ಶೌಚಾಲಯ ಸೌಲಭ್ಯ ಕಲ್ಪಿಸಿ
Team Udayavani, Jul 18, 2017, 1:43 PM IST
ದಾವಣಗೆರೆ: ಕೊಳಗೇರಿಯಲ್ಲಿ ಶೌಚಾಲಯ ಸೌಲಭ್ಯ ಒದಗಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ, ಸಾವಿತ್ರಿ ಬಾ ಫುಲೆ
ಸಂಘಟನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ 15ನೇ ವಾರ್ಡ್‌ನ ಭಾರತ್ ಕಾಲೋನಿ 1ನೇ ಕ್ರಾಸ್ ಕುಂಬಾರ ಓಣಿ ಪಕ್ಕದಲ್ಲಿರುವ 40ಕ್ಕೂ
ಹೆಚ್ಚು ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಹಾಗಾಗಿ ಇಲ್ಲಿನ ಜನರು ಈಗಲೂ ಬಹಿರ್ದೆಸೆಗೆ ಬಯಲಿಗೆ ಹೋಗಬೇಕಿದೆ.
ಬಯಲು ಶೌಚಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಮಹಿಳೆಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ರಾತ್ರಿ ಆಗುವರೆಗೆ ಕಾಯಬೇಕಾಗುತ್ತದೆ. ವಯಸ್ಕ ಹೆಣ್ಣು ಮಕ್ಕಳ ಸ್ಥಿತಿಯ ಬಗ್ಗೆ ಹೇಳುವಂತೆಯೇ ಇಲ್ಲ ಎಂದು ಪ್ರತಿಭಟನಾಕಾರರು ಅಳಲು
ತೋಡಿಕೊಂಡರು.
ನಗರಪಾಲಿಕೆ 7ನೇ ವಾರ್ಡ್ ವ್ಯಾಪ್ತಿಯ ಬಾಷಾನಗರ 2ನೇ ಕ್ರಾಸ್ ರುದ್ರಭೂಮಿ ಪಕ್ಕದಲ್ಲಿರುವ ಅನೇಕ ಮನೆಗಳಿಗೆ
ಶೌಚಾಲಯ ವ್ಯವಸ್ಥೆ ಇಲ್ಲ. ಇಲ್ಲಿನ ಹೆಣ್ಣು ಮಕ್ಕಳು ಬಯಲು ಶೌಚಾಲಯಕ್ಕೆ ಹೋಗಲು ಭಯಪಡುತ್ತಾರೆ. ಶೌಚಕ್ಕೆ ಹೋಗುವ
ಹೆಣ್ಣು ಮಕ್ಕಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು. ಶೌಚಕ್ಕೆ ಕುಳಿತವರ ಮೇಲೆ ಕಲ್ಲು ಎಸೆಯುವುದು ಸಹ ನಡೆಯುತ್ತದೆ
ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಎಲ್ಲಾ ಕಡೆ ರಸ್ತೆ ಮಾಡಲಾಗುತ್ತಿದೆ. ಮಹಿಳೆಯರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆ ದೂರ
ಮಾಡುವ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿತರು ಗಮನ ಹರಿಸಿಲ್ಲ. ಮೊದಲು ಭಾರತ್ ಕಾಲೋನಿ 1ನೇ ಕ್ರಾಸ್ ಕುಂಬಾರ
ಓಣಿ, ಬಾಷಾನಗರ 2ನೇ ಕ್ರಾಸ್ ರುದ್ರಭೂಮಿ ಪಕ್ಕದ ನಿವಾಸಿಗಳಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊಳಗೇರಿಯಲ್ಲಿ ಶೌಚಾಲಯ ವ್ಯವಸ್ಥೆಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಸಲ್ಲಿಸಿ, ಹೋರಾಟ ನಡೆಸಲಾಗಿದೆ.
ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಚೆಗೆ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ ಒಳಗೆ ಜಿಲ್ಲೆಯನ್ನು ಬಹಿರ್ದೆಸೆಮುಕ್ತ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಸಂಕಲ್ಪ ಮಾಡಲಾಗಿದೆ. ಬಹಿರ್ದೆಸೆಮುಕ್ತ ಜಿಲ್ಲೆಯಾಗಬೇಕಾದಲ್ಲಿ ದಾವಣಗೆರೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಶೌಚಾಲಯ ಸೌಲಭ್ಯದ ಇಲ್ಲದ ಕಡೆ ಶೌಚಾಲಯ ವ್ಯವಸ್ಥೆ ಮಾಡಬೇಕು. ಮಹಿಳೆಯರ ಕಷ್ಟ ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕ ಯಲ್ಲಮ್ಮ ಹಾವೇರಿ, ಪುಷ್ಪಮ್ಮ, ಹುಲುಗಮ್ಮ, ಪಾರ್ವತಿ, ಎಚ್. ಶಂಕರ್,
ಎಂ. ಬಸವರಾಜ್, ಶಬೀºರ್, ಗಂಗಮ್ಮ, ಸಿ. ರೇಖಾ, ಹೊಳಿಯಮ್ಮ, ಜಯಂತಿ, ಜಯಂತಿ, ಕೆ. ಹನುಮಂತಪ್ಪ, ಶಾಂತಮ್ಮ, ಗೀತಮ್ಮ, ಚಂದ್ರಮ್ಮ, ವಸಂತಮ್ಮ, ರಂಜಿತಾ, ಬಸಪ್ಪ, ರುದ್ರಗೌಡ, ಚಂದ್ರಪ್ಪ, ಸಂತೋಷ್‌ನಾಯ್ಕ, ಸರೋಜಾ, ನಿರ್ಮಲ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.