ಜಯದೇವ ಶ್ರೀ ಸ್ಮರಣೋತ್ಸವಕ್ಕೆ ಸಿದ್ಧತೆ
Team Udayavani, Mar 28, 2017, 1:11 PM IST
ದಾವಣಗೆರೆ: ನಗರದ ಶಿವಯೋಗಾಶ್ರಮದಲ್ಲಿ ನಡೆಯಲಿರುವ ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 60ನೇ ಸ್ಮರಣೋತ್ಸವದ ಸಿದ್ದತೆ ಭರದಿಂದ ಸಾಗಿದ್ದು, ಸ್ಮರಣೋತ್ಸವ ಅಂಗವಾಗಿ ಈಗಾಗಲೇ ಶ್ರೀಜಯದೇವ ಲೀಲೆ ಪ್ರವಚನ ಹಾಗೂ ಜನಜಾಗೃತಿ ಪಾದಯಾತ್ರೆ ಆರಂಭವಾಗಿದೆ ಎಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಸ್ಮರಣೋತ್ಸವದ ಮಾಹಿತಿ ನೀಡಿದ ಅವರು, 30ರಂದು ಸಂಜೆ 7ಕ್ಕೆ ಸುಗಮ ಸಂಗೀತ, 31ರಂದು ಬೆಳಿಗ್ಗೆ 7-15ಕ್ಕೆ ಬಸವತತ್ವ ಧ್ವಜಾರೋಹಣ, 7-30ಕ್ಕೆ ಸಹಜ ಶಿವಯೋಗ, 10-30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಸಂಜೆ 6-30ಕ್ಕೆ ಮಹಾನ್ ಸಾಧಕರ ಸಮಾವೇಶ ನಡೆಯಲಿದ್ದು, ಇದೇ ವೇಳೆ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಜಯದೇವ ಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಮಾ.1ರಂದು ಬೆಳಿಗ್ಗೆ 7-30ಕ್ಕೆ ಸಹಜ ಶಿವಯೋಗ, 9-45ಕ್ಕೆ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ, ಸಂಜೆ 6-30ಕ್ಕೆ ಚಿಂತನ-ಮಂಥನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಜರುಗಲಿದೆ. 2ರಂದು ಬೆಳಿಗ್ಗೆ 7-30ಕ್ಕೆ ಸಹಜ ಶಿವಯೋಗ, 9-30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗು ಔಷಧಿ ವಿತರಣೆ, ಸಂಜೆ 6-30ಕ್ಕೆ ಚಿಂತನ-ಮಂಥನ ಏರ್ಪಡಿಸಲಾಗಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲಇ ಜಮುರಾ ನಾಟಕೋತ್ಸವ ಮಾ. 3 ಹಾಗೂ 4ರಂದು ಏರ್ಪಡಿಸಲಾಗಿದೆ ಎಂದು ಅವರು ಸ್ಮರಣೋತ್ಸವದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಎಂ.ಜಯಕುಮಾರ್, ಹಾಸಭಾವಿ ಕರಿಬಸಪ್ಪ, ಪಲ್ಲಾಗಟ್ಟೆ ಕೊಟ್ರೇಶ್, ವೀರೇಂದ್ರ, ಬೆಳ್ಳೊಡಿ ಮಂಜುನಾಥ್, ಸಂಗಪ್ಪ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.