ಉತ್ತಮ ಮಳೆ-ಬೆಳೆಗಾಗಿ ಅಮ್ಮನನ್ನು ಕಳಿಸುವ ಆಚರಣೆ
Team Udayavani, Jul 7, 2018, 3:31 PM IST
ಹರಪನಹಳ್ಳಿ: ರೋಗ-ರುಜಿನ ದೂರವಾಗಲು ಮತ್ತು ಉತ್ತಮ ಮಳೆ-ಬೆಳೆ ಬರಲಿ ಎಂದು ಹರಕೆ ಹೊತ್ತು ಪಟ್ಟಣದ ವಾಲ್ಮೀಕಿ ನಗರದ ಸಮಸ್ತ ದೈವಸ್ಥರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಅಮ್ಮನನ್ನು ಕಳಿಸುವ ಆಚರಣೆ ನಡೆಯಿತು.
ಪ್ರತಿ ವರ್ಷಕ್ಕೊಮ್ಮೆ ಕಾರು ಹುಣ್ಣಿಮೆಗೆ ಎಂಟು ದಿನ ಮುಂಚಿತವಾಗಿ ಈ ಆಚರಣೆ ನಡೆಯುತ್ತದೆ. ಕುಟುಂಬದಲ್ಲಿ ಯಾರಿಗೂ ಯಾವುದೇ ರೀತಿಯ ರೋಗ ರುಜಿನ ಬರಬಾರದು. ಮಕ್ಕಳಿಗೆ ದಡಾರ, ಸಿಡುಬು ಏಳಬಾರದು ಎಂಬ ಕಾರಣದಿಂದ ಹಿಂದಿ ನಿಂದಲೂ ಆಚರಣೆ ನಡೆಯುತ್ತ ಬಂದಿದೆ.
ಮನೆಯಲ್ಲಿ ಮಹಿಳೆಯರು ಮಡಿಯಿಂದ ತಮಗೆ ಅನುಕೂಲವಾಗುವ ಹೋಳಿಗೆ, ಕರಿಗಡಬು ತಯಾರಿಸಿ ಹಣ್ಣುಗಳು, ಬೇವಿನ ಸೊಪ್ಪು, ಪೂಜಾ ಸಾಮಗ್ರಿಯನ್ನು ಮೊರದಲ್ಲಿ ಇರಿಸುತ್ತಾರೆ. ಇದನ್ನು ಮನೆಯಲ್ಲಿ ಪೂಜಿಸಿ ನಂತರ ಬಡಾವಣೆಯ ರಸ್ತೆಯಲ್ಲಿ ಒಂದೆಡೆ ಇಂತಹ ನೂರಾರು ಮೊರಗಳನ್ನು ಇಡಲಾಗುತ್ತದೆ. ನಂತರ ಅಲ್ಲಿಯೇ ಪ್ರತಿಷ್ಠಾಪಿಸಲಾದ ಅಮ್ಮನನನ್ನು ಪೂಜಿಸಿ, ಮಂಗಳಾರತಿ ಬೆಳಗಿ, ಸಕಲ ವಾದ್ಯಗಳೊಂದಿಗೆ ಕುಟುಂಬದ ಪುರುಷ
ಸದಸ್ಯರು ಹರಪನಹಳ್ಳಿ ಪಟ್ಟಣದ ಕರಗಲ್ಲು ಬರುವವರೆಗೂ ಕೈಯಲ್ಲಿ ಈ ಮೊರಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಂತರ ಬನ್ನಿಮರದ ಕೆಳಗೆ ಮೊರಗಳಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿ ಮನೆಗೆ ವಾಪಸ್ಸಾಗುತ್ತಾರೆ.
ಕಮ್ಮಾರ ದೊಡ್ಡಹಾಲಪ್ಪ, ಮಂಡಕ್ಕಿ ಸುರೇಶ, ಶಿರಹಟ್ಟಿ ಬಸವರಾಜ, ನಿಟ್ಟೂರು ದೊಡ್ಡ ಹಾಲ್ಲಪ್ಪ, ಯಲ್ಲಜ್ಜಿ ಅಂಜಿನಪ್ಪ, ಮ್ಯಾಕಿ ನಾಗಪ್ಪ, ಎಂ.ಅಂಜಿನಪ್ಪ, ಮಂಜಾಚಾರಿ, ನಾಗಪ್ಪ, ದೇವಪ್ಪ, ಪುರಸಭೆ ಸದಸ್ಯರಾದ ಕೃಷ್ಣಪ್ಪ, ಮ್ಯಾಕಿ ದುರುಗಪ್ಪ ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.