ಯೆ ಸಾವಿರಾರು ಇರಬಹುದು ಎಂದು ಅಂದಾಜಿಸಲಾಗಿದೆ. ಹರಿಹರ ತಾಲೂಕಿನಲ್ಲಿ 77 ಜನರಲ್ಲಿ, ಹೊನ್ನಾಳಿ ತಾಲೂಕಿನಲ್ಲಿ 74 ಜನರಲ್ಲಿ , ಚನ್ನಗಿರಿ ತಾಲೂಕಿನಲ್ಲಿ 52 ಜನರಲ್ಲಿ, ಜಗಳೂರು ತಾಲೂಕಿನ 25 ಜನರಲ್ಲಿ ಹಾಗೂ ದಾವಣಗೆರೆ ತಾಲೂಕಿನಲ್ಲಿ 33 ಜನರಲ್ಲಿ ಮೂಳೆ ಫ್ಲೋರೋಸಿಸ್‌ ಕಾಯಿಲೆ ಪತ್ತೆಯಾಗಿದೆ.

ಹರಿಹರ ತಾಲೂಕಿನ ಕೆ.ಬೇವಿನಹಳ್ಳಿಯಲ್ಲಿ 14, ಬೆಳ್ಳೂಡಿಯಲ್ಲಿ 34, ಉಕ್ಕಡಗಾತ್ರಿಯಲ್ಲಿ 24, ಬಿಳಸನೂರಿನಲ್ಲಿ ಐವರಲ್ಲಿ ಮೂಳೆ ಫ್ಲೋರೋಸಿಸ್‌ ಕಂಡು ಬಂದಿದೆ. ಹೊನ್ನಾಳಿ ತಾಲೂಕಿನ ಅರಭಗಟ್ಟದಲ್ಲಿ 44, ಗೋವಿನಕೋವಿಯಲ್ಲಿ 14,ಸಾಸ್ವೆಹಳ್ಳಿಯಲ್ಲಿ ನಾಲ್ಕು, ಕತ್ತಿಗೆಯಲ್ಲಿ 12 ಜನರಲ್ಲಿ ಮೂಳೆ ಫ್ಲೋರೋಸಿಸ್‌ ಇರುವುದು ಗೊತ್ತಾಗಿದೆ. ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯಲ್ಲಿ 10, ಕಗತೂರಿನಲ್ಲಿ 12, ಬಸವಾಪಟ್ಟಣದಲ್ಲಿ 19 ಹಾಗೂ ತಾವರೆಕೆರೆಯಲ್ಲಿ 11 ಜನರಲ್ಲಿ ಮೂಳೆ ಫ್ಲೋರೋಸಿಸ್‌ ಇರುವುದು ಖಚಿತಪಟ್ಟಿದೆ. ಜಗಳೂರು ತಾಲೂಕಿನ ಹಾಲೆಕಲ್‌ನಲ್ಲಿ ಏಳು, ಬಿದರಕೆರೆಯಲ್ಲಿ 12, ಕಲ್ಲೇದೇವರಪುರದಲ್ಲಿ ಐದು, ಸೊಕ್ಕೆಯಲ್ಲಿ ಒಂದುಹಾಗೂ ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಆರು, ಕಕ್ಕರಗೊಳ್ಳದಲ್ಲಿ 15, ಅಣಜಿಯಲ್ಲಿ ಐದು, ಆನಗೋಡಿನಲ್ಲಿ ಏಳು ಜನರಲ್ಲಿ ಫ್ಲೋರೋಸಿಸ್‌ ಕಂಡು ಬಂದಿದ್ದು, ಇವರಿಗೆಲ್ಲ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಪರಿಕರ, ವಿಟಮಿನ್‌-ಸಿ ಮತ್ತು ಜಿಂಕ್‌, ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ3 ಮಾತ್ರೆಗಳನ್ನು ವಿತರಿಸಲಾಗಿದೆ.

ಒಟ್ಟಾರೆ ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯದ 18 ಜಿಲ್ಲೆಗಳಲ್ಲಿ ದಾವಣಗೆರೆ ಜಿಲ್ಲೆಯೂ ಒಂದಾಗಿದ್ದು, ಜಿಲ್ಲೆಯಲ್ಲಿ ಎಲ್ಲೆಲ್ಲೆ ಫ್ಲೊರೈಡ್‌ ಹೆಚ್ಚಿರುವ ನೀರು ಜನರು ಕುಡಿಯುತ್ತಿದ್ದಾರೋ ಅಲ್ಲೆಲ್ಲ ಜಿಲ್ಲಾಡಳಿತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಜನರನ್ನು ಆರೋಗ್ಯ ಕಾಪಾಡಬೇಕಾಗಿದೆ.

ಏನಿದು ಫ್ಲೋರೋಸಿಸ್‌? : ಭೂಮಂಡಲದಲ್ಲಿ ನೀರು ನಾನಾ ಮೂಲಗಳಿಂದ ಅಂದರೆ ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆ,ಬಾವಿ, ನದಿ, ಸಮುದ್ರದಿಂದ ಲಭ್ಯವಿದೆ. ಹೀಗೆ ನಾನಾ ಮೂಲಗಳಿಂದ ಲಭ್ಯವಿರುವ ನೀರಿನಲ್ಲಿ ಫ್ಲೋರೈಡ್‌,ಆರ್ಸನಿಕ್‌, ನೈಟ್ರೇಟ್‌, ಕ್ಲೋರೈಡ್‌ಹಾಗೂ ಐರನ್‌ನಂಥ ನಾನಾ ರೀತಿಯ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ದಿನ ನಿತ್ಯ ಅವಶ್ಯಕವಿರುವ ನೀರಿನಲ್ಲಿ ಈ ರೀತಿಯ ರಾಸಾಯನಿಕ ಪದಾರ್ಥಗಳುಪ್ರತಿದಿನ ನಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿಅವಶ್ಯಕವಿರುತ್ತದೆ. ಇದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದರೆ ಕಾಯಿಲೆಗಳು ಬರುತ್ತವೆ. ಅದೇ ರೀತಿ ಕುಡಿಯುವ ನೀರಲ್ಲಿ ಫ್ಲೊರೈಡ್‌ ಅಂಶ ಹೆಚ್ಚಾದರೆ ಪ್ಲೋರೋಸಿಸ್‌ ಕಾಯಿಲೆ ಬರುತ್ತದೆ. ಇದರಿಂದ ದೇಹದ ಅನೇಕ ಭಾಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರಿನಿಂದಹೆಚ್ಚಾಗಿ ಈ ಕಾಯಿಲೆ ಬಂದರೂ, ಒಂದೇರೀತಿಯ ಕೆಲ ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ತ್ಯಾಜ್ಯ ಮಿಶ್ರಿತ ನೀರಿನಿಂದಲೂ ಫ್ಲೊರೈಡ್‌ ದೇಹದೊಳಗೆ ಪ್ರವೇಶಿಸುತ್ತದೆ. ಫ್ಲೋರೋಸಿಸ್‌ ಹಲ್ಲು, ಎಲುಬಿನ ಹಂದರ, ಕೀಲುಗಳಿಗೆ ಹಾನಿ ಹಾಗೂ ನೋವು ಉಂಟು ಮಾಡುತ್ತದೆ. ಬಾವಿಗಳು ಅಥವಾ ಕೈಪಂಪುಗಳ ನೀರು ಕುಡಿಯುವರು ಈ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಾಗಿದೆ.

ಶುದ್ಧ ನೀರು ಕುಡಿಯಿರಿ : ಹೆಚ್ಚು ಫ್ಲೋರೈಡ್‌ ಇರುವ ನೀರು ಮತ್ತು ಆಹಾರ ಸೇವನೆಯಿಂದ ಫ್ಲೋರೋಸಿಸ್‌ ಬರುತ್ತದೆ. ಫ್ಲೋರೋಸಿಸ್‌ ತಡೆಗಟ್ಟಲು ಫ್ಲೋರೈಡ್‌ ಅಂಶ ಕಡಿಮೆ ಇರುವ ಅಂದರೆ ಒಂದು ಪಿಪಿಎಂಗಿಂತ ಕಡಿಮೆ ಇರುವ ಶುದ್ಧ ಕುಡಿಯುವ ನೀರು ಹಾಗೂ ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೆಕಾಯಿ, ಕಾಳುಗಳು, ಹಸಿರು ತರಕಾರಿ, ಹಣ್ಣುಗಳು, ಸೀಬೆ, ನೆಲ್ಲಿಕಾಯಿ, ನಿಂಬೆ, ಟೊಮ್ಯಾಟೊ, ಕ್ಯಾರೆಟ್‌, ಕಿತ್ತಳೆ, ಮೋಸಂಬಿ, ಬೆಳ್ಳುಳ್ಳಿ,ಗೆಣಸು, ಮೀನು ಮೊಟ್ಟೆ ಮಾಂಸ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಬಳಸಬೇಕು. – ಡಾ.ಮೀನಾಕ್ಷಿ, ಆರ್‌ಸಿಎಚ್‌ ಅಧಿಕಾರಿ, ದಾವಣಗೆರೆ.

ಅರಿವು ಕಾರ್ಯಕ್ರಮ :  ಜಿಲ್ಲೆಯಲ್ಲಿ ಫ್ಲೋರೋಸಿಸ್‌ ಕಾಯಿಲೆ ಹೆಚ್ಚಾಗಿದ್ದು, ಶಾಲಾ ಕಾಲೇಜುಗಳಲ್ಲಿ ಅರಿವುಮೂಡಿಸುವ ಮೂಲಕ ಫ್ಲೋರೋಸಿಸ್‌ನಿಂದ ದೂರವಿರುವಂತೆಹಾಗೂ ಎಲ್ಲ ವಯೋಮಾನದವರಲ್ಲೂಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಹರಿಹರ ಭಾಗದಲ್ಲಿ ಕೃಷಿ ಇಲಾಖೆಯಿಂದಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕಹೆಚ್ಚು ಬಳಸದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.  -ಪದ್ಮಾ ಬಸವಂತಪ್ಪ, ಸಿಇಒ, ಜಿಪಂ

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

priyank-kharge

Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

priyank-kharge

Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

1-neemo

ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.