ಲಂಕೇಶ್ ನಾಡು ಕಂಡಂತಹ ಅದ್ಭುತ ಪ್ರತಿಭೆ
Team Udayavani, Mar 13, 2017, 1:17 PM IST
ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಕಂಡು ಬರುತ್ತಿರುವ ಅಧಿಕಾರ ಭೋಗ, ಹಣದ ಹಿಂದೆ ಬಿದ್ದಿರುವ ಮನಸ್ಸುಗಳಿಂದಾಗಿ ಸಾಮಾಜಿಕ ಚಿಂತನೆಯೇ ಕಾಣೆಯಾಗುತ್ತಿದೆ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದ್ದಾರೆ.
ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಿರಿಯ ಪತ್ರಕರ್ತ ಪಿ. ಲಂಕೇಶ್‌ರವರ 82ನೇ ಜನ್ಮ ದಿನ, ಗೌರಿ ಲಂಕೇಶ್ ಪತ್ರಿಕೆಯ 12ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಈಗ ಸಾಮಾಜಿಕ ವಾತಾವರಣ ಹಿತಕರವಾಗಿಲ್ಲ. ಅಧಿಕಾರ, ಹಣದ ಬೆನ್ನತ್ತಿರುವ ಮನೋಸ್ಥಿತಿಯಿಂದಾಗಿ ಒಳ್ಳೆಯ ಸಾಮಾಜಿಕ ಚಿಂತನೆಗಳೇ ಕಾಣೆಯಾಗುತ್ತಿರುವುದು ನಿರಾಶೆ ಮೂಡಿಸುತ್ತಿದೆ.
ಆದರೂ, ಸಮಾಜದ ಸಮಗ್ರ ಬದಲಾವಣೆಗೆ ತೀರಾ ಅಗತ್ಯವಾಗಿರುವ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದುತಿಳಿಸಿದರು. ಹಿರಿಯ ಪತ್ರಕರ್ತ ಪಿ. ಲಂಕೇಶ್ ನಾಡು ಕಂಡಂತಹ ಅಪ್ರತಿಮ, ಅದ್ಭುತ ಪ್ರತಿಭೆ. ಆಡು ಮುಟ್ಟದ ಸೊಪ್ಪಿಲ್ಲ… ಎನ್ನುವಂತೆ ಪಿ. ಲಂಕೇಶ್ ಕೆಲಸ ಮಾಡದೇ ಇರುವಂತಹ ಕ್ಷೇತ್ರವೇ ಇಲ್ಲ.
ಯಾವುದೇ ಕ್ಷೇತ್ರದಲ್ಲೇ ಆಗಲಿ ಅವರು ಮೈಗೂಡಿಸಿಕೊಂಡಿದ್ದ ಕಾಯಕಶ್ರದ್ಧೆ, ಹೋರಾಟದ ಛಲ, ಮನೋಭಾವ ಎಲ್ಲ ಕ್ಷೇತ್ರದಲ್ಲಿ ಸಾಧನೆಗೆಕಾರಣವಾಯಿತು. ಸಾಯುವ ಮುನ್ನಾ ದಿನ ಸಂಪಾದಕೀಯ ಬರೆದಿದ್ದು ಅವರಲ್ಲಿನ ಕಾಯಕಶ್ರದ್ಧೆಗೆ ಸಾಕ್ಷಿ ಎಂದು ತಿಳಿಸಿದರು.
ಕನಗವಳ್ಳಿಯಂತಹ ಕುಗ್ರಾಮದ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಲಂಕೇಶ್ ಬಡತನ ಹಾಗೂ ಅನಾರೋಗ್ಯದ ಜೊತೆಗೆ ಬದುಕಿನ ಹೋರಾಟ ನಡೆಸಿದವರು. ವೈದ್ಯರಾಗಬೇಕೆಂದುಕೊಂಡಿದ್ದ ಅವರು ಕೊನೆಗೆಆದುದ್ದು ಆಂಗ್ಲ ಉಪನ್ಯಾಸಕ. ಸಾಮಾಜಿಕ ಕಳಕಳಿ, ಜನ ಜಾಗೃತಿ ಹಿನ್ನೆಲೆಯಲ್ಲಿ ತಮ್ಮದೇ ಹೆಸರಿನ ವಾರಪತ್ರಿಕೆ ಪ್ರಾರಂಭಿಸುವ ಮೂಲಕ ಬಂಡಾಯದ ಧ್ವನಿ ಮೊಳಗಿಸಿದರು.
ತಮ್ಮ ಪತ್ರಿಕೆಯಲ್ಲಿ ಅನೇಕ ಬಂಡಾಯ ಬರಹಗಾರರಿಗೆ ಅವಕಾಶ ಕೊಡುವ ಮೂಲಕ ಬಂಡಾಯದ ನೆಲೆಯಲ್ಲಿ ನೈತಿಕ ನೆಲೆಗಟ್ಟು ಭದ್ರಪಡಿಸುವ ಪ್ರಯತ್ನ ಮಾಡಿದರು. ಅನೇಕಾನೇಕ ನಿಷ್ಟುರ ಲೇಖನಗಳ ಮೂಲಕ ತಪ್ಪನ್ನು ಸರಿಪಡಿಸುವ ಗಂಭೀರ ಪ್ರಯತ್ನ ನಡೆಸಿದರು.
ಮಠ-ಸ್ವಾಮೀಜಿಯವರೊಂದಿಗೆ ಸದಾ ಅಂತರ ಕಾಪಾಡಿಕೊಂಡೇ ಬಂದಿದ್ದ ಅವರು ತಮ್ಮ ಲೇಖನವನ್ನೇ ಪ್ರಕಟಿಸರಲಿಲ್ಲ ಎಂದು ತಿಳಿಸಿದರು. ಲಂಕೇಶ್ ಎಂದಿಗೂ ತಮ್ಮ ಪತ್ರಿಕೆಯನ್ನು ಇನ್ನೊಬ್ಬರ ತೇಜೋವಧೆ, ಮತ್ತೂಬ್ಬರ ಪರವಾಗಿ ಬಳಸಿಕೊಳ್ಳಲೇ ಇಲ್ಲ. ಬಂಡಾಯ ಪ್ರಜ್ಞೆಯ ವಿಚಾರಗಳ ಮೂಲಕ ವಾಸ್ತವಿಕ ಸತ್ಯ ತಿಳಿಸುವ ಕೆಲಸ ಮಾಡಿದರು.
ರಂಜನೆ, ಚಿಂತನೆ ಮತ್ತು ಎಚ್ಚರಿಕೆ ಅವರ ಲೇಖನಗಳಲ್ಲಿ ಹಾಸು ಹೊಕ್ಕಾಗಿತ್ತು ಎಂದು ತಿಳಿಸಿದರು. ಲಂಕೇಶ್ ಇದ್ದಿದ್ದರೆ… ವಿಷಯ ಕುರಿತು ಮಾತನಾಡಿದ ಲೇಖಕ ಪ್ರೊ| ರಾಜೇಂದ್ರ ಚೆನ್ನಿ, ಲಂಕೇಶ್ ಇದ್ದಿದ್ದರೆ ಇಂದಿನ ಸಾಮಾಜಿಕ ತಲ್ಲಣ, ದಿಗಮೆ ವಾತಾವರಣದಲ್ಲಿ ನಮ್ಮ ಶತ್ರುಗಳು ಯಾರು, ಏನೂ ಮಾಡಬೇಕು ಎಂಬ ಸ್ಪಷ್ಟ ಮಾರ್ಗದರ್ಶನ ನೀಡುತ್ತಿದ್ದರು.
ತಮ್ಮೆಲ್ಲರ ಪ್ರಕಾರ ಲಂಕೇಶ್ ಈಗಲೂ ನಮ್ಮೊಂದಿಗೆ ಇದ್ದಾರೆ ಎಂದು ಪ್ರತಿಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಗೌರಿ ಲಂಕೇಶ್ ಮಾತನಾಡಿ, ಮಣಿಪುರ ವಿಧಾನ ಸಭಾ ಚುನಾವಣೆಯಲ್ಲಿ 16 ವರ್ಷ ಹೋರಾಟ ನಡೆಸಿದ ಐರೋಮ್ ಶರ್ಮಿಳಾಗೆ 90 ಮತ ಬಂದಿರುವುದನ್ನು ನೋಡಿದರೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೇಗೆ ಒಪ್ಪಿಕೊಳ್ಳಲಿಕ್ಕಾಗುತ್ತದೆ.
ಮೋದಿ ಮೇನಿಯಾ ವಿರುದ್ಧ ಎಲ್ಲ ಪ್ರಗತಿಪರ ಸಂಘಟನೆಗಳು ಒಂದಾಗಬೇಕಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್‌ಕುರ್ಕಿ, ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ವಕೀಲ ಅನೀಸ್ ಪಾಷಾ ಮಾತನಾಡಿದರು. ಪ್ರೊ| ಬಿ.ವಿ. ವೀರಭದ್ರಪ್ಪ, ಬಿ.ಎಂ. ಹನುಮಂತಪ್ಪ, ಚಂದ್ರಶೇಖರ ತೋರಣಗಟ್ಟೆ, ಹೆಗ್ಗೆರೆ ರಂಗಪ್ಪ, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ ಇತರರು ಇದ್ದರು.
ಬಿ. ಚಂದ್ರೇಗೌಡ ಪ್ರಾರ್ಥಿಸಿದರು. ಐರಣಿ ಚಂದ್ರು ಜಾಗೃತಿ ಗೀತೆ ಹಾಡಿದರು. ಗಿರೀಶ್ ತಾಳಿಕಟ್ಟೆ ಸ್ವಾಗತಿಸಿದರು. ಜಿ.ಎಚ್. ರಾಜಶೇಖರ್ ಗುಂಡಗಟ್ಟಿ ನಿರೂಪಿಸಿದರು. ಪ್ರೊ| ಬಿ.ವಿ. ವೀರಭದ್ರಪ್ಪನವರ ನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.