ಮಸಿ ಬಳಿದವರನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಪ್ರತಿಭಟನೆ


Team Udayavani, Mar 13, 2017, 1:21 PM IST

dvg5.jpg

ದಾವಣಗೆರೆ: ವಿವಾದಿತ ಲೇಖಕ ಯೋಗೇಶ್‌ ಮಾಸ್ಟರ್‌ಗೆ ಮಸಿ ಬಳಿದು ಮಾರಣಾಂತಿಕ ಹಲ್ಲೆಮಾಡಿದವರು ಸಂಘ ಪರಿವಾರದವರು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿ ಪರ ಸಂಘಟನೆ, ಎಡಪಕ್ಷಗಳ ಪ್ರತಿನಿಧಿಗಳು ಮೆರವಣಿಗೆ ನಡೆಸಿದರು. 

ವಿದ್ಯಾನಗರ ರಸ್ತೆಯ ಬಳಿಯ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್‌- 82 ಕಾರ್ಯಕ್ರಮದ ಸ್ಥಳದಿಂದ ಮೆರವಣಿಗೆಆರಂಭಿಸಿದ ನೂರಾರು ಪ್ರತಿನಿಧಿಗಳು ಗುಂಡಿ ವೃತ್ತ, ವಿದ್ಯಾರ್ಥಿ ಭವನ, ಅಂಭೇಡ್ಕರ್‌ ವೃತ್ತದ ಮೂಲಕ ಜಯದೇವ ವೃತ್ತ ತಲುಪಿದರು. 

ಜಯದೇವ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ನಂತರ ಬಡಾವಣೆ ಠಾಣೆಗೆ ತೆರಳಿ, ದೂರು ಸಲ್ಲಿಸಿದರು. ದೂರು ಸಲ್ಲಿಸುವ ಮುನ್ನ ಮಾತನಾಡಿದ ಪತ್ರಕರ್ತೆ ಗೌರಿ ಲಂಕೇಶ್‌, ದಾವಣಗೆರೆ ಒಂದು ಕ್ರಾಂತಿ ಭೂಮಿ. ಇಲ್ಲಿ ಪ್ರಜ್ಞಾವಂತರು, ಸಾಹಿತಿಗಳು, ಪ್ರಗತಿಪರರು ಇದ್ದಾರೆ. 

ಇದೇ ಕಾರಣಕ್ಕೆ ನಾವು ಇಲ್ಲಿ ಲಂಕೇಶ್‌ರ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಾಡಿನ ಹೆಸರಾಂತ ಸ್ವಾಮೀಜಿಗಳಾದ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಅಂತಹ ಕಾರ್ಯಕ್ರಮವನ್ನು ಕೆಡಿಸಬೇಕು ಎಂಬ ಉದ್ದೇಶದಿಂದ ಇಂತಹ ದಾಳಿಮಾಡಲಾಗಿದೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ಇಂತಹಕಿಡಿಗೇಡಿಗಳನ್ನು ಬಿಡಬಾರದು. ನಾವು  ಇಂತಹ ಕೃತ್ಯಗಳಿಗೆ ಹೆದರುವುದಿಲ್ಲ. ಆದರೆ, ಕಾನೂನು, ಸುವ್ಯವಸ್ಥೆಗೆ ಬೆಲೆ ಕೊಡುತ್ತೇವೆ. ಅದೇ ಕಾರಣಕ್ಕೆ ಶಾಂತಿಯುತ ಮೆರವಣಿಗೆ ಮಾಡಿ, ದೂರು ಸಲ್ಲಿಸಿದ್ದೇವೆ.ಪೊಲೀಸರು ಯಾವುದೇ ಕಾರಣಕ್ಕೂ ಇಂತಹ ಕಿಡಿಗೇಡಿಗಳನ್ನು ಬಿಡಬಾರದು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

ಸಿಪಿಐ ಮುಖಂಡರಾದ ಡಾ| ಸಿದ್ಧನಗೌಡ ಪಾಟೀಲ್‌, ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ಇದೊಂದು ಅತ್ಯಂತ ಹೇಯ ಕೃತ್ಯ, ಅಭಿವ್ಯಕ್ತಿ ಸ್ವಾತಂತ್ರ ಹರಣಮಾಡುವ ಯತ್ನ. ಇಂತಹ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದರು. ಕೋಮು ಸೌಹಾರ್ದ ವೇದಿಕೆಯ ಕೆ.ಎಲ್‌. ಅಶೋಕ್‌ ಮಾತನಾಡಿ, ನಾವು ಗೂಂಡಾ ಸಂಸ್ಕೃತಿಯಿಂದ ಬಂದವರಲ್ಲ.

ನಾವು ಕಾನೂನು ನಂಬಿ ಜೀವನ ನಡೆಸುವವರು. ಯೋಗೀಸ್‌ ಮಾಸ್ಟರ್‌ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಸಹ ದಾವಣಗೆರೆಯ ಕಾರ್ಯಕ್ರಮಕ್ಕೆ ಬಂದಾಗ ಅವರ ಮೇಲೆ ಹಲ್ಲೆಮಾಡಲು ಮುಂದಾಗಿದ್ದರು. ಆಗ ನಮ್ಮ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು.

ಇದು ಗೊತ್ತಿದ್ದು ಪೊಲೀಸರು ಸೂಕ್ತ ಭದ್ರತೆ ಒದಗಿಸದಿರುವುದು ಬೇಸರದ ಸಂಗತಿ ಎಂದರು. ಆಮ್‌ ಆದ್ಮಿ ಪಕ್ಷದ ಕೆ. ರಾಘವೇಂದ್ರ, ನಗರಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ರೈತ ಸಂಘದ ಬಲ್ಲೂರು ರವಿಕುಮಾರ್‌, ಆವರಗೆರೆ ರುದ್ರಮುನಿ, ಅರುಣಕುಮಾರ್‌ ಕುರುಡಿ, ಮಾನವ ಬಂಧುತ್ವ ವೇದಿಕೆಯ ರಾಘು ದೊಡ್ಮನಿ,

ಸಿಪಿಐ ಎಂನ ಕೆ.ಎಲ್‌. ಭಟ್‌, ವಕೀಲ ಅನೀಸ್‌ ಪಾಷ, ಮುಖಂಡರಾದ ಐರಣಿ ಚಂದ್ರು, ಟಿ.ವಿ. ರೇಣುಕಮ್ಮ, ಉಷಾರಾಣಿ, ಹೆಗ್ಗೆರೆ ರಂಗಪ್ಪ, ಇ. ಶ್ರೀನಿವಾಸ್‌, ಕೆ. ಮಹಾಂತೇಶ್‌, ಕೋಳಿ ಇಬ್ರಾಹಿಂ, ಟಿ. ಅಜರ್‌, ಮಲ್ಲಿಗೆ ಸೇರಿದಂತೆ ವಿವಿಧ ಪ್ರಗತಿ ಪರ, ದಲಿತ ಪರ, ರೈಪರ ಸಂಘಟನೆ ಮುಖಂಡರು  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.