ಪ್ರಾದೇಶಿಕ ನಾಯಕತ್ವ ಅನಿವಾರ್ಯ
Team Udayavani, Sep 21, 2021, 5:43 PM IST
ದಾವಣಗೆರೆ: ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ಪಕ್ಷ ಸಂಘಟನೆ ಜತೆಗೆ ಪ್ರಾದೇಶಿಕ ನಾಯಕತ್ವ ವಿಚಾರದ ಮೇಲೆಯೂ ಪ್ರಖರ ಬೆಳಕು ಚೆಲ್ಲಿದೆ. ರಾಜ್ಯ ನಾಯಕರು ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ಇದೆ ಎನ್ನುತ್ತಲೇ ಸ್ಥಳೀಯ ನಾಯಕತ್ವಕ್ಕೆ ಮಹತ್ವ ನೀಡುವುದು ಅನಿವಾರ್ಯ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ.
ಬಿಜೆಪಿಯಲ್ಲಿ ಎಲ್ಲದಕ್ಕೂ ಕೇಂದ್ರದ ನಾಯಕರ ಜತೆ ಚರ್ಚಿಸಿಯೇ ಮುಂದಿನ ಹೆಜ್ಜೆ ಇರಿಸ ಬೇಕಾದ - ನಿರ್ಧಾರ ಕೈಗೊಳ್ಳ ಬೇಕಾದ ವ್ಯವಸ್ಥೆ ಇದೆ. ಆದ್ದರಿಂದ ರಾಜ್ಯದ ಆಡಳಿತ ಹಾಗೂ ರಾಜಕಾರಣದಲ್ಲಿ ಪ್ರಾದೇಶಿಕ ನಾಯಕರಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯ ವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿಯೇ ರಾಜ್ಯ ನಾಯಕರು ಕಾರ್ಯಕಾರಿಣಿ ಮೂಲಕ ಪರೋಕ್ಷವಾಗಿ ಪ್ರಾದೇಶಿಕ ನಾಯಕತ್ವದ ಮಹತ್ವ ಎಷ್ಟಿದೆ ಎಂಬುದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎಂಬ ುದು ರಾಜಕೀಯ ವಿಶ್ಲೇಷಕರ ಅಭಿಮತ.
“ರಾಜಕಾರಣ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾವನೆಗಳಿಗೆ ಪ್ರಾದೇಶಿಕ ನಾಯಕತ್ವದ ಮೂಲಕ ಮನ್ನಣೆ ನೀಡಬೇಕು. ಆಗ ಮಾತ್ರ ಯಾವುದೇ ಪಕ್ಷ ಅಲ್ಲಿ ತನ್ನ ಸಂಘಟನೆ, ಬಲ ಹೆಚ್ಚಿಸಿಕೊಂಡು ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪ್ರಾದೇಶಿಕ ನಾಯಕತ್ವದ ಮಹತ್ವವನ್ನು ಸಭೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಾಜಿ ಸಿಎಂ ಯಡಿಯೂರಪ್ಪ ಸಹ “ಕೇವಲ ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ವಿಧಾನಸಭೆ ಗೆಲ್ಲಲಾಗದು. ಇದರ ಜತೆಗೆ ಸರ್ಕಾರದ ಕಾರ್ಯಕ್ರಮ, ಎಲ್ಲ ವರ್ಗದ ಜನರನ್ನು ಸೆಳೆದು ಸಂಘಟನೆ ಮಾಡುವುದು ಹಾಗೂ ಜನರ ಭಾವನೆಗಳಿಗೆ ಸ್ಪಂದಿಸುವುದು ಮುಖ್ಯ’ ಎಂದಿದ್ದಾರೆ. ತನ್ಮೂಲಕ ಇಬ್ಬರೂ ನಾಯಕರು ಪ್ರಾದೇಶಿಕ ನಾಯಕತ್ವಕ್ಕೆ ಆದ್ಯತೆ ನೀಡುವುದು ಅನಿವಾರ್ಯ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸರ್ದಾರ್ಜಿಖಲಿಸ್ತಾನಿ,ನಾವು ಪಾಕಿಸ್ತಾನಿ,ಕೇವಲ ಬಿಜೆಪಿ ಮಾತ್ರ ಹಿಂದೂಸ್ತಾನಿ|ಮೆಹಬೂಬಾ ಮುಫ್ತಿ
ಭಾವನಾತ್ಮಕ ಸಂಬಂಧಕ್ಕೆ ಬೆಲೆ
ಎಲ್ಲ ರಾಜ್ಯಗಳಲ್ಲಿಯೂ ಅವರದ್ದೇ ಆದ ಆಶೋತ್ತರಗಳು ಇರುತ್ತವೆ. ಜನರ ಭಾವನೆಗಳೊಂದಿಗೆ ಸ್ಥಳೀಯ ನಾಯಕರ ಸಂಬಂಧ ಇರುತ್ತದೆ. ನಾಡಿನ ಭಾಷೆ, ನೆಲ, ಜಲದೊಂದಿಗೆ ಭಾವನಾತ್ಮಕ ಸಂಬಂಧ ಇರುವ ನಾಯಕತ್ವಕ್ಕೆ ಮಹತ್ವ ಕೊಡಬೇಕು. ಪ್ರಾದೇಶಿಕ ನಾಯಕತ್ವಕ್ಕೆ ಪಕ್ಷ ಬೆಲೆ ನೀಡುತ್ತದೆ ಎಂಬುದಕ್ಕೆ ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿ, ನಾಯಕತ್ವ ಕೊಟ್ಟ ಯಡಿಯೂರಪ್ಪ ಅವರೇ ಸಾಕ್ಷಿ ಎಂದು ಹೇಳುವ ಮೂಲಕ ಸಿಎಂ ಬೊಮ್ಮಾಯಿ, ಪರೋಕ್ಷವಾಗಿ ಪ್ರಾದೇಶಿಕ ನಾಯಕತ್ವವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದು ಸೂಕ್ತವಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.