![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 11, 2020, 6:48 PM IST
ಹರಿಹರ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಬೆಳ್ಳೂಡಿ-ರಾಮತೀರ್ಥ ನಡುವಿನ ಸೂಳೆಕೆರೆ ಹಳ್ಳ ಉಕ್ಕಿ ಹರಿದಿದ್ದು, ಸೇತುವೆಯ ಒಂದು ಬದಿಯ ರಕ್ಷಣಾಗೋಡೆ(ಎಂಬ್ಯಾಕ್‌ವೆುಂಟ್) ಕಿತ್ತು ಹೋಗಿ ರಸ್ತೆ ಸಂಪರ್ಕಕಡಿತಗೊಂಡಿದೆ.
ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಬುಧವಾರ ಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿತ್ತು. ಸೇತುವೆ ಮೇಲ್ಭಾಗದಲ್ಲಿನೀರು ಹರಿಯುತ್ತಿತ್ತು. ಗುರುವಾರ ಸೇತುವೆ ಪಕ್ಕದ ರಕ್ಷಣಾಗೋಡೆಯನ್ನು ಹಳ್ಳದ ನೀರು ಆಪೋàಶನ ತೆಗೆದುಕೊಂಡಿದೆ.ಇದರಿಂದಾಗಿಎರಡೂ ಬದಿಯ ಜಮೀನುಗಳಿಗೆ ಹೋಗಿ ಬರುವ ರೈತರಿಗೆ ತೊಂದರೆಯಾಗಿದೆ. ಬೆಳ್ಳೂಡಿ, ರಾಮತೀರ್ಥ, ನಾಗೇನಹಳ್ಳಿ, ಭಾನುವಳ್ಳಿ ಹಾಗೂ ಇತರೆ ಗ್ರಾಮಗಳ ಜನರು ಹರಿಹರಕ್ಕೆ ಬಂದು ಹೋಗಲು ಈಗ ಕಷ್ಟಕರವಾಗಿದೆ. ಕಳೆದ ವರ್ಷದ ಮಳೆಗೆ ಇದೇ ರಕ್ಷಣಾಗೋಡೆ ಹರಿದು ಹೋಗಿತ್ತು.ಜಿಪಂ ಇಂಜಿನಿಯರಿಂಗ್ ಉಪ ವಿಭಾಗದಿಂದ 5.50 ಲಕ್ಷರೂ. ವೆಚ್ಚದಲ್ಲಿ ರಕ್ಷಣಾ ಗೋಡೆಯ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು.
ಜಿಪಂ ಇಂಜಿನಿಯರಿಂಗ್ ಉಪ ವಿಭಾಗದಿಂದ ಮಾಡಿರುವ ಕಾಮಗಾರಿ ಕಳಪೆ ಎಂಬುದು ಸಾಬೀತಾಗಿದೆ. ಕಳಪೆಕಾಮಗಾರಿಗೆ ಕಾರಣಕರ್ತ ಅಧಿಕಾರಿ, ಗುತ್ತಿಗೆದಾರರಿಂದ ಹಣ ವಸೂಲಿ ಮಾಡಬೇಕು ಎಂದು ರೈತ ಮುಖಂಡ ಭಾನುವಳ್ಳಿಯ ಪ್ರಕಾಶ್ ಎನ್. ಆಗ್ರಹಿಸಿದ್ದಾರೆ.
ಸೇತುವೆ ಕಿರಿದಾಗಿದ್ದು, ದೊಡ್ಡ ಸೇತುವೆ ನಿರ್ಮಿಸಬೇಕಿದೆ. ಹಳ್ಳದ ಜಾಗ ಒತ್ತುವರಿಯಾಗಿದೆಯೆ ಎಂಬುದು ಸೇರಿದಂತೆಇತರೆ ವಿಷಯಗಳ ಕುರಿತು ಸಮಗ್ರ ತನಿಖೆ ಮಾಡಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಪಂ ಹರಿಹರ ಉಪವಿಭಾಗದ ಎಇಇ ಡೊಂಕಪ್ಪ ತಿಳಿಸಿದರು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.