ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ
Team Udayavani, Feb 18, 2019, 8:13 AM IST
ಹರಿಹರ: ಬೃಹತ್ ಕಟ್ಟಡ, ದುಬಾರಿ ಸಮವಸ್ತ್ರ ಮತ್ತಿತರೆ ಭೌತಿಕ ಅಂಶಗಳ ಬದಲು ಶೈಕ್ಷಣಿಕ ವಾತಾವರಣ, ಗುಣಾತ್ಮಕತೆ ಆಧರಿಸಿ ಪೋಷಕರು ತಮ್ಮ ಮಕ್ಕಳ ಶಾಲಾ-ಕಾಲೇಜು ಆಯ್ಕೆ ಮಾಡಬೇಕು ಎಂದು ನಿವೃತ್ತ ಶಿಕ್ಷಕ ಡಿ.ಶಿವಪ್ಪ ಹೇಳಿದರು.
ತಾಲೂಕಿನ ಭಾನುವಳ್ಳಿ ವಿನಾಯಕ ವಿದ್ಯಾ ಸಂಸ್ಥೆಯಲ್ಲಿ ನಡೆದ 15ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ವ್ಯಾಪಾರದ ಸರಕಾಗಿದ್ದು, ಬಂಡವಾಳ ಹೂಡಿ ಶಿಕ್ಷಣ ಸಂಸ್ಥೆ ಕಟ್ಟಲಾಗುತ್ತದೆ. ಪೋಷಕರು ದೊಡ್ಡ ಕಟ್ಟಡಗಳಿಗೆ ಮಾರುಹೋಗುತ್ತಿದ್ದಾರೆಯೆ ವಿನಃ ಸಂಸ್ಥೆಯ
ಗುಣಾತ್ಮಕತೆ ಪರಿಶೀಲಿಸುವ ಪ್ರಯತ್ನ ಮಾಡುವುದಿಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಸ್ಥಳೀಯವಾಗಿ ಉತ್ತಮ ಶಾಲೆಗಳಿರುತ್ತವೆ. ಅವುಗಳನ್ನು ಗುರುತಿಸಿ ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸಬೇಕು. ಕೇವಲ ಪ್ರತಿಷ್ಠೆಗಾಗಿ ಅಥವಾ ಆಕರ್ಷಣೆಗೆ ಮಾರುಳಾಗಿ ಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಬಾರದು ಎಂದರು.
ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಜೆ.ಆರ್. ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾದರೆ ವಿದ್ಯಾರ್ಥಿಗಳ ತಲಾವಾರು ಶುಲ್ಕವನ್ನು ಕಡಿತಗೊಳಿಸಬಹುದು. ಖಾಸಗಿ ಶಾಲೆಗಳು ಲಾಭ ಪಡೆಯುವ ಬದಲು ಬರುವ ಆದಾಯವನ್ನು ಶಾಲಾ ಅಭಿವೃದ್ಧಿ ಬಳಸಬೇಕು ಎಂದರು.
ಶಾಲೆಗಳ ನಡುವೆ ಸ್ಪರ್ಧೆ ಉತ್ತಮ ಫಲಿತಾಂಶ ಪಡೆಯುವಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧಿ ಸುವಲ್ಲಿ ಇರಬೇಕೇ ಹೊರತು ಮತ್ತೂಂದು ಶಾಲೆಯ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಆಮಿಷ ತೋರಿಸಿ ಸೆಳೆಯುವುದು ಅನೈತಿಕ ಮಾರ್ಗವಾಗುತ್ತದೆ ಎಂದರು.
ತಾಪಂ ಸದಸ್ಯೆ ವಿಶಾಲಕ್ಷಮ್ಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಬಿ.ಎಚ್. ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಗುತ್ಯಪ್ಪ ಜೋಗಪ್ಪನವರ್, ಗ್ರಾಪಂ ಉಪಾಧ್ಯಕ್ಷೆ ರಿಯಾಜ್ ಉನ್ನಿಸಾ, ರಾಮಪ್ಪ ಜೋಗಪ್ಪನವರ್, ಗೌರಮ್ಮ, ಆಡಳಿತಾಧಿಕಾರಿ ವೆಂಕಟೇಶ್ ಇತರರಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.