ಮಕ್ಕಳ ಲಸಿಕಾಕರಣಕ್ಕೆ ಸಿದ್ಧತೆ ಜೋರು
Team Udayavani, Jan 3, 2022, 9:18 PM IST
ದಾವಣಗೆರೆ: ಇಂದಿನಿಂದ (ಜ. 3) ಪ್ರಾರಂಭ ವಾಗಲಿರುವ 15ರಿಂದ 18 ವರ್ಷದೊಳಗಿನವರ ಲಸಿಕಾಕರಣಕ್ಕೆ ಜಿಲ್ಲಾಡಳಿತ, ಆರೋಗ್ಯ, ಶಿಕ್ಷಣ ಇತರೆ ಇಲಾಖೆ ಸರ್ವ ಸನ್ನದ್ಧವಾಗಿವೆ. ಜಿಲ್ಲೆಯಲ್ಲಿನ 500ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿನ ಒಟ್ಟು 88,843 ವಿದ್ಯಾರ್ಥಿಗಳಿಗೆ ಕೊವ್ಯಾಕ್ಸಿನ್ ನೀಡಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
3-4 ದಿನಗಳಲ್ಲಿ ಶೇ.100 ರಷ್ಟು ಗುರಿ ತಲುಪುವ ಯೋಜನೆ ರೂಪುಗೊಂಡಿದೆ. ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಕೊರೊನಾದ ಮೊದಲ ಮತ್ತು ಎರಡನೇ ಅಲೆಗೆ ಸಿಲುಕಿ ನಲುಗಿ ಹೋಗಿತ್ತು. ಮಕ್ಕಳ ಮೇಲೂ ಕೊರೊನಾ ದಾಳಿ ಮಾಡಿತ್ತು. ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 5 ವರ್ಷದೊಳಗಿನ ಒಟ್ಟು 325, 5ರಿಂದ 11 ವರ್ಷದೊಳಗಿನ 527 ಮತ್ತು 12 ರಿಂದ 18 ವರ್ಷದೊಳಗಿನ 1023 ಜನರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು.
ಇವರಲ್ಲಿ ಒಬ್ಬರು ಮಾತ್ರ ಕೊರೊನಾಕ್ಕೆ ಬಲಿಯಾಗಿದ್ದರು. ಎರಡನೇ ಅಲೆಯಲ್ಲಿ 5 ವರ್ಷದೊಳಗಿನ 359, 5ರಿಂದ 11 ವರ್ಷದೊಳಗಿನ 782, 12 ರಿಂದ 18 ವರ್ಷದ ಒಳಗಿನ 1518 ಮಕ್ಕಳು ಕೊರೊನಾಕ್ಕೆ ಒಳಗಾಗಿದ್ದರು. ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಸಮಾಧಾನ ವಿಷಯ. ಸಂಭಾವ್ಯ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಾಗಿ ದಾಳಿ ನಡೆಸಲಿದೆ ಎಂಬುದಾಗಿ ತಜ್ಞರು ಪದೆ ಪದೇ ನೀಡುತ್ತಿರುವ ಎಚ್ಚರಿಕೆ ಸಂದರ್ಭದಲ್ಲೇ ಕೇಂದ್ರ, ರಾಜ್ಯ ಸರ್ಕಾರ 15ರಿಂದ 18 ವರ್ಷದೊಳಗಿನವರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳು ಮಾತ್ರವಲ್ಲ, ಪೋಷಕರಲ್ಲೂ ಸಂತಸಕ್ಕೆ ಕಾರಣವಾಗಿದೆ.
ಅತಿ ಮುಖ್ಯವಾದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸಬಹುದು ಎಂಬ ಸಮಾಧಾನ ವಿದ್ಯಾರ್ಥಿ ಹಾಗೂ ಪೋಷಕ ವಲಯದಲ್ಲಿದೆ. ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ 500 ಶಾಲಾ, ಕಾಲೇಜುಗಳಲ್ಲಿ 88,843 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿ ಇದೆ. 26,354 ಎಸ್ಸೆಸ್ಸೆಲ್ಸಿ ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ 25,845 ವಿದ್ಯಾರ್ಥಿಗಳು ಇದ್ದಾರೆ. 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ 9ನೇ ತರಗತಿಯ 25,845 ಮಕ್ಕಳಲ್ಲಿ ಶೇ. 20ರಷ್ಟು ವಿದ್ಯಾರ್ಥಿಗಳು15 ವರ್ಷ ದಾಟಿದವರು,2007ಕ್ಕಿಂತ ಮೊದಲು ಜನಿಸಿದವರು ದೊರೆಯಬಹುದು. ಎಸ್ಸೆಸ್ಸೆಲ್ಸಿಯ 26,345 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಒಪ್ಪಿಗೆ ಪತ್ರ, ಆಧಾರ್ ಕಾರ್ಡ್, ಮೊಬೈಲ್ ಕಡ್ಡಾಯವಾಗಿ ತರುವಂತೆ ಸೂಚನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಐದು ತಾಲೂಕುಗಳಲ್ಲಿ 16,450 ಬಾಲಕರು, 20,194 ಬಾಲಕಿಯರು ಒಳಗೊಂಡಂತೆ36,644ಪಿಯುವಿದ್ಯಾರ್ಥಿಗಳಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 10,641 ಬಾಲಕರು, 12,125 ಬಾಲಕಿಯರು ಸೇರಿ 22,766 ವಿದ್ಯಾರ್ಥಿಗಳಿದ್ದಾರೆ. ನ್ಯಾಮತಿಯಲ್ಲಿ ಅತಿ ಕಡಿಮೆ 203 ಬಾಲಕರು, 478 ಬಾಲಕಿಯರು ಸೇರಿ 681 ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಪಿಯು ಪ್ರಮುಖ ಘಟ್ಟವಾಗಿದ್ದು ಮುಂದಿನ ಶಿಕ್ಷಣ ಮುಂದುವರೆಸಬೇಕಾದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯಬಹುದು. ಪ್ರೌಢಶಾಲಾ ಹಂತದಲ್ಲಿನ ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರಲ್ಲೂ ಲಸಿಕೆ ಬಗ್ಗೆ ಇರುವ ಭಯದ ಕಾರಣ ಕೊಂಚ ಹಿಂಜರಿಯಬಹುದು. ಲಸಿಕೆ ಪಡೆಯಬೇಕಾದ ಅಗತ್ಯತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಮನವೊಲಿಸುವ ಮೂಲಕ ಗುರಿ ತಲುಪುವ ನಿಟ್ಟಿನಲ್ಲಿ ಇಲಾಖೆಗಳು ಪ್ರಯತ್ನ ನಡೆಸಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.