ರೆಡ್ಡಿ ವಿರುದ್ಧ ಸುಳ್ಳು ಜಾತಿನಿಂದನೆ ದೂರು: ಖಂಡನೆ
Team Udayavani, Apr 15, 2017, 1:24 PM IST
ಹರಪನಹಳ್ಳಿ: ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಅವರ ವಿರುದ್ಧ ಸುಳ್ಳು ಜಾತಿ ನಿಂದನೆ ಮೊಕದ್ದಮೆ ದಾಖಲಿಸುವ ಮೂಲಕ ಶೋಷಿತ ಸಮುದಾಯಗಳ ಹಿತ ಕಾಯುವ ಜಾತಿ ನಿಂದನೆ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ್ ದೂರಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.10ರಂದು ಜನ್ಮದಿನ ಆಚರಿಸಿಕೊಳ್ಳುವ ದಿನದಂದು ಬಳ್ಳಾರಿಯಲ್ಲಿ ಕರುಣಾಕರರೆಡ್ಡಿ ವಿರುದ್ಧ ಅಮಾಯಕರಿಂದ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಸಿದ್ದಾರೆ. ಆದರೆ ಏ.9 ಮತ್ತು 10ರಂದು ರೆಡ್ಡಿ ಅವರು ಹರಪನಹಳ್ಳಿ ಕ್ಷೇತ್ರದಲ್ಲಿದ್ದರು.
ಕರುಣಾಕರರೆಡ್ಡಿ ಬಳ್ಳಾರಿಯಲ್ಲಿ ಇಲ್ಲದ ಸಮಯದಲ್ಲಿ ಜಾತಿ ನಿಂದಿಸಿರುವುದಾಗಿ ದೂರು ದಾಖಲಿಸಿರುವುದು ಹಾಸ್ಯಾಸ್ಪದ ಎಂದರು. ಕಳೆದ ಫೆ.15,16,17ರಂದು ಕೂಡ ಕರುಣಾಕರರೆಡ್ಡಿ ಅವರು ಹರಪನಹಳ್ಳಿ ಕ್ಷೇತ್ರದಲ್ಲಿದ್ದಾಗ ಫೆ.15ರಂದು ಅವರ ವಿರುದ್ಧ ದೂರು ದಾಖಲಿಸಲು ತೆರಳಿದಾಗ ಪೊಲೀಸರು ಪರಿಶೀಲನೆ ನಡೆಸುವುದಾಗ ಕೇಳಿದ್ದರು.
ಆಗ ದೂರುದಾರರು ಎಸ್ಸಿ-ಎಸ್ಟಿ ಸೇಲ್‌ಗೆ ಹೋಗಿದ್ದರು. ಅವರು ಪರಿಶೀಲಿಸಿ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದಾಗ ಕರುಣಾಕರರೆಡ್ಡಿ ಬಳ್ಳಾರಿಯಲ್ಲಿ ಇಲ್ಲದ ಸಮಯದಲ್ಲಿ ಜಾತಿ ನಿಂದಿಸಿರುವುದಾಗಿ ದೂರು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವ ಹಿಂದೆ ರಾಜ್ಯಮಟ್ಟದ ನಾಯಕರೊಬ್ಬರಿದ್ದು, ದೊಡ್ಡವರಿಗೆ ಇಂತಹ ಸಣ್ಣತನ ಶೋಭೆಯಲ್ಲ ಎಂದು ತಿಳಿಸಿದರು.
ಕರುಣಾಕರರೆಡ್ಡಿ ಅವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ. ಯಾರಿಗೂ ಅವಾಚ್ಚ ಶಬ್ದಗಳಿಂದ ನಿಂದಿಸಿರುವುದು ಅವರ ಇತಿಹಾಸದಲ್ಲಿಯೇ ಇಲ್ಲ. ರಾಜಕಾರಣದ ಪಿತೂರಿಯಿಂದ ಇಂತಹ ಪ್ರಕರಣ ದಾಖಲಿಸಲಾಗಿದೆ. ಕ್ಷೇತ್ರದಲ್ಲಿ ಎಸ್ಟಿ-ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ತಲಾ 1 ಕೋಟಿರೂ ವೆಚ್ಚದಲ್ಲಿ ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನ ನಿರ್ಮಿಸಿದ್ದಾರೆ.
ದಲಿತ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ, ಆಶ್ರಯ ಮನೆ ಕೊಟ್ಟಿದ್ದಾರೆ. ಇಂತವರು ಜಾತಿ ನಿಂದಿಸಲು ಸಾಧ್ಯವೇ ಇಲ್ಲ. ರಾಜಕಾರಣದ ದ್ವೇಷ ತೀರಿಸಿಕೊಳ್ಳಲು ದೊಡ್ಡ ಮನುಷ್ಯರು ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಆ ನಾಯಕನ ಹೆಸರು ಬಹಿರಂಗಪಡಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಆರ್.ಲೋಕೇಶ್ ಮಾತನಾಡಿ, ದಲಿತರು, ಹಿಂದುಳಿದವರ, ಅಲ್ಪಸಂಖ್ಯಾತರ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಕರುಣಾಕರರೆಡ್ಡಿ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ.
ಕರುಣಾಕರರೆಡ್ಡಿ ಅವರ ಆಡಳಿತಾವಧಿಧಿಯಲ್ಲಿ ಕ್ಷೇತ್ರದಲ್ಲಿ ಜಾತಿ ನಿಂದನೆ ಪ್ರಕರಣಗಳು ದಾಖಲಾಗದಂತೆ ನೋಡಿಕೊಂಡು ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಿದ್ದರು ಎಂದು ತಿಳಿಸಿದರು. ಬಿಜೆಪಿ ಉಪಾಧ್ಯಕ್ಷ ಸಣ್ಣಹಾಲಪ್ಪ, ಪುರಸಭೆ ಸದಸ್ಯರಾದ ದುರುಗಪ್ಪ, ಜಯಮ್ಮ, ಕೃಷ್ಣ, ಮಾದಿಗ ಸಮಾಜದ ಮುಖಂಡರಾದ ನೀಲಗುಂದ ಹನುಮಂತ, ಹುಲಿಕಟ್ಟಿ ಕೋಟ್ರಪ್ಪ, ಮ್ಯಾಕಿ ದುರುಗಪ್ಪ, ಲಕ್ಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.