![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-415x249.jpg)
ಸುಸೂತ್ರ ಚುನಾವಣೆಗೆ ಸಕಲ ಸಿದ್ಧತೆ
Team Udayavani, May 11, 2018, 3:05 PM IST
![yad-3.jpg](https://www.udayavani.com/wp-content/uploads/2018/05/11/yad-3-620x224.jpg)
ದಾವಣಗೆರೆ: ಶನಿವಾರ (ನಾಳೆ) ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಪಾರದರ್ಶಿಕ, ನ್ಯಾಯಸಮ್ಮತ, ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ದಾವಣಗೆರೆ ಉತ್ತರ, ದಕ್ಷಿಣ ಒಳಗೊಂಡಂತೆ ಎಂಟು ಕ್ಷೇತ್ರದಲ್ಲಿ 8,24,774 ಪುರುಷರು, 8,08,058 ಮಹಿಳೆಯರು, 117 ಇತರರು ಸೇರಿ 16,32,949 ಮತದಾರರಿದ್ದಾರೆ. ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ 15 ಸಖೀ ಪಿಂಕ್ ಮತಗಟ್ಟೆ ಸೇರಿ 1,946 ಮತಗಟ್ಟೆ ಸ್ಥಾಪಿಸಲಾಗಿದೆ.
ಮೇ 12ರ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಚುನಾವಣಾ ಪ್ರಕ್ರಿಯೆಗೆ 11,495 ವಿವಿಧ ಹಂತದ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಸಿಬ್ಬಂದಿಗಾಗಿ 400ಕ್ಕೂ ಹೆಚ್ಚು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮತದಾನ ಹಿನ್ನೆಲೆಯಲ್ಲಿ ಈಗಾಗಲೇ ಆಯೋಗದಿಂದ ವೋಟರ್ ಸ್ಲಿಪ್ ವಿತರಿಸಲಾಗಿದೆ. ಮತದಾರರು ತಮ್ಮ ಭಾವಚಿತ್ರ ಇರುವ ಗುರುತಿನ ಕಾರ್ಡ್ ತೋರಿಸಿ ಮತ ಚಲಾಯಿಸಬಹುದು. ಒಂದೊಮ್ಮೆ ಭಾವಚಿತ್ರ ಇರುವ ಗುರುತಿನ ಕಾರ್ಡ್ ಇಲ್ಲದಿದ್ದಲ್ಲಿ ಆಯೋಗದಿಂದ ನೀಡಿರುವ ವೋಟರ್ ಸ್ಲಿಪ್, ಚಾಲನಾ ಪರವಾನಿಗೆ ಪತ್ರ(ಡಿಎಲ್),
ಭಾವಚಿತ್ರ ಇರುವ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಒಳಗೊಂಡಂತೆ ಆಯೋಗ ಸೂಚಿಸಿರುವ 12 ದಾಖಲೆಯಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಬಹುದು ಎಂದು ತಿಳಿಸಿದರು.
ಭದ್ರತಾ ಸಿಬ್ಬಂದಿ ಒಳಗೊಂಡಂತೆ ಮಹಿಳಾ ಅಧಿಕಾರಿಗಳೇ ಕಾರ್ಯ ನಿರ್ವಹಿಸುವ 15 ಸಖೀ ಪಿಂಕ್ ಮತಗಟ್ಟೆಯಲ್ಲಿ 105 ಸಿಬ್ಬಂದಿ ನಿಯೋಜಿಸಲಾಗಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 14,511 ವಿಕಲ ಚೇತನರು ಶೇ. 100 ರಷ್ಟು ಮತದಾನ ಮಾಡಲು ಅನುಕೂಲ ಆಗುವಂತೆ 611 ಮತಗಟ್ಟೆಗಳಿಗೆ ವೀಲ್‌ಚೇರ್ ನೀಡಲಾಗಿದೆ. 126 ಜನರು ಸ್ವಯಂ ಸೇವಕರು ವಿಕಲ ಚೇತನರ ಮತದಾನದ ನೆರವಿಗೆ ಮುಂದಾಗಿದ್ದಾರೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ಚುನಾವಣೆ ನಡೆಯುವ 48 ಗಂಟೆ ಮುನ್ನ ಜಾರಿ ಮಾಡಲಾಗಿರುವ ನಿಷೇಧಾಜ್ಞೆ ಮೇ 13ರ ಸಂಜೆ 6 ರವರೆಗೆ ಜಾರಿಯಲ್ಲಿರುತ್ತದೆ. ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರು ಮತಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತಗಟ್ಟೆ ಏಜೆಂಟರು ಮತಗಟ್ಟೆಯ 200 ಮೀಟರ್ ಹೊರಗೆ ವೋಟರ್ ಸ್ಲಿಪ್ ನೀಡಬಹುದು. ಆದರೆ, ಯಾವ ಕಾರಣಕ್ಕೂ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಿನಾಯಕ ನಗರ ಎ ಬ್ಲಾಕ್ ಇತರೆಡೆ ಮತದಾನದ ಬಹಿಷ್ಕಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮತದಾನ ಬಹಿಷ್ಕಾರದಿಂದ ಅನುಕೂಲ ಆಗುವುದಿಲ್ಲ. ತಮಗೆ ಯಾರು
ಸೂಕ್ತವೋ ಅವರಿಗೆ ಮತ ನೀಡಬೇಕು. ಇಲ್ಲದೇ ಹೋದಲ್ಲಿ ನೋಟಾ ಚಲಾಯಿಸಬಹುದು. ಆದರೆ, ಸಂಪೂರ್ಣವಾಗಿ ಮತದಾನದಿಂದಲೇ ದೂರ ಉಳಿಯುವುದು ಒಳ್ಳೆಯದಲ್ಲ ಎಂದು ಪ್ರತಿಕ್ರಿಯಿಸಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಚುನಾವಣಾ ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಮೊಬೈಲ್ ತರಲೇಬೇಡಿ
ಮತದಾನದ ದಿನದಂದು ಯಾವುದೇ ಕಾರಣಕ್ಕೂ ಮತಗಟ್ಟೆಯ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಲಿಕ್ಕೆ ಅವಕಾಶವೇ ಇಲ್ಲ. ಮತಗಟ್ಟೆಯ ಹೊರಗೆ ಇಡಬೇಕು. ಮೊಬೈಲ್ ತರದೇ ಇರುವುದೇ ಸೂಕ್ತ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.
ಮೂವರು ಅಮಾನತು
ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 273 ವಿದ್ಯುನ್ಮಾನ ಮತಯಂತ್ರಗಳ ಪಿಂಕ್ ಪಟ್ಟಿ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿ ಅಮಾನತು ಆಗಿದ್ದಾರೆ. ಚುನಾವಣಾಧಿಕಾರಿ ವರ್ಗಾವಣೆ ಆಗಿದ್ದಾರೆ. ಇತರೆ ಕರ್ತವ್ಯ ಲೋಪಕ್ಕೆ ಇತರೆ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
373 ಪ್ರಕರಣ ದಾಖಲು
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 373 ಪ್ರಕರಣ ದಾಖಲಾಗಿವೆ. ಫ್ಲೆಯಿಂಗ್ ಸ್ಕಾ Ìಡ್ 19, ಎಸ್‌ಐಟಿ 1. ಅಬಕಾರಿ ಮತ್ತು ಪೊಲೀಸರು 353 ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷ, ಅಭ್ಯರ್ಥಿಗಳ ವಿರುದ್ಧ 9 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 56.4 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. 8,39,510 ರೂ. ಖಜಾನೆಯಲ್ಲಿರಿಸಲಾಗಿದೆ. ಅಬಕಾರಿ ಇಲಾಖೆ ಸಿಬ್ಬಂದಿ 63.37 ಲಕ್ಷ ಮೌಲ್ಯದ 15,918 ಲೀಟರ್, ಪೊಲೀಸರು 2.10 ಲಕ್ಷ ಮೌಲ್ಯದ 694 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದು ರಮೇಶ್ ತಿಳಿಸಿದರು
590 ಸೂಕ್ಷ್ಮ ಮತಗಟ್ಟೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 1,946 ಮತಗಟ್ಟೆಯಲ್ಲಿ 590 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಪೊಲೀಸ್, ಗೃಹರಕ್ಷಕ ದಳ, ಅರೆ ಸೇನಾಪಡೆ ಬಳಸಿಕೊಂಡು ಎಲ್ಲ ಕಡೆ ಜನರು ನಿರ್ಭೀತಿಯಿಂದ ಮತದಾನ ಮಾಡುವಂತಹ ವಾತಾವರಣ ನಿರ್ಮಿಸಲಾಗುವುದು. ಒಟ್ಟಾರೆಯಾಗಿ ಶಾಂತಿಯುತ ಮತದಾನ ಪ್ರಕ್ರಿಯೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ಕಡೆಯಿಂದ ದೂರು ದಾಖಲಾಗಿದೆ.
ಕೆಲವರ ವಿರುದ್ಧ ಸೆಕ್ಷನ್ 107 ಪ್ರಕರಣ ದಾಖಲಿಸಲಾಗಿದೆ. 154 ಸೆಕ್ಷನ್ ಅನ್ವಯ ಹೇಳಿಕೆ ಪಡೆದ ನಂತರ ಮುಂದಿನ
ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ತಿಳಿಸಿದರು.
ಟಾಪ್ ನ್ಯೂಸ್
![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ](https://www.udayavani.com/wp-content/uploads/2024/12/chennagiri-150x87.jpg)
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
![7-dvg](https://www.udayavani.com/wp-content/uploads/2024/12/7-dvg-150x90.jpg)
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
![byndoor](https://www.udayavani.com/wp-content/uploads/2024/12/byndoor-6-150x88.jpg)
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
![ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ](https://www.udayavani.com/wp-content/uploads/2024/12/davanagere-150x82.jpg)
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
![1—-kumr-renuka](https://www.udayavani.com/wp-content/uploads/2024/12/1-kumr-renuka-150x80.jpg)
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-150x90.jpg)
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
![ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್](https://www.udayavani.com/wp-content/uploads/2024/12/lalu-1-150x84.jpg)
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
![Is Ashwin made a hasty decision: Is this how much Kohli is worth in the dressing room?](https://www.udayavani.com/wp-content/uploads/2024/12/ashwin-kogli-150x87.jpg)
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
![1-a-ct](https://www.udayavani.com/wp-content/uploads/2024/12/1-a-ct-150x89.jpg)
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
![10](https://www.udayavani.com/wp-content/uploads/2024/12/10-22-150x80.jpg)
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.